ಮೂಡಲಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಚರಿಸಿದ ಹುತಾತ್ಮ ದಿನಾಚಣೆಯಲ್ಲಿ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಮತ್ತು ಸಿಬ್ಬಂದಿ ಗೌರವ ಸಲ್ಲಿಸಿದರು ಹುತಾತ್ಮರು ಸರ್ವಕಾಲಿಕ ಸ್ಮರಣೀಯರು
ಮೂಡಲಗಿ: ‘ಭಾರತ ದೇಶದ ಸ್ವಾತಂತ್ಯಕ್ಕಾಗಿ ಅನೇಕ ಮಹನೀಯರು ಹುತಾತ್ಮರಾಗಿದ್ದು, ಅವರ ಪರಿಶ್ರಮ ಮತ್ತು ತ್ಯಾಗವು ಸರ್ವಕಾಲಿಕ ಸ್ಮರಣೀಯವಾಗಿದೆ’ ಎಂದು ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಚರಿಸಿದ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ರಾಷ್ಟ್ರನಾಯಕರ ಜೀವನ ಚರಿತ್ರೆಗಳನ್ನು ಓದಿ ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಪ್ರೊ. ಸಂಗಮೇಶ ಗುಜಗೊಂಡ ಪ್ರಾಸ್ತಾವಿಕ ಮಾತನಾಡಿದರು.
ಒಂದು ನಿಮಿಷ ಮೌನ ಆಚರಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಪ್ರೊ. ಜಿ. ಸಿದ್ರಾಮ್‍ರಡ್ಡಿ, ಡಾ. ಬಿ.ಸಿ. ಪಾಟೀಲ, ಪ್ರೊ.ಎಸ್.ಜಿ. ನಾಯ್ಕ್, ಪ್ರೊ. ಎಸ್.ಬಿ. ಖೋತ, ಪ್ರೊ. ಎಸ್.ಎ. ಶಾಸ್ತ್ರೀಮಠ, ಪ್ರೊ. ಎಸ್.ಸಿ. ಮಂಟೂರ ಇದ್ದರು.