ಮೂಡಲಗಿ: ಕೊರೋನಾ ವೈರಸ್ ಹಿನ್ನೆಲೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ವೈರಸ್ ಹರಡದಂತೆ ತಟೆಗಟ್ಟಲು ವೈದ್ಯಾಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ಹಾಗೂ ಇನ್ನೂ ಕೆಲವು ಅಧಿಕಾರಿಗಳು ಸತತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸರಕಾರದಿಂದ ಸೌಲಭ್ಯಗಳನ್ನು ನೀಡಿದೆ. ಆದರೆ ಪತ್ರಕರ್ತರಿಗೆ ಯಾಕೆ ಯಾವುದೇ ಸೌಲಭ್ಯ ನೀಡಿಲ್ಲಾ ಎಂದು ಸರಕಾರ ವಿರುದ್ದ ಡಿಕೆ ಶಿವಕುಮಾರ ಫೌಂಡೇಷನ್ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಾಥ ಕರಿಹೊಳಿ ಕಿಡಿಕಾರಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಪತ್ರಕರ್ತರು ಸಹ ಈ ಕೊರೋನಾ ವೈರಸ್ ಬಗ್ಗೆ ಸಹ ವಿಸ್ತಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಹಾಗೂ ಪ್ರತಿನಿತ್ಯ ನಡೆಯುವ ಘಟನೆಗಳ ಬಗ್ಗೆ ಸುದ್ದಿಗಳನ್ನು ಬೀತ್ತರಿಸುವ ಮೂಲಕ ಜನರಲ್ಲಿ ಜಾಗೃತೆಯನ್ನು ಮೂಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರಕಾರ ಮಾತ್ರ ಯಾವುದೇ ತರನಾದ ಸೌಲಭ್ಯಗಳನ್ನು ನೀಡಿಲ್ಲಾ ಎಂದು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಸೋಮವಾರರಂದು ವರದಿಗೆ ತೆರಳಿದ ಪಬ್ಲಿಕ್ ಟಿವಿ ವರದಿಗಾರನ ನಿಧನಕ್ಕೆ ಸಂತಾಪ ಸೂಚಿಸಿದರು. ಆದಷ್ಟೂ ಬೇಗನೇ ಸರಕಾರ ಎಚ್ಚೆತ್ತಗೊಂಡು ಪತ್ರಕರ್ತರಿಗೆ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ ಫೌಂಡೇಷನ್ ಬೆಳಗಾವಿ ಜಿಲ್ಲಾ ಘಟಕದ ಸದಸ್ಯರಾದ ಸಿದ್ದಗೌಡ ಕರಿಹೊಳಿ ಇದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …