ಬೆಟಗೇರಿ: ಮಕ್ಕಳ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ದೇಶದ ಭವಿಷ್ಯ ಗಟ್ಟಿಯಾಗಿರುತ್ತೆದೆ. 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪಾಲಕರು ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ ಎಂದು ಗೋಕಾಕ ತಾಲೂಕಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗ್ರಾಮದಲ್ಲಿ ರವಿವಾರ ಜ.31 ರಂದು ನಡೆದ ಪೋಲಿಯೋ ಹನಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾರತ ಪೋಲಿಯೋ ಮುಕ್ತ ದೇಶವಾಗಲು ತಾವೆಲ್ಲರೂ ಕೈ ಜೋಡಿಸಬೇಕು ಎಂದರು.
ಸ್ಥಳೀಯ ಪ್ರಮುಖ ಸ್ಥಳಗಳಲ್ಲಿ ಪೋಲಿಯೋ ಲಸಿಕೆ ಹಾಕುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಅಲ್ಲದೇ ಕಬ್ಬು ಕಟಾವು ಮಾಡಲಿಕ್ಕೆ ಬೇರೆ ರಾಜ್ಯ, ಜಿಲ್ಲೆಯ ಕಡೆಗಳಿಂದ ಗ್ರಾಮಕ್ಕೆ ಬಂದಿರುವ ಕೂಲಿ ಕಾರ್ಮಿಕ ಮಕ್ಕಳಿಗೂ ಸಹ ಪೋಲಿಯೋ ಹನಿ ಹಾಕಲಾಯಿತು ಎಂದು ಡಾ.ರಾಜೇಶ್ವರಿ ಹಿರೇಮಠ ತಿಳಿಸಿದರು.
ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಹಿಳೆಯರು, ಮಕ್ಕಳು, ಇತರರು ಇದ್ದರು.
