Breaking News
Home / Recent Posts / ತಪಸಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ತಪಸಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Spread the love

ಬೆಟಗೇರಿ:ಸಮೀಪದ ತಪಸಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಸೋಮವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸವಿತಾ ಲಕ್ಷ್ಮಣ ಹರಿಜನ, ಉಪಾಧ್ಯಕ್ಷರಾಗಿ ಫಕೀರಪ್ಪ ಮಹಾದೇವ ಸಿದ್ದನ್ನವರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸ್ಥಳೀಯ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಸ್ಥಾನ ಮಿಸಲಾತಿ ಇದ್ದ ಕಾರಣ ಈ ಎರಡು ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಉಭಯ ಸ್ಥಾನದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಸಿ.ಪತ್ತಾರ ತಿಳಿಸಿದ್ದಾರೆ.
ಈ ವೇಳೆ ಧುರೀಣ ರಾಯಪ್ಪ ತಿರಕನ್ನವರ ಮಾತನಾಡಿ, ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರೂ ಒಂದಾಗಿ ಗ್ರಾಮದ ಸಮಗ್ರ ಅಭಿವೃದ್ಧಿಯತ್ತ ಗಮನಹರಿಸಿ, ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದರು.
ಗ್ರಾಪಂ ಆಡಳಿತಾಧಿಕಾರಿ ವಿ.ಸಿ.ಪತ್ತಾರ ಹಾಗೂ ನೂತನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಹೂ ಮಾಲೆ ಹಾಕಿ ಸತ್ಕರಿಸಲಾಯಿತು.
ಪಿಡಿಒ ಪರಶುರಾಮ ಇಟಗೌಡ್ರ, ಸಿದ್ದು ಸುಳ್ಳನ್ನವರ, ಮಾರುತಿ ಬಣಜಗೇರ, ಲಂಕೆಪ್ಪ ಯರಗುದ್ರಿ, ಶಂಕರ ಭರಮನ್ನವರ, ವಿಠಲ ಕೌಜಲಗಿ, ಫಕೀರಪ್ಪ ಮಲ್ದೂರ, ಬಾಳಪ್ಪ ನಾಯ್ಕ, ಲಕ್ಷ್ಮಣ ಅರಬನ್ನವರ ಸೇರಿದಂತೆ ನೂತನ ಗ್ರಾಪಂ ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು, ಇತರರು ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ