ಮೂಡಲಗಿ : ವಾಹನಗಳಿಂದ ಅಪಘಾತಗಳು ಹೆಚ್ಚುತ್ತಿದ್ದು ಸವಾರರು ಜಾಗರುಕತೆಯಿಂದ ವಾಹನಗಳನ್ನು ಚಲಾಯಿಸಬೇಕು. ಮಧ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಮನವಿ ಮಾಡುತ್ತಾ ಮೋಬೈಲ್‍ನಲ್ಲಿ ಮಾತನಾಡುತ್ತಾ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವುದರಿಂದ ನಮ್ಮ ಸಾವಿಗೆ ನಾವೇ ಮಾರ್ಗ ತೋರಿಸಿದಂತೆ ಆಗುತ್ತದೆ ಎಂದು ಗೋಕಕಾದ ಹಿರಿಯ ಮೋಟಾರ ವಾಹನ ನೀರಿಕ್ಷಕ ಎಸ್.ಆರ್. ಮರಲಿಂಗಣ್ಣವರ ಹೇಳಿದರು.
ಅವರು ಮೂಡಲಗಿ ಪೋಲಿಸ ಠಾಣೆ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಮತ್ತು ಮಂಜುನಾಥ ಮೋಟಾರ ಡ್ರೈವ್ಹಿಂಗ್ ಸೂಲ್ಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತ ಕಡ್ಡಾಯವಾಗಿ ಹೆಲ್ಮೇಟ ಧರಿಸಿ, ನಿಲುಗಡೆ ಸ್ಥಳದಲ್ಲಿ ಮಾತ್ರ ವಾಹನ ನಿಲ್ಲಿಸಿ ಪೋಷಕರು ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡ ಬೇಡಿ ನೀಡಿದರೆ ಶಿಕ್ಷಾರ್ಹ ಅಪರಾದವಾಗುತ್ತದೆ ಎಂದು ಹೇಳಿದರು.
ಸಿ.ಪಿ.ಐ. ವೆಂಕಟೇಶ ಮುರನಾಳ ಮಾತನಾಡುತ್ತ ಅಪಘಾತ ಸಂಭವಿಸಿದ ವೇಳೆ ಸಾರ್ವಜನಿಕರು ಮೊಬೈಲ್‍ನಲ್ಲಿ ಅಪಘಾತದ ಚಿತ್ರಗಳನ್ನು ಸೆರೆಹಿಡಿಯುವುದನ್ನು ಬಿಟ್ಟು ಗಾಯಾಳುಗಳ ಪ್ರಥಮ ಚಿಕಿತ್ಸೆಗೆ ಹೆಚ್ಚಿನ ಗಮನ ನೀಡುವುದರಿಂದ ಸಾವು ನೋವಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ಸಭೆಯ ಅಧ್ಯಕ್ಷ ಬಿ.ಬಿ. ಹಂದಿಗುಂದ ಮಾತನಾಡುತ್ತ ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಅರಿವು ಜನರಲ್ಲಿ ಮೂಡಬೇಕು ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅವನ ಕುಟುಂಬದ ಸದಸ್ಯರು ಅವಲಂಬಿತರಾಗಿರುತ್ತಾರೆಂಬ ಅರಿವು ನಮ್ಮಲ್ಲಿ ಇರಬೇಕು ಹಾಗೂ ವಾಹನಕ್ಕೆ ಸಂಭಂಧ ಪಟ್ಟ ಎಲ್ಲ ದಾಖಲಾತಿಗಳು ಸರಿಯಾಗಿರಬೇಕು ಎಂದರು. ಆರ್.ಟಿ.ಒ. ಕಛೇರಿ ಅದಿಕ್ಷಕರಾದ ಎಸ್.ಎಚ್.ಕರಿಗಾರ, ಸಂಸ್ಥೆಯ ಸಂಸ್ಥಾಪಕರಾದ ಎಲ್.ವಾಯ್. ಅಡಿಹುಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಶಿಧರ ಆರಾಧ್ಯ, ಅನಿತಾ ವಂಟಗೂಡಿ, ರಾಮಣ್ಣ ಮಂಟೂರ, ಮಂಜುನಾಥ ಕುಂಬಾರ, ಸುಭಾಸ ಗೊಡ್ಯಾಗೋಳ, ಹನಮಂತ ಕಂಕಣವಾಡಿ, ಚಂದ್ರಕಾಂತ ಪತ್ತಾರ, ಮಂಜುನಾಥ ರೆಳೇಕರ, ಸಚಿನ್ ಪತ್ತಾರ, ರಾಜು ಮನಮಿ, ಮಹಾಂತೇಶ ಬೆಳಕೊಡ, ಪರಶುರಾಮ ಕೊಡಗನೂರ ಮತ್ತು ಸಂಸ್ಥೆಯ ನೂರಾರೂ ಆರ್ಮಿ ಪೂರ್ವಭಾವಿ ತರಬೇತಿಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
Home / Recent Posts / ಅಪಘಾತಗಳು ಹೆಚ್ಚುತ್ತಿದ್ದು ಸವಾರರು ಜಾಗರುಕತೆಯಿಂದ ವಾಹನಗಳನ್ನು ಚಲಾಯಿಸಬೇಕು -ಹಿರಿಯ ಮೋಟಾರ ವಾಹನ ನೀರಿಕ್ಷಕ ಎಸ್.ಆರ್. ಮರಲಿಂಗಣ್ಣವರ
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …