ಹೊನಕುಪ್ಪಿಯಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ ಜಿಲೆಟಿನ್ ವಶ
ಮೂಡಲಗಿ: ತಾಲೂಕಿನ ಹೊನಕುಪ್ಪಿ ಗ್ರಾಮದ ಭೀಮಪ್ಪ ಬಸಪ್ಪ ಹೆಗಡೆ ಎಂಬುವರ ಜಮೀನದಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ ಜಿಲೆಟಿನ್ ಸ್ಪೋಟಕ್ ವಸ್ತುವನ್ನು ವಶ ಪಡಿಸಿಕೊಂಡ ಬಗ್ಗೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಹೊನಕುಪ್ಪಿ ಗ್ರಾಮದಲ್ಲಿ ಜೆಲಿಟಿನ್ ಸಂಗ್ರಹಹಿಸಿಟ್ಟಿದ ಗೋಲಬಾಂವಿಯ ಗೋಪಾಲ ಬ.ಸೋರಗಾಂವಿ, ಗಿರಿಮಲ್ಲಪ್ಪ ಬ.ಸಿದ್ದಾಪೂರ, ಬಬಲೇಶ್ವರ ಗ್ರಾಮದ ರಾಜೇಶ ಮೊ.ಬಡಿಗೇರ, ಹೊನಕುಪ್ಪಿಯ ಭೀಮಪ್ಪ ಬ.ಹೆಗಡೆ ಅವರನ್ನು ಜಿಲೆಟಿನ ಸ್ಪೋಟಕ ಪಾದಾರ್ಥಗಳನ್ನು ಸ್ಪೋಟಗೋಳಿಸಲು ಸಂಗ್ರಹಿಸಿಟ್ಟಿದ ಬಗ್ಗೆ ಖಚಿತ ಮಾಹಿತಿ ಮೇರಿಗೆ ಕುಲಗೋಡ ಪಿಎಸ್‍ಐ ಎಚ್.ಕೆ.ನೆರಳೆ ಮತ್ತು ಸಿಬ್ಬಂದಿಗಳಾದ ವ್ಹಿ.ಆರ್.ಗಲಬಿ, ಬಿ.ಬಿ.ಬಿರಾದಾರ, ಎಸ್.ಪಿ.ಮುಗ್ಗನ್ನವರ ಕೂಡಿಕೊಂಡು ದಾಳಿ ಮಾಡಿ ಸ್ಪೋಟಕ 158 ಜಿಲೆಟಿನ ಕಡ್ಡಿಗಳನ್ನು ಮತ್ತು ಮತ್ತು ವಿವಿಧ ಸಾಮಗ್ರಿಗಳನ್ನು ವಶ ಪಡಿಸಿಕೊಂಡು ದೂರು ದಾಖಲಿಸಿಕೊಂಡು ತಣಿಖೆ ಕೈಗೊಂಡ್ಡಿದ್ದಾರೆ. ಇನ್ನೋರ್ವ ಆರೋಪಿ ರಾಜೇಶ ಮೊ.ಬಡಿಗೇರ ಇತನ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ ಆರೋಪಿಗಾಗಿ ಬಲೆ ಬೀಸಿರುತ್ತಾರೆ.