ಬೆಟಗೇರಿ:ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಮೆಳವಂಕಿ ಗ್ರಾಮ ಸೇರಿದಂತೆ ಮೆಳವಂಕಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಸಮೀಪದ ಮೆಳವಂಕಿ ಗ್ರಾಮದ ಸಿದ್ಧಾರೂಢ ಮಠದ ಹತ್ತಿರ ಗರಡಿಮನೆ ನಿರ್ಮಾಣ ಕಾಮಗಾರಿಗೆ ಶನಿವಾರ ಫೆ.27ರಂದು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕ್ರೀಡಾ ಮತ್ತು ಯುವಜನಾ ಸೇವಾ ಇಲಾಖೆಯ ಸುಮಾರು 10 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಮೆಳವಂಕಿ ಗ್ರಾಮದಲ್ಲಿ ಗರಡಿಮನೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಸ್ಥಳೀಯ ಮಕ್ಕಳು, ಯುವಕರು ಗರಡಿಮನೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇಂದಿನ ಯುಗದಲ್ಲಿ ಆರೋಗ್ಯ ಸಂಪತ್ತಿಗಿಂತ ಇನ್ನೂಂದೂ ಸಂಪತ್ತಿಲ್ಲ, ಮಕ್ಕಳು ಮತ್ತು ಯುವಜನತೆ ಉತ್ತಮ ಶಾರೀರಿಕ ಸಧೃಡತೆ, ದುಶ್ಚಟಗಳಿಂದ ದೂರವಿರಲು ಗರಡಿಮನೆ ಮಹತ್ವದ ಸಾಧನವಾಗಿದೆ. ಸ್ಥಳೀಯ ಯುವಕರ ಹಾಗೂ ಹಿರಿಯ ನಾಗರಿಕರ ಬೇಡಿಕೆಯಂತೆ ಮೆಳವಂಕಿ ಗ್ರಾಮದಲ್ಲಿ ಗರಡಿಮನೆ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳಲಾಗಿದೆ ಎಂದು ಡಾ.ರಾಜೇಂದ್ರ ಸಣ್ಣಕ್ಕಿ ತಿಳಿಸಿದರು.
ಸ್ಥಳೀಯ ಮುಖಂಡರಾದ ಬಸನಗೌಡ ಪಾಟೀಲ, ಮಹಾದೇವ ಪತ್ತಾರ, ಸಿದ್ದಪ್ಪ ಹಂಜಿ, ಅಲ್ಲಪ್ಪ ಕಂಕಣವಾಡಿ, ಮುತ್ತೆಪ್ಪ ಹಡಗಿನಾಳ, ಈರಣ್ಣ ಬೀರನಗಡ್ಡಿ, ಮಹಾದೇವ ಕರಿಗಾರ, ಸತ್ತೆಪ್ಪ ಬಬಲಿ ಸೇರಿದಂತೆ ಗ್ರಾಪಂ ಹಾಲಿ ಮತ್ತು ಮಾಜಿ ಸದಸ್ಯರು, ರಾಜಕೀಯ ಮುಖಂಡರು, ಗಣ್ಯರು, ಯುವಕರು, ಸ್ಥಳೀಯರು, ಇತರರು ಇದ್ದರು.

?????????????????????????????????????????????????????????????????????????????????????????????????????????????????????????????????