ಮೂಡಲಗಿ : ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂಪ್ಪನವರು ಹಲವಾರು ಸಭೆ ಸಮಾರಂಭಗಳಲ್ಲಿ ಪಂಚಮಸಾಲಿ ಸಮಾಜದ ಋಣದ ಭಾರ ನನ್ನ ಮೇಲೆ ಬಹಳ ಇದೆ ಎಂದು ಹೇಳಿದ್ದಾರೆ ಹೇಳಿದ ಮಾತಿನಂತೆ ನಡೆಯಬೇಕೆಂದು ಮೂಡಲಗಿ ಪಂಚಮಸಾಲಿ ಯುವ ಮುಖಂಡ ಈಶ್ವರ ಢವಳೇಶ್ವರ ಹೇಳಿದರು.
ರವಿವಾರದಂದು ಪತ್ರಿಕಾ ಪ್ರಕಟಣೆ ನೀಡಿದ ಅವರು ಪಂಚಮಸಾಲಿ ಸಮಾಜದ ರೈತಾಪಿ, ಕೂಲಿ ಕಾರ್ಮಿಕರ, ಬಡವರ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ 2ಎ ಮೀಸಲಾತಿಯನ್ನು ಘೋಷಣೆ ಮಾಡಿ ನಿಮ್ಮ ಸರ್ಕಾರದ ಅವಧಿಯಲ್ಲಿ ಪಂಚಮಸಾಲಿ ಸಮಾಜದ ಋಣವನ್ನು ತೀರಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪಂಚಮಸಾಲಿ ಸಮಾಜದ ಜನರು 2ಎ ಮೀಸಲಾತಿಯನ್ನು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಪತ್ರಚಳುವಳಿ ಪ್ರಾರಂಭಿಸಬೇಕೆಂದು ಈಶ್ವರ ಢವಳೇಶ್ವರ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ