ವಿವಾದಿತ ಸಿಡಿ ಪ್ರಕರಣ ತನಿಖೆಗೆ ಆಗ್ರಹಿಸಿ ಕೌಜಲಗಿಯಲ್ಲಿ ಪ್ರತಿಭಟನೆ
ರಮೇಶ ಜಾರಕಿಹೊಳಿ ಅಭಿಮಾನಿಗಳು ಹಾಗೂ ಬೆಂಬಲಿಗರಿಂದ ರಸ್ತೆ ತಡೆ, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ.
ಗೋಕಾಕ: ರಮೇಶ ಜಾರಕಿಹೊಳಿ ಅವರ ಕೌಜಲಗಿ ಗ್ರಾಮದ ಅಭಿಮಾನಿ ಬಳಗ ಹಾಗೂ ಬೆಂಬಲಿಗರು ಗುರುವಾರದಂದು ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಕಂದಾಯ ನಿರೀಕ್ಷಕ ಎಮ್.ಆಯ್.ಮಠ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ರವಿವರ್ಮ ಚೌಕದಲ್ಲಿ ಸೇರಿದ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಟೈರ್ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ನಕಲಿ ಸಿಡಿ ಸೃಷ್ಟಿಕೃತ ದಿನೇಶ ಕಲ್ಲಹಳ್ಳಿ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಂತರ ನಾಡಕಚೇರಿಗೆ ತೆರಳಿ ಕಂದಾಯ ನಿರೀಕ್ಷಕರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯರಾದ ಡಾ: ರಾಜೇಂದ್ರ ಸಣ್ಣಕ್ಕಿ, ಪರಮೇಶ್ವರ ಹೊಸಮನಿ, ತಾ.ಪಂ ಸದಸ್ಯ ಎಸ್.ವಾಯ್.ಹಿರೇಮೇತ್ರಿ, ಮುಖಂಡರಾದ ಎ.ಲ್.ದಳವಾಯಿ, ಎಸ್.ಬಿ.ಕೌಜಲಗಿ, ಶಿವು ಲೋಕನ್ನವರ, ಎಮ್.ಆಯ್.ಪಟ್ಟಣಶೆಟ್ಟಿ, ಎಮ್.ಎನ್.ಶಿವನಮಾರಿ, ಜಗದೀಶ ಭೋವಿ, ನೀಲಪ್ಪ ಕೇವಟಿ, ರಾಯಪ್ಪ ಬಳೋಲದಾರ, ವೆಂಕಟೇಶ ದಳವಾಯಿ, ರಾಮಪ್ಪ ಈಟಿ, ಬಸು ಜೋಗಿ, ಸಿದ್ದಪ್ಪ ಹಳ್ಳೂರ, ಯಲ್ಲಪ್ಪ ದಾನನ್ನವರ, ಅಶೋಕ ಪೂಜೇರಿ ಅಶೋಕ ಹೊಸಮನಿ, ಸೈದುಸಾಬ ನಾಗರಾರ್ಚಿ ಭೀಮಶಿ ಉದ್ದಪ್ಪನವರ, ಈರಪಣ್ಣಾ ಬಿಸಗುಪ್ಪಿ, ರಮೇಶ ದಳವಾಯಿ ಸೇರಿದಂತೆ ಗ್ರಾ.ಪಂ ಸದಸ್ಯರು, ಪಿಕೆಪಿಎಸ್ ಸದಸ್ಯರು ಸೇರಿದಂತೆ ಅನೇಕರು ಇದ್ದರು.