ರಮೇಶ ಜಾರಕಿಹೊಳಿ ನಕಲಿ ಸಿಡಿ ಬಗ್ಗೆ ಸಮಗ್ರ ತನಿಖೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ
ಕುಲಗೋಡ: ಎರಡು ದಿನಗಳಿಂದ ರಾಜ್ಯ ರಾಜ್ಯಕಾರಣದಲ್ಲಿ ಸಂಚಲನ ಮೂಡಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಪ್ರಕರಣ ಸಂಪೂರ್ಣ ಸುಳ್ಳಾಗಿದ್ದು , ನಕಲಿ ಸಿಡಿ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಿಬಿಐಗೆ ವಹಿಸುವಂತೆ ಗ್ರಾಮ ಮುಖಂಡರು ಆಗ್ರಹಿಸಿ ಮನವಿ ನೀಡಿದರು.
ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ರಮೇಶ ಜಾರಕಿಹೊಳಿ ಅಭಿಮಾನಿ ಬಳಗ ಹಾಗೂ ಗ್ರಾಪಂ ಅಧ್ಯಕ್ಷ\ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು, ಜನಪ್ರತಿನಿಧಿಗಳು, ಗ್ರಾಮ ಮುಖಂಡರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಸ್ಥಳಿಯ ಗ್ರಾಪಂ ಪಿಡಿಓ ಇವರಿಗೆ ಮನವಿ ನೀಡಿ
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬಗ್ಗೆ ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿರುವ ಸಿಡಿ ನಕಲಿಯಾಗಿದ್ದು. ಮಾನ್ಯ ರಮೇಶ ಜಾರಕಿಹೊಳಿ ಅವರ ಪ್ರಭಾವವನ್ನು ಕುಗ್ಗಿಸಲು ಸೆಕ್ಸ್ ವಿಡಿಯೋ ಚಿತ್ರಗಳನ್ನು ಎಡಿಟ್ ಮಾಡಿ ರಮೇಶ ಜಾರಕಿಹೊಳಿ ಅವರ ವರ್ಚಸ್ಸಿಗೆ ಮಸಿ ಬಳೆಯಲು ಸಂಚು ಮಾಡಲಾಗಿದೆ. ಇದು ಸಂಪೂರ್ಣ ನಕಲಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನ್ಯ ರಮೇಶ ಜಾರಕಿಹೊಳಿ ಅವರ ಜನಪ್ರೀಯತೆ ಸಹಿಸದ ಕೆಲ ವಿರೋಧಿಗಳು ಷಡ್ಯಂತ್ರ ರೂಪಿಸಿದ್ದು, ಸಿಡಿ ಬಗ್ಗೆ ಸತ್ಯ ಸಂಗತಿ ಹೊರಬರಬೇಕು, ಆಗ ಮಾತ್ರ ಪ್ರಕರಣದ ಕುರಿತು ನೈಜ ಸಂಗತಿ ಹೊರಬಿಳಲಿದ್ದು ನಕಲಿ ಸಿಡಿ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಮನವಿ ನೀಡಿದ್ದರು.
ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಮ್.ಎಸ್ ಅಧ್ಯಕ್ಷ ಅಶೋಕ ನಾಯಿಕ. ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ರಾಜು ಯಡಹಳ್ಳಿ. ಭೀಮಶಿ ಪೂಜೇರಿ. ಗ್ರಾ.ಪಂ ಉಪಾಧ್ಯಕ್ಷ ಶ್ರೀಪತಿ ಗಣಿ. ಬಸವರಾಜ ಯಕ್ಸಂಬಿ. ತಮ್ಮಣ್ಣಾ ದೇವರ. ಕಿಷ್ಟಪ್ಪ ಯರಗಟ್ಟಿ. ಬಸು ಯರಗಟ್ಟಿ. ರಾಜು ಕೊಪ್ಪದ. ಗೋಪಾಲ ತಿಪ್ಪಿಮನಿ. ಗೋವಿಂದ ಪೂಜೇರಿ. ಪ್ರಕಾಶ ಹಿರೇಮೆತ್ರಿ. ಯಮನಪ್ಪ ಸಣ್ಣಮೇತ್ರಿ. ಲಕ್ಷ್ಮಣ ನಂದಿ. ಮಂಜು ಕುರಬೇಟ. ರಾಜು ಜೋಶಿ. ಸುಶೀತ ನಾಯಿಕ. ಸತ್ತೆಪ್ಪ ಸೊಮಕ್ಕನವರ. ಮಲ್ಲು ಮುರಕಟ್ನಾಳ. ಸದಾ ಬಡಕಲ್ಲ ಇದ್ದರು.
ಗ್ರಾ.ಪಂ ಪಿಡಿಓ ಸದಾಶಿವ ದೇವರ ಅವರ ಮೂಲಕ ಮಾನ್ಯ ತಹಶೀಲ್ದಾರ ಇವರಿಗೆ ಶ್ರೀ ರಮೆಶ ಜಾರಕಿಹೊಳಿ ಅಭಿಮಾನಿ ಬಳಗ, ಗ್ರಾಮದ ಸರ್ವ ಜನಪ್ರತಿನಿಧಿಗಳು ಹಾಗೂ ನಾಗರೀಕರು. ದಲಿತ ಸಂಘರ್ಷ ಸಮಿತಿ ಮನವಿ ನೀಡಿದರು.