Breaking News
Home / Recent Posts / ಅಮರೇಶಗೌಡ ಪಾಟೀಲರಿಗೆ ಪಿ.ಎಚ್.ಡಿ ಪದವಿ

ಅಮರೇಶಗೌಡ ಪಾಟೀಲರಿಗೆ ಪಿ.ಎಚ್.ಡಿ ಪದವಿ

Spread the love

ಅಮರೇಶಗೌಡ ಪಾಟೀಲರಿಗೆ ಪಿ.ಎಚ್.ಡಿ ಪದವಿ

ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಮರೇಶಗೌಡ ಪಾಟೀಲ ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿಯನ್ನು ಪ್ರದಾನ ಮಾಡಿದೆ. ಅಮರೇಶಗೌಡ ಅವರು “ದಿ ರೋಲ್ ಆಪ್ ಕೋ-ಆಪ್‍ರೆಟಿವ್ ಬ್ಯಾಂಕ್ಸ ಇನ್ ಅಗ್ರಿಕಲ್ಚರಲ್ ಡೆವಲ್ಪಮೆಂಟ್ : ಎ ಕೇಸ್ ಸ್ಟಡಿ ಆಫ್ ಬೆಳಗಾವಿ ಡಿಸ್ಟ್ರಿಕ್ಟ ಇನ್ ಕರ್ನಾಟಕ ಸ್ಟೇಟ್” ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ್ದಾರೆ. ಇವರಿಗೆ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಅರ್ಜುನ ಜಂಬಗಿ ಇವರು ಮಾರ್ಗದರ್ಶನ ಮಾಡಿದ್ದಾರೆ. ಅಮರೇಶಗೌಡ ಅವರು ಮೂಲತಹ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದವರು, ಇವರ ಸಾಧನೆಗೆ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಸೋನವಾಲ್ಕರ್, ಉಪಾಧ್ಯಕ್ಷರಾದ ಎಸ್.ಆರ್.ಸೋನವಾಲ್ಕರ್, ಸಮಸ್ತ ನಿರ್ದೇಶಕರು, ಪ್ರಾಚಾರ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಅಮರೇಶಗೌಡ ಪಾಟೀಲ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ