Breaking News
Home / Recent Posts / ಶ್ರೀ ಸಿದ್ಧಾರೂಢರ ಭಕ್ತರಿಂದ ಮಹಾಶಿವರಾತ್ರಿ ಜಾತ್ರೆಗೆ ಪಾದಯಾತ್ರೆ

ಶ್ರೀ ಸಿದ್ಧಾರೂಢರ ಭಕ್ತರಿಂದ ಮಹಾಶಿವರಾತ್ರಿ ಜಾತ್ರೆಗೆ ಪಾದಯಾತ್ರೆ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಭಕ್ತರು ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಮಾ.11 ರಂದು ನಡೆಯಲಿರುವ ಮಹಾಶಿವರಾತ್ರಿ ಜಾತ್ರೆಗೆ ಪಾದಯಾತ್ರೆ ಮೂಲಕ ಪ್ರಯಾಣ ಬೆಳಸಲಿರುವ ಪ್ರಯುಕ್ತ ಸ್ಥಳೀಯ ಅಶ್ವಾರೂಢ ಶ್ರೀ ಬಸವೇಶ್ವರ ವೃತ್ತದಲ್ಲಿ ಸೋಮವಾರ ಮಾ.8ರಂದು ಮುಂಜಾನೆ 8ಗಂಟೆಗೆ ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ.
ಗ್ರಾಪಂ ಉಪಾಧ್ಯಕ್ಷ ಬಸವಂತ ಕೋಣಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಅಧ್ಯಕ್ಷತೆ ವಹಿಸಲಿದ್ದು, ಸುಭಾಷ ಕರೆಣ್ಣವರ, ಮಾಯಪ್ಪ ಬಾಣಸಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸಂಚಾಲಕ ಈಶ್ವರ ಬಳಿಗಾರ, ಮಲ್ಲಪ್ಪ ಪಣದಿ ಪಾದಯಾತ್ರೆ ನೇತೃತ್ವ ವಹಿಸಲಿದ್ದು, ಬೆಟಗೇರಿ ಗ್ರಾಮದ ಪುರುಷ-ಮಹಿಳೆಯರು, ಯುವಕರು ಸೇರಿದಂತೆ ನೂರಾರು ಜನ ಸದ್ಗುರು ಶ್ರೀ ಸಿದ್ಧಾರೂಢರ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಟಗೇರಿ ಗ್ರಾಮದಿಂದ ಅಕ್ಕಿಸಾಗರ ಮಾರ್ಗವಾಗಿ ಯರಗಟ್ಟಿ, ಸವದತ್ತಿ, ಅಮ್ಮಿನಬಾವಿ, ಚಂದನಮಟ್ಟಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ, ಶುಕ್ರವಾರ ಮಾ.10ರಂದು ಪಾದಯಾತ್ರೆ ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠ ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಇದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮೊಬೈಲ್ ನಂ: 9980705123, 9901139091 ಸಂಪರ್ಕಿಸಬೇಕೆಂದು

ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸಂಚಾಲಕ ಈಶ್ವರ ಬಳಿಗಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ ಚಿದಾನಂದ ಮ ಹೂಗಾರ ಇವರ *ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

Spread the love ಮೂಡಲಗಿ -ಶಿವಾಪೂರ ಹ ಗ್ರಾಮದ ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ