ಜಾರಕಿಹೊಳಿ ಅವರ ವಿರುದ್ದ ಷಡ್ಯಂತ್ರ ಖಂಡಿಸಿ ಖಾನಟ್ಟಿಯಲ್ಲಿ ಪ್ರತಿಭಟನೆ
ಮೂಡಲಗಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ಷಡ್ಯಂತ್ರ ಖಂಡಿಸಿ ತಾಲೂಕಿನ ಖಾನಟ್ಟಿ ಗ್ರಾಮದಲ್ಲಿ ಗುರುವಾರದಂದು ಟೈಯರಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿ ರಮೇಶ ಜಾರಕಿಹೊಳಿ ಅವರನ್ನು ಕೂಡಲೇ ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿ ಗ್ರಾ.ಪಂ ಪಿಡಿಒ ಹಣಮಂತ ಬಸಗುಂದಿ ಅವರ ಮೂಲಕ ಸರಕಾರಕ್ಕೆ ಮನವಿಸಲ್ಲಿಸಿದರು.
ಈ ಸಂಧರ್ಭದಲ್ಲಿ ಶಿವನಪ್ಪ ಗುದಗನ್ನವರ, ವೆಂಕನಗೌಡ ಪಾಟೀಲ, ಬಸಲಿಂಗ ನಿಂಗನ್ನೂರ, ಚೇತನ ರಡ್ಡೇರಹಟ್ಟಿ, ಸುಭಾಸ ತುಪ್ಪದ, ಶಿವಬಸು ತುಪ್ಪದ, ರಾಮಪ್ಪ ಕುಂದರಗಿ, ರಮೇಶ ಮೇತ್ರಿ, ಗೋಪಾಲ ನಿಂಗನೂರ, ಶಂಕರ ಡೋಣಿ, ಮಹಾಲಿಂಗ ಮುಗಳಖೋಡ, ಅಶೋಕ ತುಪ್ಪದ, ರಾಜು ಪತ್ತಾರ, ಮಹಾದೇವ ಲಂಗೋಟಿ, ಮಹಾಂತೇಶ ಸತ್ತಗೇರಿ, ಶಿವಪ್ಪ ಜೋಡಹಟ್ಟಿ, ದೇವಿಂದ್ರ ಹೆಳ್ಳುರ, ಭೀಮಪ್ಪ ಮೆನಸಪ್ಪಗೋಳ ಹಾಗೂ ಗ್ರಾಮ ಪಂಚಾಯತ ಸದಸ್ಯರು ಮತ್ತಿತರು ಇದ್ದರು.