ಶಿವರಾತ್ರಿ ಪ್ರಯುತ್ತ ಶಿವಲಿಂಗಕ್ಕೆ ವಿಶೇಷ ಗುತ್ತಿ ಪೂಜಾ ಅಂಲಕಾರ
ಮೂಡಲಗಿ : ನಾಡಿನಾದ್ಯಂತ ಆಚರಿಸಲ್ಪಡುವ ಮಹಾ ಶಿವರಾತ್ರಿಯ ಪ್ರಯುಕ್ತ ಸಮೀಪದ ಹಳ್ಳೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷವಾಗಿ ಶಿವಲಿಂಗಕ್ಕೆ ಗುತ್ತಿ ಪೂಜೆಯೊಂದಿಗೆ ವಿವಿಧ ಬಣ್ಣಗಳಲ್ಲಿ ಭಕ್ತಾಧಿಗಳಿಗೆ ಶಿವನ ಸ್ಮರಣೆ ಮಾಡುವಂತೆ ಆಕರ್ಷವಾಗಿ ಶಿವಲಿಂಗ ಕಂಡು ಬಂದಿತು.
ಗ್ರಾಮದ ಜನ ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಆಗಮಿಸಿ ಇಷ್ಠಾರ್ಥ ಸಿದ್ಧಿಗಾಗಿ ಉಪವಾಸ ಹಾಗೂ ಸಂಕಲ್ಪ ಕಾರ್ಯಗಳನ್ನು ಮಾಡುವ ಮೂಲಕ ಶಿವನ ಕೃಪೆಗೆ ಪಾತ್ರರಾದರು.
IN MUDALGI Latest Kannada News