ಮೂಡಲಗಿ: ಇಲ್ಲಿನ ಶ್ರೀ ವೆಂಕಟೇಶ್ ಚಿತ್ರ ಮಂದಿರದಲ್ಲಿ ಮಹಾ ಶಿವರಾತ್ರಿಯಂದು ತೆರೆ ಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ರಾಬರ್ಟ್ ಚಿತ್ರವನ್ನು ವೀಕ್ಷಿಸಲು ದರ್ಶನ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಜಮಾಯಿಸಿ ದರ್ಶನ ಕಟೌಟ್ಗೆ ಹೂ ಮಾಲೆ ಹಾಕಿ ಸೃಂಗರಿಸಿ ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚಿತ್ರ ಮಂದಿರ ಪೂರ್ತಿ ಭರ್ತಿಯಾಗಿತ್ತು. ಪ್ರೇಕ್ಷಕ ಅಭಿಮಾನಿಗಳು ದರ್ಶನ ಫೈಟ್ ಹಾಗೂ ಗೀತೆಗಳ ಸನ್ನಿವೇಶಗಳಲ್ಲಿ ಶಿಳ್ಳೆ ,ಸ್ಟೆಪ್ ಹಾಕಿ ಖುಷಿ ಪಟ್ಟರು.
