ಅಂಚೆ ಇಲಾಖೆಯ ‘ಆಪ್ ಕೆ ಸಾಥ್’ ಅಭಿಯಾನಕ್ಕೆ ಚಾಲನೆ
‘ಅಂಚೆ ಇಲಾಖೆಯಲ್ಲಿ ಮಾಡುವ ಉಳಿತಾಯ ಹೆಚ್ಚು ಭದ್ರತೆ’
ಮೂಡಲಗಿ: ಭಾರತೀಯ ಅಂಚೆ ಇಲಾಖೆಯಲ್ಲಿ ಹಣ ಉಳಿತಾಯದ ಹಲವಾರು ಉಪಯುಕ್ತ ಯೋಜನೆಗಳು ಇದ್ದು ಜನರು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಗೋಕಾಕ ಅಂಚೆ ವಿಭಾಗ ಅಧೀಕ್ಷಕ ಸಿ.ಜಿ. ಕಾಂಬಳೆ ಅವರು ಹೇಳಿದರು.
ಭಾರತೀಯ ಅಂಚೆ ಇಲಾಖೆಯ ಗೋಕಾಕ ವಿಭಾಗದಿಂದ ಮೂಡಲಗಿಯ ಅಂಚೆ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಅಂಚೆ ಇಲಾಖೆಯ ‘ಆಪ್ ಕೆ ಸಾಥ್’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನರು ಅಂಚೆ ಕಚೇರಿಯ ವಿವಿಧ ಯೋಜನೆಗಳಲ್ಲಿ ಇಡುವ ಹಣಕ್ಕೆ ಪೂರ್ಣ ಪ್ರಮಾಣದ ಭದ್ರತೆ ಇರುತ್ತದೆ ಎಂದು ಹೇಳಿದರು.
ಸುಕನ್ಯಾ ಸಮೃದ್ಧಿ ಯೋಜನೆ, ಆರ್‍ಡಿ, ಟರ್ಮ ಡಿಪಾಶಿಟ್, ಕೆವಿಟಿ, ಪಿಎಲ್‍ಐ, ಆರ್‍ಪಿಎಲ್‍ಐ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಮತ್ತು ಜೀವನ ಜ್ಯೋತಿ ವಿಮಾ ಯೋಜನೆಗಳು, ಅಟಲ್ ಪೆನ್‍ಶೇನ್ ಮತ್ತು ಹಿರಿಯ ನಾಗರಿಕರಾಗಿ ವಿಶೇಷ ಬಡ್ಡಿ ದರದಲ್ಲಿ ಠೇವಣಿ ಯೋಜನೆಗಳು ಇದ್ದು, ಉತ್ತಮ ಬಡ್ಡಿ ದರ ಸಹ ಇರುವುದು ಎಂದರು.
ನಿಶ್ಚಿತ ಬಡ್ಡಿ ನೀಡಿಕೆ, ತ್ವರಿತ ಸೇವೆ, ಉಳಿತಾಯ ಖಾತೆ ಕಾರ್ಯನಿರ್ವಹಣೆ ಸೇರಿದಂತೆ ಎಲ್ಲ ಸೇವೆಗಳಿಗೆ ಅಂಚೆ ಇಲಾಖೆಯು ದಕ್ಷವಾಗಿದೆ ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬ್ಯಾನ್‍ರದೊಂದಿಗೆ ಅಂಚೆ ಇಲಾಖೆಯ ಯೋಜನೆಗಳ ಬಗ್ಗೆ ಕರಪತ್ರಗಳನ್ನು ವಿತರಿಸಿ ಜನರಲ್ಲಿ ಅರಿವು ಮೂಡಿಸಿದರು.
ಇದೇ ಸಂದರ್ಬದಲ್ಲಿ 75ಕ್ಕೂ ಅಧಿಕ ಆರ್‍ಡಿಗಳನ್ನು ಮಾಡಿದ ಹಾಗೂ ರೂ. 6 ಲಕ್ಷ ಮೌಲ್ಯದ ಹಿರಿಯ ನಾಗರಿಕರ ಠೇವಣಿ ಮಾಡಿದ ಗ್ರಾಹರಿಗೆ ಠೆವಣಿ ಪಾಸ್‍ಬುಕ್‍ಗಳನ್ನು ವಿತರಿಸಿದರು.
ಗೋಕಾಕ ಅಂಚೆ ನಿರೀಕ್ಷಕ ಶಿವಮೂರ್ತಿ ಎನ್.ಎಚ್, ಮೂಡಲಗಿ ಅಂಚೆ ಕಚೇರಿಯ ರವಿ ಸಿ.ಬಿ, ಡಿ.ಆರ್. ಪಾಟೀಲ ಹಾಗೂ ಮೂಡಲಗಿ ಅಂಚೆ ಕಚೇರಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಂಚೆ ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.