ಮೂಡಲಗಿ: ಮನುಷ್ಯನ ಆರೋಗ್ಯದ ಬಗ್ಗೆ ಯೋಚಿಸುತ್ತೇವೆ ಹಾಗೆ ಮಣ್ಣಿನ ಆರೋಗ್ಯದ ಬಗ್ಗೆ ಗಮನ ಹರಿಸಿ ಮಣ್ಣಿನ ಫಲವತ್ತತೆ ಹೆಚ್ಚಾಗುವಂತೆ ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಬಹುದು ಎಂದು ಮಣ್ಣು ಪರೀಕ್ಷಾ ಕೇಂದ್ರ ಅಧಿಕಾರಿ ಶಿವಶಂಕರ ಪಾಟೀಲ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಗ್ರಾಮದ ತಳಿಗಿನಕೊಡಿ ತೋಟದಲ್ಲಿ ಕೃಷಿ ಇಲಾಖೆ ಗೋಕಾಕ, ರೈತ ಸಂಪರ್ಕ ಕೇಂದ್ರ ಅರಭಾಂವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಣ್ಣು ಆರೋಗ್ಯ ಚೀಟಿ ಯೋಜನೆಯಡಿ ಪ್ರಾತ್ಯಕ್ಷಿಕೆ ಮತ್ತು ರೈತರ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ರಾಸಾ ಯನಿಕ ಗೊಬ್ಬರಗಳಲ್ಲಿ ಮಾರ್ಪಾಟು ಮಾಡಿಕೊಂಡು ಮತ್ತು ಕೊರತೆ ಇರುವ ಲಘುಷೋಷಕಾಂಶಗಳನ್ನು ಒದಗಿಸುವುದರ ಮೂಲಕ ಷೋಷಕಾಂಧಗಳ ಸಮತೋಲನೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ರೈತರು ರಸಗೊಬ್ಬರದ ಮೇಲಿನ ಖರ್ಚನ್ನು ಕಡಿಮೆ ಮಾಡಿಕೊಲ್ಲಬಹುದಾಗಿದೆ ಇದರಿಂದ ಇಳುವರಿಯ ಮಟ್ಟವನ್ನು ಕೂಡಾ ಹೆಚ್ಚಿಸಬಹುದಾಗಿದೆ ಎಂದು ಹೇಳಿದರು.
ಕೃಷಿ ಅಧಿಕಾರಿ ಶಂಕರ ಹಳದಮನಿ, ಪ್ರಗತಿಪರ ರೈತರಾದ ಸಂಜು ಕುಸ್ತಿಗರ ಮಾತನಾಡಿ, ಬೆಳೆಗಳು ಬೆಳವಣಿಗೆಯಲ್ಲಿ ಅನೇಖ ಷೋಷಕಾಂಶಗಲು ಅಗತ್ಯವಿದ್ದು, ಅವುಗಳ ಕೊರತೆಯಿಂದ ಬೆಳಗಳ ಇಳುವರಿ ಹಾಘೂ ಉತ್ಪನ್ನದ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮಗಳಾಗುತ್ತವೆ. ಷೃಷಿಯಲ್ಲಿ ಅತೀ ಅವಶ್ಯವಿರುವ ಪೋಷಕಾಂಶಗಳು, ಅವುಗಳ ಕೊರತೆಯಿಂದ ವಿವಿಧ ಬೆಳೆಗಳಲ್ಲಿ ಕಾಣುವ ಲಕ್ಷಣಗಳು ಹಾಗೂ ಅವುಗಳನ್ನು ನಿವಾರಿಸುವ ಕ್ರಮಗಳ ಬಗ್ಗೆ ರೈತರಿಗೆ ವಿವರಿಸಿದ್ದರು.
ಈ ಸಂದರ್ಭದಲ್ಲಿ ಕೆವಿಕೆ ವಿಜ್ಞಾನಿಗಳಾದ ಎನ್ ಆರ್ ಸಾಲಿಮಠ, ರೈತ ಸಂಪರ್ಕ ಕೇಂದ್ರ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪೂರ್ಣಿಮಾ ಒಡ್ರಾಳೆ, ಪ್ರಗತಿಪರ ರೈತ ಮಹೇಶ ಪಾಟೀಲ, ಬಾಪು ಗದಾಡಿ, ಮಂಜು ಗದಾಡಿ, ಗ್ರಾಮ ಪಂಚಾಯತ ಸದಸ್ಯರು ಹಾಗೂ ರೈತರು ಇದ್ದರು.
Home / Recent Posts / ಮಣ್ಣಿನ ಆರೋಗ್ಯದ ಬಗ್ಗೆ ಗಮನ ಹರಿಸಿ ಮಣ್ಣಿನ ಫಲವತ್ತತೆ ಹೆಚ್ಚಾಗುವಂತೆ ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ
Check Also
ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ
Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …