Breaking News
Home / Recent Posts / ಅಶ್ಫಾಕ್ ಪೀರಜಾದೆ ಅವರು ರಚಿಸಿದ ಸಾಹಿತ್ಯ ಪ್ರೇಮ, ಸಾಮರಸ್ಯ , ಮಾನವೀಯತೆಗಾಗಿ ತುಡಿಯುತ್ತದೆ.

ಅಶ್ಫಾಕ್ ಪೀರಜಾದೆ ಅವರು ರಚಿಸಿದ ಸಾಹಿತ್ಯ ಪ್ರೇಮ, ಸಾಮರಸ್ಯ , ಮಾನವೀಯತೆಗಾಗಿ ತುಡಿಯುತ್ತದೆ.

Spread the love

ಅಶ್ಫಾಕ್ ಪೀರಜಾದೆ ಅವರು ರಚಿಸಿದ ಸಾಹಿತ್ಯ
ಪ್ರೇಮ, ಸಾಮರಸ್ಯ , ಮಾನವೀಯತೆಗಾಗಿ
ತುಡಿಯುತ್ತದೆ.

ಸಾಹಿತ್ಯಿಕ ಕೃತಿಯ ವಿಮರ್ಶಾತ್ಮಕ ಪರಿಗಣನೆ, ಅಭಿಪ್ರಾಯ ಮತ್ತು ಮೌಲ್ಯಮಾಪನ ಈ ತರಹದ ಬರಹಗಳ ವಿಶ್ಲೇಷಣಾತ್ಮಕ ಚರ್ಚೆ ನಡೆದಾಗ ಒಬ್ಬ ಬರಹಗಾರನಿಗೆ ಸಿಗುವ ಗೌರವ ಯಾವುದೇ ಪ್ರಶಸ್ತಿಕ್ಕಿಂತ ಕಡಿಮೆಯಲ್ಲ. ಲೇಖಕರ ಬರಹದ ಮೇಲೆ ಅಭಿಪ್ರಾಯ ವ್ಯಕ್ತಪಡಿಸುವ ಕಾಮೆಂಟ್ ಗಳು, ವಿಮರ್ಶೆಗಳು ಬೇರೊಬ್ಬ ಓದುಗನಿಗೆ ತಲುಪಿದಾಗ ಆಗುವ ಆನಂದ ಮತ್ತಷ್ಟು ಬರಹಕ್ಕೆ ಪುಷ್ಟಿ ನೀಡುತ್ತವೆ ಎಂದು ಕವಿ ನಾಗೇಶ ನಾಯಕ ಹೇಳಿದರು.

ಅವರು ಧಾರವಾಡದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಹಾವೇರಿ ಕಲಾ ಸ್ಪಂದನದ ಸಂಯುಕ್ತ ಆಶ್ರಯದಲ್ಲಿ ಕವಿವ ಸಂಘದ ರಾ ಹ ದೇಶಪಾಂಡೆ ಸಭಾಭವನದಲ್ಲಿ ಹಮ್ಮಿಕೊಂಡ ಅಶ್ಫಾಕ್ ಪೀರಜಾದೆ ಅವರ ಸಾಹಿತ್ಯಾವಲೋಕನ ಮಾಲೆಯಲ್ಲಿ ಕಾವ್ಯಾವಲೋಕನ ಮಾಡುತ್ತಾ ಮಾತನಾಡಿ.
ಅಶ್ಫಾಕ್ ಪೀರಜಾದೆ ಅವರ ಕಾವ್ಯ ಪ್ರೇಮ, ಸಾಮರಸ್ಯ ಹಾಗೂ ಮಾನವೀಯತೆಯ ಅನುಭವದ ಮಾರ್ಗದಲ್ಲಿ ಬೆಳೆಯುತ್ತಾ ಸಮಾಜದ ಓರೆಗಳನ್ನು ತಿದ್ದುತ್ತದೆ. ಇವರ ಒಂದು ಜೋಡಿ ಕಣ್ಣು, ಮನೋಲೋಕ ಮತ್ತು ನನ್ನೊಳಗಿನ ಕವಿತೆ ಎಂಬ ಮೂರು ಕಾವ್ಯ ಸಂಕಲನದಲ್ಲಿ ಸವರು ಹಂತ ಹಂತವಾಗಿ ಪಕ್ವವಾಗುತ್ತಿರುವುದು ಅವರ ಬರಹದ ಹಿಡಿತಕ್ಕೆ ಹಿಡಿದ ಕನ್ನಡಿಯಾಗಿದೆ.ಅಶ್ಫಾಕ್ ಅವರು ಕಾವ್ಯ ವರ್ಣನೆಯಲ್ಲಿ ನಿಪುಣನಾದ ಕವಿ. ಅವರ ಕಾವ್ಯ ವಿಶೇಷ ಶಬ್ದಾರ್ಥಗಳಿಂದ, ರೂಪಕಗಳಿಂದ ಕೂಡಿರುವುದು ವಿಶೇಷ.ರಸಾತ್ಮಕವಾದ ವಾಕ್ಯ,ರಮಣೀಯಾರ್ಥ ಪ್ರತಿಪಾದಕವಾದ, ಹೀಗೆ ಹಲವು ವಿಧದಲ್ಲಿ ಅವರ ಕಾವ್ಯ ವಿಭಿನ್ನ ರಚನೆಯಾಗಿ ಕಾಣಬಹುದು ಎಂದು ಹೇಳಿದರು.

ಇನ್ನೂರ್ವರು ಉಪನ್ಯಾಸಕರಾದ ಡಾ.ಶಿವಾನಂದ ಟವಳಿ ಅಶ್ಫಾಕ್ ಅವರ ಕಥಾವಲೋಕನ ಮಾಡುತ್ತಾ ಯಾವುದೇ ಸಾಹಿತ್ಯ ಸದಾ ವಿಮರ್ಶೆಗೆ ಒಳಪಡಬೇಕು ಹಾಗೂ ಪೀರಜಾದೆ ಅವರ ವೃತ್ತಿ, ಜೀವನ ವೃತ್ತಾಂತ ಅನುಭವಗಳ ಹಿನ್ನಲೆಯಲ್ಲಿ ಕಥೆಗಳು ಮೂಡಿಬಂದಿರುವುದು ರೋಮಾಂಚನದ ಅನುಭವವನ್ನು ಉಂಟು ಮಾಡುತ್ತದೆ. ಅವರ ಪ್ರತಿಯೊಂದು ಕಥೆಗಳು ಅನಿರೀಕ್ಷಿತ ತಿರುವುಗಳು ಹಾಗೂ ದೃಶ್ಯಾರಂಭವೇ ಓದುಗನ ಆಸಕ್ತಿಯನ್ನು ಕೆರಳಿಸುತ್ತವೆ.
ಗ್ರಾಮೀಣ ಭಾಗದ ಜನಜೀವನ ವೃತ್ತಾಂತವನ್ನು ಕಟ್ಟಿಕೊಳ್ಳುತ್ತಾ ಹದಗೆಡುತ್ತಿರುವ ಗ್ರಾಮೀಣ ಸಂಸ್ಕೃತಿ ಬಗ್ಗೆಯೂ ಚಿಂತಿಸುತ್ತಿರುವುದು ಅವರ ಕಥೆಯ ವಿಶೇಷ, ಆದರೆ ಇಂದು ಹಿರಿಯ ಸಾಹಿತಿಗಳು ಕಿರಿಯ ಸಾಹಿತಿಗಳ ಸಾಹಿತ್ಯ ಓದಿ ಪ್ರೋತ್ಸಾಹಿಸುತ್ತಿಲ್ಲ ಹಿಂದೆ ಬರಹಗಾರರಿಗೆ ಹಿರಿಯರು ತಮ್ಮ ಶಿಷ್ಯ ವೃಂದ ಬೆಳೆಸುವ ಹಾಗೆ ಇಂದು ಆ ಸಂಸ್ಕೃತಿ ಇಲ್ಲದಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೃಷಿಕ ಮಹಿಳೆಯಾದ ಶೀಗನಹಳ್ಳಿಯ ಶ್ರೀಮತಿ ಪಾರ್ವತಿ ಮಹಾದೇವ ದಂಡಿನ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕೆ.ಎಚ್.ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ತಜ್ಞರಾದ ಮಲ್ಲಿಕಾರ್ಜುನ ಚಿಕ್ಕಮಠ,ಗಾಯಕರಾದ ಶಿವಾನಂದ ಹೂಗಾರ, ಬರಹಗಾರ ಅಶ್ಪಾಕ ಪೀರಜಾದೆ, ಎಮ್.ಎಸ್.ಫರಾಸ್ ಮಾತನಾಡಿದರು.

ಸಾಹಿತಿ,ಕಾರ್ಯಕ್ರಮದ ಆಯೋಜಕ ಮಾರ್ತಾಂಡಪ್ಪ ಎಮ್ ಕತ್ತಿ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ಮಾತನಾಡಿದರು. ಶಿಕ್ಷಕ ಸಂಪನ್ಮೂಲ ವ್ಯಕ್ತಿ ಬಸವರಾಜ ದೇಸೂರ ನಿರೂಪಿಸಿದರು. ಶಿಕ್ಷಕ ಅಂಕಣ ಬರಹಗಾರ ಸಿದ್ದು ವಾರದ ಸ್ವಾಗತಿಸಿ ವಂದಿಸಿದರು. ಶಿವಾನಂದ ಹೂಗಾರ ಪ್ರಾರ್ಥಿಸಿದರು.

ಈ ಕಾರ್ಯಕ್ರಮದಲ್ಲಿ ಎಸ್ ಎಚ್ ಪೀರಜಾದೆ, ಪ್ರಕಾಶ ಭಟ್ಟ, ಪೀರಸಾಬ ನದಾಫ, ಎ ಎ ದರ್ಗಾ, ರವೀಂದ್ರ ಮುನ್ನೋಳಿಮಠ, ಎಸ್ ಎಮ್ ಕರಡಿಗುಡ್ಡ, ಎಮ್.ಕೆ.ಚವ್ಹಾಣ, ಶಿವಕುಮಾರ ಗಾಂಜಿ, ಎಸ್ ಎಲ್ ಮಂಡಿ, ಎಮ್ ಎಫ್ಎನ್ ದೇಸಾಯಿ, ಸಿ.ಆರ್.ಬೆನಕನಹಳ್ಳಿ, ಶಿವು ನಡುವಿನಮನಿ, ಎ ಐ ಸಿದ್ಧಗೇರಿಮಠ, ಬಸನಗೌಡ ಪಾಟೀಲ, ಕಲಾವಿದ ಶಿವಬಸಪ್ಪ ಅಮಟೂರ, ಆನಂದ ಬಾಳಿ, ಮುಂತಾದವರು
ಉಪಸ್ಥಿತಿ ಇದ್ದರು.

– ಅಶ್ಫಾಕ್ ಪೀರಜಾದೆ.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ