Breaking News
Home / Recent Posts / ಅಂಗನವಾಡಿ ಕಾರ್ಯಕರ್ತೆಯರಿಂದ ಸಚಿವೆ ಶಶಿಕಲಾ ಜೊಲ್ಲೆಗೆ ಸವಾಲ್ ನಮ್ಮ ಸಂಬಳದ ಹಣದಲ್ಲಿ ಜೀವನ ಮಾಡಿ ತೋರಿಸಿ , ಮೂಡಲಗಿ ಸಿಡಿಪಿಓ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ

ಅಂಗನವಾಡಿ ಕಾರ್ಯಕರ್ತೆಯರಿಂದ ಸಚಿವೆ ಶಶಿಕಲಾ ಜೊಲ್ಲೆಗೆ ಸವಾಲ್ ನಮ್ಮ ಸಂಬಳದ ಹಣದಲ್ಲಿ ಜೀವನ ಮಾಡಿ ತೋರಿಸಿ , ಮೂಡಲಗಿ ಸಿಡಿಪಿಓ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ

Spread the love

ಅಂಗನವಾಡಿ ಕಾರ್ಯಕರ್ತೆಯರಿಂದ ಸಚಿವೆ ಶಶಿಕಲಾ ಜೊಲ್ಲೆಗೆ ಸವಾಲ್
ನಮ್ಮ ಸಂಬಳದ ಹಣದಲ್ಲಿ ಜೀವನ ಮಾಡಿ ತೋರಿಸಿ | ಮೂಡಲಗಿ ಸಿಡಿಪಿಓ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ

ಮೂಡಲಗಿ : ಅಂಗನವಾಡಿ ನೌಕರರು ತಮ್ಮ ವಿವಿಧ ಬೇಡಿಕೆಗಳಿಗೆ ಸ್ಪಂದಿಸದಿರುವ ಬಜೆಟನ್ನು ವಿರೋಧಿಸಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ಬಜೆಟ ಮಂಡನೆಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿ ಮೆರವಣಿಗೆ ಮೂಲಕ ಪಟ್ಟಣದ ಶಿವಭೋಧರಂಗ ಕಾಲೇಜ ಆವರಣದಿಂದ ಸಿಡಿಪಿಓ ಕಚೇರಿಯವರೆಗೂ ಆಗಮಿಸಿ ಉಪವಾಸ ಸತ್ಯಾಗ್ರಹ ನಡೆಸಿದರು.
ಈ ವೇಳೆಯಲ್ಲಿ ಸಿಐಟಿಯು ಸಂಘಟನೆಯ ಮಡ್ಡೇಪ್ಪ ಭಜಂತ್ರಿ ಮಾತನಾಡಿ, ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡಾ ಕೊರೋನಾ ಸಂದರ್ಭದಲ್ಲಿ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಶರತ್ತುಗಳಿಲ್ಲದೇ ಕೆಲಸವನ್ನು ನಿರ್ವಹಿಸಿದ್ದಾರೆ. ಕೊರೋನಾ ಕೆಲಸ ಮಾಡುವ ವೇಳೆ 28 ಜನರು ತಮ್ಮ ಜೀವವನ್ನೇ ಮುಡುಪಾಗಿಟ್ಟು ಬಲಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರೋನಾ ರೋಗಿಗಳನ್ನು ಸಂತೃಪ್ತಿಸಿದ್ದು, ಮಾತ್ರವಲ್ಲದೇ ಸಾರ್ವಜನಕರಿಂದ ಹಲ್ಲೆಗೊಳಗಾದರೂ ಕೂಡಾ ಎದೆಗುಂದದೆ ಕೆಲಸ ಮಾಡಿದ್ದಾರೆ ಅವರ ಸೇವೆಗೆ ತಕ್ಕ ಪ್ರತಿಫಲ ದೊರೆತಿಲ್ಲ ಎಂದರು
ಅಂಗನವಾಡಿ ಕಾರ್ಯಕರ್ತೆ ಸುಜಾತಾ ಕೋಕಟನೂರ ಮಾತನಾಡಿ, ಮಹಿಳಾ ಮತ್ತು ಮಕ್ಕ:ಳ ಕಾಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಯವರು ನಮ್ಮ ಬೇಡಿಕೆಗಳನ್ನು ಬಜೆಟನಲ್ಲಿ ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಜೊಲ್ಲೆಯವರು ನಿರ್ಲಕ್ಷಿಸಿದ್ದಾರೆ ಎಂದು ಸಚಿವೆ ವಿರುದ್ದ ಹರಿಹಾಯ್ದರು.
ಅಂಗನವಾಡಿ ನೌಕರರಿಗೆ ನೀಡುವ ಸಂಬಳದಲ್ಲಿ ಸಿಎಂ ಹಾಗೂ ಸಚಿವೆ ಶಶಿಕಲಾ ಜೊಲ್ಲೆಯವರು ಜೀವನ ಮಾಡಿ ತೋರಿಸಲಿ ಎಂದು ಸಚಿವೆಗೆ ಪ್ರತಿಭಟನಾಕಾರರ ಪರವಾಗಿ ಸವಾಲ್ ಹಾಕಿದರು.
ಅಂಗನವಾಡಿ ಕಾರ್ಯಕರ್ತೆ ಸುವರ್ಣ ಒಡೆಯರ್ ಮಾತನಾಡಿ, ಸರ್ಕಾರದವರು ಎಲ್ಲ ಕೆಲಸಗಳನ್ನು ನಮಗೆ ನೀಡುತ್ತಾರೆ ಆದರೆ ನಮ್ಮ ಜೀವನದ ಬಗ್ಗೆ ಕೇಳುವುದಿಲ್ಲ. ಬೀಸಿಲು, ಮಳೆ ಎನ್ನದೇ ಕೆಲಸ ಮಾಡುತ್ತೇವೆ ನಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕು ಇಲ್ಲವಾದರೆ ಮುಂದೆ ಉಗ್ರ ಸ್ಪರೂಪದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉಪವಾಸ ಸತ್ಯಾಗ್ರಹ ಮುಗಿದ ನಂತರ ಸಿಡಿಪಿಓ ಕಛೇರಿ ಸಿಬ್ಬಂದಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೂಡಲಗಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ