Breaking News
Home / ತಾಲ್ಲೂಕು / ಮೂಡಲಗಿ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಸಿಬ್ಬಂದಿಯವರಿಗೆ ತಾಲೂಕಾ ಆರೋಗ್ಯ ಇಲಾಖೆ ಪ್ರತಿನಿಧಿಗಳ ಕ್ಯಾಪ್ ವಿತರಣೆ

ಮೂಡಲಗಿ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಸಿಬ್ಬಂದಿಯವರಿಗೆ ತಾಲೂಕಾ ಆರೋಗ್ಯ ಇಲಾಖೆ ಪ್ರತಿನಿಧಿಗಳ ಕ್ಯಾಪ್ ವಿತರಣೆ

Spread the love

ಮೂಡಲಗಿ: ಮಹಾಮಾರಿ ಕರೋನಾ ವೈರಸ್ ವಿರುದ್ದ ಜನ ಸಾಮಾನ್ಯರಿಗೆ ಅಪಾಯದ ಕುರಿತು ಅಪಾಯಕಾರಿ ಪರಿಸ್ಥಿತಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್, ಪಂಚಾಯತ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಯ ಕಾರ್ಯ ನೀಜಕ್ಕೂ ಪ್ರಶಂಸಾರ್ಯವಾಗಿದೆ ಎಂದು ದಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯ ಮಾಜಿ ಜಿ.ಪಂ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಮೂಡಲಗಿ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಸಿಬ್ಬಂದಿಯವರಿಗೆ ತಾಲೂಕಾ ಆರೋಗ್ಯ ಇಲಾಖೆ ಪ್ರತಿನಿಧಿಗಳ ಕ್ಯಾಪ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಬಿಸಿಲಿನ ತಾಪಮಾನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯವರಿಗೆ ನೀಡುತ್ತಿರುವದು ಒಳ್ಳೇಯ ಕಾರ್ಯವಾಗಿದೆ. ಪ್ರತಿಯೊಬ್ಬರ ಮನೆಗಳಿಗೆ ಖುದ್ದಾಗಿ ಭೇಟಿ ನೀಡುವ ಮೂಲಕ ಜನತೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಪ್ರತಿನಿಧಿಗಳ ಕಾರ್ಯವು ಕೂಡಾ ಮೆಚ್ಚುವಂತಹದು. ಪ್ರಪಂಚದಾದ್ಯಂತ ಹರಡಿರುವ ಕೊರೋನಾ ವೈರಸ್ ಮನುಷ್ಯರನ್ನು ಬೆಂಬಿಡದೆ ಕಾಡುತ್ತಿದೆ. ಇಂತಹ ಮಹಾಮಾರಿಯಿಂದ ಪಾರಾಗಲು ಕೇಂದ್ರ ಹಾಗೂ ರಾಜ್ಯ ಸರಕಾರದ ನಿಯಮಾವಳಿಗಳು ಹಾಗೂ ಸ್ಥಳೀಯವಾಗಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಯ ಮಾರ್ಗದರ್ಶನಗಳನ್ನು ಅತ್ಯಾವಶ್ಯಕವಾಗಿ ಪಾಲಿಸ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ. ಆರ್.ಆರ್ ಅಂಟಿನ್, ಬಿಇಒ ಎ.ಸಿ ಮನ್ನಿಕೇರಿ, ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ತಾಲೂಕಾ ನೌಕರ ಸಂಘದ ಅಧ್ಯಕ್ಷ ಆನಂದ ಹಂಜ್ಯಾಗೋಳ, ಉಪಜಿಲ್ಲಾ ಆರೋಗ್ಯಾಧಿಕಾರಿ ಶಿವಾಜಿ ಮಾಳಗೆಣ್ಣವರ, ರಾಜ್ಯ ಪರೀಷತ್ ಸದಸ್ಯ ಬಸನಗೌಡ ಈಶ್ವರಪ್ಪಗೋಳ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ ಬಸ್ಸಾಪೂರ, ನೌಕರ ಘಟಕದ ನಿರ್ಧೇಶಕರಾದ ಶಿವಲಿಂಗ ಪಾಟೀಲ, ರಾಮಚಂದ್ರ ಸಣ್ಣಕ್ಕಿ, ಎಸ್.ಎಲ್ ಜಾಗನೂರ, ಆರ್.ಟಿ ಸೋನವಾಲಕರ, ಪಾರ್ಮಸಿ ಅಧಿಕಾರಿ ಎಚ್ ಎಮ್ ನಿಡೋಣಿ, ಆರೋಗ್ಯ ಮಿತ್ರ ಇರ್ಶಾದ್ ಫೀರಜಾದೆ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ವರದಿ: ಕೆ.ವಾಯ್ ಮೀಶಿ


Spread the love

About inmudalgi

Check Also

ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ

Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ