Breaking News
Home / Recent Posts / ಬರುವ ಶನಿವಾರದಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರಿಗೆ ಮತ ಚಲಾಯಿಸಿ ಆಶೀರ್ವಾದ ಮಾಡಬೇಕು- ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ
????????????????????????????????????

ಬರುವ ಶನಿವಾರದಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರಿಗೆ ಮತ ಚಲಾಯಿಸಿ ಆಶೀರ್ವಾದ ಮಾಡಬೇಕು- ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ: ಬರುವ ಶನಿವಾರದಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರಿಗೆ ಮತ ಚಲಾಯಿಸಿ ಆಶೀರ್ವಾದ ಮಾಡಬೇಕು. ಕ್ಷೇತ್ರದ ಹಾಗೂ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ದಿ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಪಕ್ಷದ ಋಣ ತೀರಿಸುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ನಗರದ ಹೊರವಲಯದಲ್ಲಿರುವ ಅಕ್ಕಮಹಾದೇವಿ ಸಭಾ ಭವನದಲ್ಲಿ ಗುರುವಾರ ಸಂಜೆ ಅರಭಾವಿ ಕ್ಷೇತ್ರದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಮತ್ತು ಅಭಿಮಾನಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಂದು ಮನೆ-ಮನೆ ಬಾಗಿಲಿಗೆ ತೆರಳಿ ಶೇಜ ನಂ 1 ಬಿಜೆಪಿ ಪಕ್ಷದ ಕಮಲ ಗುರ್ತಿಗೆ ಮತ ನೀಡಲು ಮತದಾರರಲ್ಲಿ ಮನವಿ ಮಾಡಿಕೊಳ್ಳಲು ಅವರು ಕೋರಿದರು.
ನಮಗೆ ದ್ವೇಷದ ರಾಜಕೀಯ ಗೊತ್ತಿಲ್ಲ, ಕ್ಷೇತ್ರದ ಸಾಕಷ್ಟು ಮುಖಂಡರು ಈ ಚುನಾವಣೆಯ ಕುರಿತು ನನ್ನೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ತಪ್ಪು ದಾರಿಯನ್ನು ಕೂಡಾ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಮ್ಮನ್ನು ನಂಬಿದವರಿಗೆ ನಾವು ಎಂದಿಗೂ ಕೈ ಬಿಡುವದಿಲ್ಲ. ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಏಕಕಾಲಕ್ಕೆ ಅಧಿಕಾರದಲ್ಲಿರುವುದರಿಂದ ನಮ್ಮ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕಳೆದ 15 ವರ್ಷಗಳಿಂದ ನನಗೆ ಮತ ನೀಡಿ ಆಯ್ಕೆ ಮಾಡುತ್ತಾ ಬಂದಿರುವ ನೀವುಗಳು ಏ-17 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರಿಗೆ ಮತ ನೀಡಿ ಬೆಂಬಲಿಸುವಂತೆ ತಿಳಿಸಿದರು.


ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಮ್ಮ ಮೇಲೆ ಅಗಾಧವಾದ ಭರವಸೆಯನ್ನಿಟ್ಟಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು, ಸಚಿವರಾದ ಜಗದೀಶ ಶೆಟ್ಟರ, ಉಮೇಶ ಕತ್ತಿ, ಸಹಿತ ಹಲವು ನಾಯಕರು ನಮ್ಮೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಅವರ ಪ್ರೀತಿ-ವಿಶ್ವಾಸಕ್ಕೆ ಚ್ಯುತಿ ತರುವದಿಲ್ಲ. ದಿ. ಸುರೇಶ ಅಂಗಡಿ ಅವರ ಆತ್ಮಕ್ಕೆ ಶಾಂತಿ ಲಭಿಸಲು ಮಂಗಳಾ ಅಂಗಡಿಯವರನ್ನು ಕಳೆದ ಚುನಾವಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುನ್ನಡೆ ನೀಡಿ ಆಯ್ಕೆಯಾಗಲು ಕಾರ್ಯಕರ್ತರು ಶ್ರಮಿಸಲು ಸೂಚನೆ ನೀಡಿದರು.
ನಿನ್ನೆ ಬುಧವಾರದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಮ್ಮೊಂದಿಗೆÀ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ನಮಗೆ ಬೇಕಿರುವುದು. ಬಿಜೆಪಿ ಅಭ್ಯರ್ಥಿಯ ಆಯ್ಕೆ ಮಾತ್ರ. ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಗೋಕಾಕ ಕ್ಷೇತ್ರದಲ್ಲಿ ಮಾಜಿ ಸಚಿವ ಹಾಗೂ ಸಹೋದರ ಶಾಸಕ ರಮೇಶ ಜಾರಕಿಹೊಳಿ ಅವರು ಕೋವಿಡ್‍ನಿಂದಾಗಿ ಪ್ರಚಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೂ ಕೂಡಾ ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಮೂಲಕ ಭರ್ಜರಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ. ಪಕ್ಷ ತಮಗೆ ಎಲ್ಲವೂ ನೀಡಿದ್ದು ಪಕ್ಷಕ್ಕೆ ನಿಷ್ಠರಾಗಿ ಈ ಚುನಾವಣೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಮಂಗಳಾ ಅಂಗಡಿಯವರಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.
ಅರಭಾವಿ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದಿಂದ ಸಾಕಷ್ಟು ಅಭಿವೃದ್ದಿ ಪರ ಕಾಮಗಾರಿಗಳು ನಡೆದಿವೆ. ಜಿಎಲ್‍ಬಿಸಿ ಮತ್ತು ಜಿಆರ್‍ಬಿಸಿ ಕಾಲುವೆಗಳ ಆಧುನಿಕರಣ ಕಾಮಗಾರಿ, ಕ್ಷೇತ್ರದ 22 ಕೆರೆಗಳನ್ನು ಗುರುತಿಸಿ ಅದಕ್ಕೆ 260 ಕೋಟಿ ರೂಗಳ ಅನುದಾನದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ನೀರಾವರಿ ಇಲಾಖೆಯಿಂದ ರಸ್ತೆಗಳ ಸುಧಾರಣೆಗಾಗಿ 80 ಕೋಟಿ ರೂಗಳ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ. ಅಭಿವೃದ್ದಿ ಹಿನ್ನೆಲೆಯನ್ನು ನೋಡಿ ಬಿಜೆಪಿಗೆ ಮತ ಹಾಕಬೇಕು. ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರವೂ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ