ಮೂಡಲಗಿ: ಆಸ್ಪತ್ರೆಯೊಂದರಲ್ಲಿ ಜನಿಸಿದ ಅಂಬಾನಿಯ ಮೊಮ್ಮಗನ್ನು ನೋಡಲು ಪ್ರಧಾನಿ ಮೋದಿ ಅವರಿಗೆ ಸಮಯವಿದೆ ಆದರೆ ಧರಣಿ ನಿರತ ರೈತರನ್ನು ಮಾತನಾಡಿಸಿ ಬರಲು ಇವರಿಗೆ ಸಮಯವೇ ಸಾಲುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಗ್ರಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪಟ್ಟಣದ ಶಿವಬೋಧರಂಗ ಬ್ಯಾಂಕ ಸಂಭಾಗಣದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಮತಯಾಚಣೆ ವೇಳೆ ಮಾತನಾಡಿದ ಅವರು. ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರಸಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗಳಿಂದ ನಾಗರಿಕರು ತೀವ್ರ ಸಂಕಷ್ಟದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ಕೊನೆಗಣಿಸಲು ಕಾಂಗ್ರೇಸ್ ಅಭ್ಯರ್ಥಿಗೆ ಮತ ನೀಡಿ, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂಪ್ಪನವರ ಆಡಳಿತವನ್ನು ತೊಲಗಿಸಲು ಮತದಾರರು ಕಾಂಗ್ರೇಸ್‍ಗೆ ಮತ ನೀಡಿ ಒಗ್ಗಟ್ಟನ್ನು ಪ್ರದರ್ಶಿಸಬೆಕೇಂದು ವಿನಂತಿಸಿಕೊಂಡರು.
ಸತೀಶ ಜಾರಕಿಹೊಳಿಯವರು ಪ್ರಗತಿಪರರು, ಮೂಢನಂಬಿಕೆಯ ವಿರುದ್ದ ಧ್ವನಿ ಎತ್ತಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಬಸವಣ್ಣನವರ ಶಾಂತಿ ಧರ್ಮ ಸರ್ವ ಧರ್ಮವನ್ನು ಗೌರವಿಸಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ, ಅವರನ್ನು ಸಂಸತ್‍ನಲ್ಲಿ ಬೆಳಗಾವಿ ಕ್ಷೇತ್ರದ ಜನರ ಪರವಾಗಿ ಗಟ್ಟಿ ಧ್ವನಿಯನ್ನು ಎತ್ತುತ್ತಾರೆ ಆದ್ದರಿಂದ ಅವರ ಗೆಲುವಿಗೆ ತಾವೆಲ್ಲರೂ ಮತ ನೀಡಬೇಕೆಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಜಮಖಂಡಿಯ ನ್ಯಾಯವಾಧಿ ವಿ.ವಿ. ತುಳಸಿಗೇರಿ, ಬೆಂಗಳೂರ ರೆಡ್ಡಿ ಜನಸಂಘ ನಿರ್ದೇಶಕ ಕೃಷ್ಣಾ ರೆಡ್ಡಿ, ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಖಂಜಾಚಿ ಎಸ್.ಆರ್.ಸೋನವಾಲ್ಕರ ಮಾತನಾಡಿ ಈ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಕೃಷ್ಣರಾಜು, ಎಸ್.ಮನೋಹರ, ಎಮ್.ಎ.ಸಲೀಮ್, ವಿ.ಶಂಕರ್, ಜಿ.ಜರ್ನಾಧನ್, ಎ.ಆನಂದ, ಪುಟ್ಟುರಾಜು, ಕೆ.ಟಿ.ಗಾಣಿಗೇರ ಸೇರಿದಂತೆ ಸ್ಥಳೀಯ ಮುಖಂಡರ ಉಪಸ್ಥಿತರಿದರು.
