ಜಾತ್ರೆ,ಹಬ್ಬಗಳು ದೇಶೀಯ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತವೆ
ಮೂಡಲಗಿ:- ಮಾನವನ ನಾಗರೀಕತೆಯಲ್ಲಿ ಸಂಪ್ರದಾಯ ಆಚರಣೆಗಳು, ಮಹತ್ವದ ಪಾತ್ರವಹಿಸುತ್ತವೆ.ಇಂತಹ ಸಂದರ್ಭದಲ್ಲಿ ಜಾತ್ರೆ.ಹಬ್ಬಗಳು ದೇಶೀಯ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಹಾಗೂ ಗೋಕಾಕದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು.
ಸಮೀಪದ ಫುಲಗಡ್ಡಿ ಗ್ರಾಮದಲ್ಲಿ ಕಳೆದ ಸೋಮವಾರದಂದು ಶ್ರೀ ಚಂದ್ರಮ್ಮ ತಾಯಿ ಹಾಗೂ ಶ್ರೀ ಶೆಟ್ಟೆಮ್ಮದೇವಿ ಮತ್ತು ಬಬಲಾದಿ ಶ್ರೀ ಸದಾಶಿವ ಮಹಾಶಿವಯೋಗಿಗಳ ಜಾತ್ರಾ ನಿಮಿತ್ಯ ಹಮ್ಮಿಕೊಂಡಿದ್ದ ಪ್ರವಚನ ಮತ್ತು ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಸಳಿಗುಂದಿ, ನಾಗನೂರ, ಕಮಲದಿನ್ನಿ.ಪಟಗುಂದಿ ಗ್ರಾಮದ ಕಲಾವಿದರಿಂದ ಭಜನೆ ಹಾಗೂ ಹುಕ್ಕೇರಿಯ ಶ್ರೀಅಡವಿಸಿದ್ದೇಶ್ವರ ಜಾನಪದ ಕಲಾವಿದರ ಸಂಘದವರಿಂದ “ರಾಧಾನಾಟ” ಪ್ರದರ್ಶನ ಜರುಗಿತು. ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು. ಶ್ರೀಕಲ್ಮೇಶ್ವರ ಸ್ವಾಮೀಜಿ, ಶ್ರೀ ಚಿದಾನಂದ ಸ್ವಾಮೀಜಿ ಶರಣ ನಾರಾಯಣ ಜಾಧವ ಪ್ರವಚನ ನಡೆಸಿದರು. ವಡೇರಹಟ್ಟಿ ಗ್ರಾಮ ಪಂಚಾಯತ ಸದಸ್ಯರಾದ ಅಶೋಕ ಹುಚರಡ್ಡಿ. ತುಕಾರಾಮ ಪಾಟೀಲ. ಯಮನಪ್ಪ ಸಣ್ಣಕ್ಕಿ. ಲಕ್ಷ್ಮೀ ಬಾಪುಕುರಿ. ತಂಗೆವ್ವಾ ಬಾಜನವರ ಉಪಸ್ಥಿತರಿದ್ದರು, ನಂತರ ಗ್ರಾಮದ ಮುಖ್ಯರಸ್ತೆಗಳಲ್ಲಿ ಸುಮಂಗಲೆಯರ ಆರತಿ.ಕುಂಭ ಹಾಗೂ ದೇವರ ಪಲ್ಲಕ್ಕಿ ಉತ್ಸವ ಜರುಗಿತು. ಆನಂದ ಸೊರಗಾಂವಿ ನಿರೂಪಿಸಿದರು. ಯಮನಪ್ಪ ಮಾದರ ಸ್ವಾಗತಿಸಿ ವಂದಿಸಿದರು.