ಕೊವಿಡ್-19 ನಿಯಮ ಪಾಲಿಸದ ಅಂಗಡಿಕಾರರಿಗೆ ದಂಡ
ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಪುರಸಭೆ ಸಿಬ್ಬಂದಿ ಗುರುವಾರ ಕಾರ್ಯಾಚರಣೆ ನಡೆಸಿ ಕೊವಿಡ್-19 ನಿಯಮ ಪಾಲಿಸದ ಅಂಗಡಿಕಾರರಿಗೆ ಮತ್ತು ಮಾಸ್ಕ ಹಾಕದ 45 ಜನರಿಗೆ ತಲಾ 100 ರೂ. ರಂತೆ ದಂಡ ವಿಧಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಮಾತನಾಡಿ, ಈ ಕಾರ್ಯಾಚರಣೆ ಪ್ರತಿನಿತ್ಯ ನಡೆಯುತ್ತದೆ. ಅಂಗಡಿಕಾರರು ಹಾಗೂ ವ್ಯಾಪಾರಸ್ಥರು ಕೋವಿಡ್-19ರ ನಿಯಮ ಪಾಲನೆ ಅಗತ್ಯವಿದ್ದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸುವದು, ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಇದರ ಉಲ್ಲಂಘನೆ ಮಾಡಿದರಿಗೆ ದಂಡದ ಜೋತೆಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವದು ಎಂದರು.
ಪುರಸಭೆಯ ಆರೋಗ್ಯಾಧಿಕಾರಿ ಚಿದಾನಂದ ಮೂಗಳಖೋಡ, ಪ್ರೀತಮ ಬೋವಿ, ಪಾಂಡು ಬಂಗೇನ್ನವರ, ಎಸ್.ಬಿ.ಚಿಕೋನ, ಎಮ್.ಎಸ್.ಪಾಟೀಲ, ಸಿ.ಬಿ.ಪಾಟೀಲ, ಎನ್.ಪಿ.ಬುರಡ ಇದ್ದರು.
ಜನ ಜಾಗೃತಿ: ಸ್ಥಳೀಯ ಪುರಸಭೆ ಮತ್ತು ಪೋಲಿಸ್ ಇಲಾಖೆಯಿಂದ ಧ್ವನಿವರ್ಧಕ ಮೂಲಕ ಕರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಪಟ್ಟಣದ ಎಲ್ಲ ವಾರ್ಡಗಳಲ್ಲಿ ಜನಜಾಗೃತಿ ಮೂಡಿಸಲಾಯಿತು.
