ಮೂಡಲಗಿ ಪಟ್ಟಣ ಧಿಡೀರ್ ಬಂದ್ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕಂಗಾಲು
ದಿನಸಿ ವಸ್ತುಗಳ ಖರೀದಿಗೆ ಮುಗಿಬಿದ್ದ ಮೂಡಲಗಿ ಜನತೆ
ಮೂಡಲಗಿ : ನೈಟ್ ಕರ್ಫ್ಯು ಮುಗಿಸಿ ಇವತ್ತು ಬೆಳಿಗ್ಗೆಯಿಂದ ವ್ಯಾಪಾರ ವಹಿವಾಟಿಗೆ ಮರಳಿದ ವ್ಯಾಪಾರಿಗಳಿಗೆ ಇಂದು ಮಧ್ಯಾಹ್ನ ಶಾಕೀಂಗ್ ಆದೇಶ ಎದುರಾಗಿದೆ,ಮದ್ಯಾಹ್ನ 4 ಗಂಟೆಯಿಂದಲೇ ಪೋಲೀಸರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ತುರ್ತು ಆದೇಶ ಹೊರಡಿಸಿ ಅಗತ್ಯವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಪೋಲೀಸ್ ವಾಹನಗಳ ಸೈರನ್ ಸದ್ದು ಮೂಡಲಗಿ ಪಟ್ಟಣ ಸಂಪೂರ್ಣ ಸ್ತಭ್ದಗೊಳಿಸಿದೆ.
ಇನ್ನೂ ಪಟ್ಟಣದಲ್ಲಿ ಧಿಡೀರ್ ಬಂದ್ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕಂಗಾಲು ಆಗಿ ದಿನಸಿ ವಸ್ತುಗಳ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ.
ಪೋಲೀಸರು ಪಟ್ಟಣದ ಕೆಲವು ಸರ್ಕಲ್ ಗಳಲ್ಲಿ ಧ್ವನಿವರ್ದಕಗಳ ಮೂಲಕ ಸೈರನ್ ಸದ್ದಿನ ಜೊತೆಗೆ ಅಂಗಡಿಗಳನ್ನು ಬಂದ್ ಮಾಡಿಸುವ ಕಾರ್ಯಾಚರಣೆ ಆರಂಭಿಸಿದ್ದು, ಜನರಲ್ಲಿ ಮತ್ತೇ ಲಾಕ್ ಡೌನ್ ಕಹಿ ಘಟನೆ ನೆನಪಿಸುತ್ತಿದೆ.