ಮೂಡಲಗಿ: ಕೊರೋನಾ ಮಹಾಮಾರಿ ಹಿಮ್ಮೆಟ್ಟಿಸಲು ಸಾಮಾಜಿಕ ಅಂತರ ಮಾಸ್ಕ್ ಉಪಯೋಗಿಸಿ ಅಗತ್ಯವಿದ್ದಲ್ಲಿ ಮಾತ್ರ ಹೋರ ಬರಬೇಕು. ಅನಗತ್ಯವಾಗಿ ತಿರಗಾಡ ಬೇಡಿ, ವಾಹನ ಸವಾರರು ಅನವಶ್ಯಕವಾಗಿ ತಿರುಗುವವರ ಮೇಲೆ ಕೊವೀಡ-19 ನಿಯಮಾನುಸಾರ ದಂಡವನ್ನು ವಿಧಿಸಲಾಗುತ್ತಿದೆ ಎಂದು ಮೂಡಲಗಿ ಪೊಲೀಸ್ ಠಾಣೆಯ ಪಿಎಸ್‍ಐ ಹಾಲಪ್ಪ ಬಾಲದಂಡಿ ಹೇಳಿದರು.
ಅವರು ನಗರದಲ್ಲಿ ವಾರಾಂತ್ಯದ ಕೊರೋನಾ ಕರ್ಫೋ ಹಿನ್ನೆಲೆ ಎರಡನೇಯ ದಿನದಂದು ಅನವಶ್ಯಕವಾಗಿ ತಿರುಗುವವರಿಗೆ ದಂಡ ವಿಧಿಸಿ, ಸರಕಾರ ಜಾರಿಗೋಳಿಸುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಡೆದು ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳ ಬೇಕು. ಮೂಡಲಗಿ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಬವಿಸಿರುವದಿಲ್ಲ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಿಬ್ಬಂದಿಯವರಿಂದ ಅಗತ್ಯ ಮುನ್ನೆಚ್ಚರಿಕೆ ಜಾಗೃತತೆ ಕಾಪಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎ ಎಸ್ ಐ ಸಿ.ಎಲ್ ಗಸ್ತಿ, ಡಿ.ಜಿ ಕೊಣ್ಣೂರ, ಶಂಕರ ಹಂಚ್ಯಾನಟ್ಟಿ, ಸದಾಶಿವ ತಳವಾರ, ಮಹಾಂತೇಶ ಕಾಂಬಳೆ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದರು.
