ಬೆಳಗಾವಿ : ಸರಕಾರದ ಸೂಚನೆಯ ಪ್ರಕಾರ ಇತ್ತೀಗೆ ಮಂಡ್ಯ ಜಿಲ್ಲಾ ಪತ್ರಕರ್ತರ ಕೋವಿಡ-19 ಪರೀಕ್ಷೆ ನಡೆಸುತ್ತಿರುವ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಶ್ರೀ ಕೃಷಿಕಗೌಡ ಹಾಗೂ ಅವರ ಬೆಂಬಲಿಗರು ಸೇರಿಕೊಂಡು ಕೊರೊನಾ ತಪಾಸಣೆ ನಡೆಸುತ್ತಿದ್ದ ಅಧಿಕಾರಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಹೊಸ ಕಾನೂನಿನ ಪ್ರಕಾರ ಇನ್ನೊಂದು ಎಫ್.ಆಯ್.ಆರ್. ದಾಖಲಿಸುವಂತೆ ನಿರ್ದೇಶನ ನೀಡಲು ಮಾನ್ಯ ಗ್ರಹ ಸಚಿವರಿಗೆ ಹಾಗೂ ಎಸ್.ಪಿ. ಮಂಡ್ಯ ಜಿಲ್ಲೆ ಇವರಿಗೆ ದೂರು ನೀಡಲಾಗಿದೆ ಎಂದು ಮಾಹಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ.
ಮಂಗಳವಾರದಂದು ಪತ್ರಕರ್ತರ ಜೊತೆ ಮಾತನಾಡಿದ ಅವರು ಕೊರೊನಾ ವಿರುದ್ದದ ಹೋರಾಟದಲ್ಲಿ ತೊಡಗಿದವರ ಮೇಲೆ ಹಲ್ಲೆ ನಡೆಸುವುದು ಹಾಗೂ ತಪಾಸಣೆ, ಚಿಕಿತ್ಸೆ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾದವೆಂದು ಘೋಷಿಸಿರುವ ನಮ್ಮ ಸರಕಾರ ಕೇರಳಾ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಮಾದರಿಯಲ್ಲಿ ಸುಗ್ರಿವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ತಂದಿದ್ದು ಇದಕ್ಕೆ ಈಗಾಗಲೇ ರಾಜ್ಯಪಾಲರು ಅಂಕಿತ ಕೂಡಾ ಹಾಕಿದ್ದಾರೆ.
ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಬಂಧಿಸಿದ ಈ ಕಾನೂನಿಗೆ “ಕರ್ನಾಟಕ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ 2020” ಎಂದು ಹೆಸರಿಸಲಾಗಿದೆ. ಇದರ ಪ್ರಕಾರ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದಂತೆ ಕಾಲ-ಕಾಲಕ್ಕೆ ಸರ್ಕಾರ ವಿಧಿಸುತ್ತಿರುವ ನಿರ್ಬಂಧಗಳ ಉಲ್ಲಂಘಣೆ ಹಾಗೂ ಈ ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಅಡಚಣೆ ಮಾಡಿದ್ದಲ್ಲಿ 3 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂಗಳ ದಂಡ ವಿಧಿಸಲಾಗುವ ಪರಿಸ್ಥಿತಿ ಹೀಗಿರುವಾಗ ಎಮ್.ಎಲ್.ಸಿ. ಹಾಗೂ ಅವರ ಪುತ್ರ ಮತ್ತು ಅವರ ಬೆಂಬಲಿಗರನ್ನು ಕಾನೂನಿನಿಂದ ರಕ್ಷಿಸಲು ರಾಜಕೀಯ ಒತ್ತಡಕ್ಕೆ ಸಿಲುಕಿದ ಪೋಲಿಸರು ಇವರ ಮೇಲೆ ಜಾಮೀನು ಸಿಗುವಂತೆ ಸಾಮಾನ್ಯ ಕೇಸು ದಾಖಲಿಸಿರುವುದನ್ನು ನೋಡಿದರೆ ಸರಕಾರವು ಕಾನೂನಿನ ಪರವಾಗಿ ಇರುವುದೇ? ಎಂಬ ಅನುಮಾನ ಬರದೆ ಇರಲಾರದು ಎಂದು ಹೇಳಿದರು.
ಗಮನಿಸಬೇಕಾದ ಅಂಶವೆಂದರೆ ಮಾಸ್ಕ್ ದರಿಸಿಲ್ಲ ಹಾಗೂ ಪೋಲೀಸರೊಂದಿಗೆ ವಾದ ಮಾಡಿದ ಎಂಬ ಒಂದೇ ಕಾರಣದಿಂದ ಸಿ.ಆರ್.ಪಿ.ಎಪ್. ಯೋದನೊಬ್ಬನನ್ನು ಮನಸ್ಸಿಗೆ ಬಂದಂತೆ ತಳಿಸಿ ಇದೇ ಪೋಲಿಸರು ಈ ಯೋಧನ ಕೈಗೆಗಳಿಗೆ ಬೇಡಿ ತೊಡಿಸಿ ಜೈಲಿಗೆ ಕಳುಹಿಸಿರುವ ಪ್ರಕರಣವು ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವುದು. ಇದನ್ನು ಗಮನಿಸಿದಾಗ ರಾಜಕಾರಣಿಗಳಿಗೊಂದು ಕಾನೂನು, ಜನ ಸಾಮಾನ್ಯರಿಗೊಂದು ಕಾನೂನು ಇರುವುದೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಿದರು.
ಕಾರಣ ಸರಕಾರ ಕಾನೂನಿನ ಪ್ರಕಾರವೇ ಕಾರ್ಯನಿರ್ವಹಿಸುತ್ತಿದ್ದರೇ ಕೋವಿಡ್ ಪರೀಕ್ಷೆಗೆ ಅಡ್ಡಿಪಡಿಸಿದವರ ಮೇಲೆ ಹೊಸ ಕಾನೂನಿನ ಪ್ರಕಾರ ಇನ್ನೊಂದು ಎಫ್.ಆಯ್.ಆರ್. ದಾಖಲಿಸುವುದರ ಮೂಲಕ ಕಾನೂನಿನ ಘನತೆ-ಗೌರವಗಳನ್ನು ಹೆಚ್ಚಿಸುವಂತೆ ಗ್ರಹ ಸಚಿವರಿಗೆ ಬರೆದಿರುವ ಈ ದೂರಿನಲ್ಲಿ ವಿನಂತಿಸಲಾಗಿದೆ.
ಭೀಮಪ್ಪ ಗಡಾದ
(ಉತ್ತರ ಕರ್ನಾಟಕ ಹೋರಾಟ ಸಮೀತಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ )