Breaking News
Home / Recent Posts /   ಶ್ರೀ ಬಸವೇಶ್ವರ ಸೋಸೈಟಿಗೆ 3.35 ಕೋಟಿ ರೂ ನಿವ್ಹಳ ಲಾಭ

  ಶ್ರೀ ಬಸವೇಶ್ವರ ಸೋಸೈಟಿಗೆ 3.35 ಕೋಟಿ ರೂ ನಿವ್ಹಳ ಲಾಭ

Spread the love

  ಶ್ರೀ ಬಸವೇಶ್ವರ ಸೋಸೈಟಿಗೆ 3.35 ಕೋಟಿ ರೂ ನಿವ್ಹಳ ಲಾಭ

ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಶ್ರೀ ಬಸವೇಶ್ವರ ಅರ್ಬನ್ ಕೋ-ಆಫ್.ಕ್ರೆಡಿಟ್ ಸೊಸಾಯಿಟಿಯು ಆರ್ಥಿಕ ವರ್ಷ ಮಾರ್ಚ ಅಂತ್ಯಕ್ಕೆ 3 ಕೋಟಿ 35 ಲಕ್ಷ ರೂ ಲಾಭಗಳಸಿ ಪ್ರಗತಿ ಪಥದತ್ತ ಸಾಗಿದೆ ಎಂದು ಸೊಸಾಯಿಟಿ ಅಧ್ಯಕ್ಷ ಬಸವರಾಜ ಮ ತೇಲಿ ತಿಳಿಸಿದರು.
ಸೋಸಾಯಿಟಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸೋಸಾಯಿಟಿಯ ಪ್ರಗತಿ ನೋಟವನ್ನು ವಿವರಿಸಿ ಸಂಘವು ಮಾರ್ಚ ಅಂತ್ಯಕ್ಕೆ 4.18 ಕೋಟಿ ಶೇರು ಬಂಡವಾಳ, ಸಾರ್ವಜನಿಕ ವಲಯದಿಂದ 122 ಕೋಟಿ ರೂ. ಠೇವು ಸಂಗ್ರಹಿಸಿ, ಸದಸ್ಯರಿಗೆ 87 ಕೋಟಿ ರೂ. ವಿವಿಧ ಸಾಲ ವಿತರಿಸಿಲಾಗಿದೆ ಠೇವಣಿ ಭದ್ರತೆಗಾಗಿ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಸೂಮಾರು 40 ಕೋಟಿ ರೂ ಗುಂತಾವಣಿ ಮಾಡಿದು, ಮಾರ್ಚ ಅಂತ್ಯಕ್ಕೆ 144 ಕೋಟಿ ರೂ ದುಡಿಯುವ ಬಂಡವಾಳ ಒಟ್ಟು 10255 ಸದಸ್ಯರನ್ನು ಹೊಂದಿ ಗ್ರಾಹಕರಿಗೆ ತ್ವರಿತ ಗತಿಯ ಸೇವೆ ಸಲ್ಲಿಸಲು ಸಂಸ್ಥೆಯು ಸಂಪೂರ್ಣ ಗಣಕೀಕೃತ ಸೇವೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ಸೊಸಾಯಿಟಿ ಉಪಾಧ್ಯಕ್ಷ ಗಿರೀಶ ಢವಳೇಶ್ವರ ಮಾತನಾಡಿ, 1995-96 ರಲ್ಲಿ ಪ್ರಾರಂಭವಾದ ಸೊಸಾಯಿಟಿಯು ಇಂದು ಪ್ರಧಾನ ಕಛೇರಿ ಹಾಗೂ 16 ಶಾಖೆಗಳನ್ನು ಹೊಂದಿದೆ ಪ್ರಧಾನ ಕಛೇರಿಯು ಆಧುನಿಕ ಮಾದರಿಯ ಸುಸಜ್ಜಿತ ಕಟ್ಟಡ ಹೊಂದಿದೆ. ಗುರ್ಲಾಪೂರ ಹುಣಶ್ಯಾಳ ಯಾದವಾಡ ,ಯರಗಟ್ಟಿ ನಾಗನೂರ ವಡೇರಹಟ್ಟಿ ಮುಗಳಖೋಡ ಹಂದಿಗುಂದ ಅಥಣಿ ಕಬ್ಬೂರ ಗೋಕಾಕ ಬೆಟಗೇರಿ ಮುಧೋಳ ಮತ್ತು ಮಹಾಲಿಂಗಪೂರ ಒಟ್ಟು 15 ಶಾಖೆಗಳನ್ನು ಹೊಂದಿದ್ದು ಎಲ್ಲಾ ಶಾಖೆಗಳು ಲಾಭ ಹೊಂದಿ ಪ್ರಗತಿಪಥದಲ್ಲಿ ಮುನ್ನುಗುತ್ತಿದೆ ಎಂದರು.
ಸೋಸಾಯಿಟಿಯ ಪ್ರಧಾನ ವ್ಯವಸ್ಥಪಕರಾದ ಬಸವರಾಜ ಬಡಿಗೇರ ಮಾತನಾಡಿ, ರೈತರಿಗೆ, ವ್ಯಾಪಾರಸ್ಥರಿಗೆ, ಕೂಲಿ-ಕಾರ್ಮಿಕರಿಗೆ ಸಾಲ ಸೌಲಭ್ಯ ಒದಗಿಸಿ ಗ್ರಾಮೀಣ ಜನರನ್ನು ಆರ್ಥೀಕವಾಗಿ ಅಭಿವೃದ್ಧಿ ಪಡಿಸುವ ಮತ್ತು ಸಮಾಜದಲ್ಲಿನ ಆರ್ಥೀಕ ಅಸಮತೋಲನವನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಇದರ ಜೊತೆಗೆ ಸೊಸಾಯಿಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಲಾಗಿದೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಚನ್ನಬಸು ಬಡ್ಡಿ, ಶ್ರೀಕಾಂತ ಹಿರೇಮಠ, ರವೀಂದ್ರ ಭಾಗೋಜಿ, ಶ್ರೀಶೈಲ ಮದಗಣ್ಣವರ, ಮಲ್ಲಿಕಾರ್ಜುನ ಢವಳೇಶ್ವರ, ದೇವಪ್ಪ ಕೌಜಲಗಿ, ಕುಸುಮಾ ತೇಲಿ, ಸುಮಿತ್ರಾ ಶೇಡಬಾಳ, ಮಹಾದೇವಿ ಹಿರೇಮಠ, ಲಕ್ಷ್ಮಣ ತೆಳಗಡೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ