ಮೂಡಲಗಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಲಾಕ್‍ಡೌನ್..!
ವಾಹನ, ಜನರ ಮೇಲೆ ಕಠಿಣ ಕ್ರಮ
ಯಾರು ಬೀದಿಗಿಳಿಯದಂತೆ ಎಚ್ಚರಿಕೆ
ಪಟ್ಟಣದ ಜನಪ್ರತಿನಿಧಿಗಳ ನಿಣರ್ಯ
ಮೂಡಲಗಿ: ಎರಡನೇ ಅಲೆಯ ಮಹಾಮಾರಿ ಕೊರೋನಾ ಇಡೀ ದೇಶಾದ್ಯಂತ ತನ್ನ ಲಕ್ಷಣಗಳನ್ನು ಬದಲಾವಣೆ ಮಾಡಿಕೊಂಡು ಹದ್ದು ಮೀರುತ್ತಿರುವುದರಿಂದ ಅರಭಾವಿ ಮತಕ್ಷೇತ್ರದ ಜನತೆಯ ಸುರಕ್ಷೆತೆ ದೃಷ್ಟಿಯಿಂದ ಶಾಸಕರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತವಾಗಿ ಪಟ್ಟಣವನ್ನು ಲಾಕ್‍ಡೌನ್ ಮಾಡಲಾಗಿದ್ದು ಸೂಕ್ತವಾಗಿದೆ ಎಂದು ನಿವೃತ್ತ ವೈದ್ಯಾಧಿಕಾರಿ ಆರ್ ಎಸ್ ಬೆಂಚಿನಮರಡಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರದಂದು ಪುರಸಭೆ ಆವರಣದಲ್ಲಿ ಆಯೋಜಿಸದ ತಾಲೂಕಾಡಳಿತ ಸಭೆಯಲ್ಲಿ ಮಾತನಾಡಿದ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕ್ಷೇತ್ರದ ಜನತೆಯ ಮೇಲೆ ಇಟ್ಟಿರುವ ಕಾಳಜಿಯಿಂದ ಈ ಮಹಾಮಾರಿ ಕೊರೋನಾ ನಿಯಂತ್ರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೊರೋನಾ ಸೋಂಕಿತರ ಪಾಲಿಗೆ ಸಂಜೀವಿನಿಯಾಗಿರುವ ಆಕ್ಸಿಜನ್ ಸಿಲಿಂಡರ್ ಗಳನ್ನು ತಮ್ಮ ಸ್ವಂತ ಹಣದಲ್ಲಿ ಖರೀದಿಸಿದ್ದಾರೆ ಎಂದು ಹೇಳಿದರು.
ದಿನೇ ದಿನೇ ಕೊರೋನಾ ಹಾವಳಿ ಹೆಚ್ಚುತ್ತಿದೆ. ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಕೊಳ್ಳುತ್ತಿದ್ದರೂ ಅಲೆಯ ಅರ್ಭಟ ಮುಂದುವರೆದಿದೆ. ಇದಕ್ಕೆ ಸಂಪೂರ್ಣ ಲಾಕ್ ಡೌನ್ ಯೊಂದೇ ಪರಿಹಾರವಾಗಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಿ ಕೊರೋನಾ ವೈಸರ್‍ದಿಂದ ಭಯಭೀತರಾಗದೆ, ಸರ್ಕಾರದ ನಿಯಮಗಳನ್ನು ಪಾಲಿಸಿ, ಕೊರೋನಾ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರಿಗೆ ಭೇಟಿ ಮಾಡಿ ಮನೆಯಲ್ಲೆ ಚಿಕಿತ್ಸೆ ಪಡೆಯಬಹುದು ಎಂದು ಕ್ಷೇತ್ರ ಜನತೆಗೆ ಸಲಹೆ ನೀಡಿರು.
ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಕಾರಣ ಇಲ್ಲದೆ ಓಡಾಡುವುದು, ಬೀದಿಗಳಲ್ಲಿ ವಾಹನಗಳ ಮೇಲೆ ತೀರುಗಾಡುವುದಕ್ಕೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಕಡಿವಾಣ ಹಾಕಬೇಕು. ಮನೆಯಲೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ, ಸಭೆ-ಸಮಾರಂಭಗಳಿಂದ ದೂರವಿರುವುದರಿಂದ ತಮ್ಮ ಜೀವದ ಜೊತೆಗೆ ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ಮೋಹನಕುಮಾರ ಭಸ್ಮೆ, ಆರಕ್ಷಕ ಉಪಾಧೀಕ್ಷಕ ಜಾವೇದ ಇನಾಮದಾರ. ಹಾಗೂ ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ಕಾರ್ಯನಿರ್ವಾಹಕ ಅಧಿಕಾರಿ ಸಂಗಮೇಶ ರೊಡ್ಡನ್ನವರ, ತಾಲೂಕಾ ವೈದ್ಯಾಧಿಕಾರಿ ಭಾರತಿ ಕೋಣಿ, ಸಿಪಿಐ ಶ್ರೀಶೈಲ ಬ್ಯಾಕೂಡ, ಸಿಡಿಪಿಒ ವಾಯ್.ಎಂ ಗುಜನಟ್ಟಿ, ತಾಲೂಕಾ ವಿಸ್ತರಣಾಧಿಕಾರಿ ಆರ್.ಕೆ.ಬಿಸಿರೊಟ್ಟಿ, ಪಿಎಸ್‍ಐ ಎಚ್ ವೈ ಬಾಲದಂಡಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಖಾ ಹಾದಿಮನಿ, ಮುಖ್ಯಾಧಿಕಾರಿ ದೀಪಕರ ಹರ್ದಿ ಹಾಗೂ ಪುರಸಭೆಯ ಎಲ್ಲ ಸದಸ್ಯರು ಉಪಸ್ಥಿತಿರಿದ್ದರು.