ಮೂಡಲಗಿ : ಪಟ್ಟಣದ ಸಮುದಾಯ ಆರೋಗ್ಯದ ಕೇಂದ್ರಕ್ಕೆ ರವಿವಾರದಂದು ಮೂಡಲಗಿ ತಹಶೀಲ್ದಾರ ಡಾ.ಮೋಹನಕುಮಾರ ಭಸ್ಮೆ ಭೇಟಿ ನೀಡಿ, ಕೋವಿಡ್ ಪ್ರಕರಣಗಳ ಪರಿಸ್ಥಿತಿ ಅವಲೋಕನ ಸ್ವಚ್ಛತೆ, ಚಿಕಿತ್ಸೆ, ಸೋಂಕಿತರ ಸಮಸ್ಯೆಗಳ ಮಾಹಿತಿ ಪಡೆದರು.
ಸನ್ 2017ರಲ್ಲಿ ವೈದ್ಯ ವೃತ್ತಿಯನ್ನು ತ್ಯಜೀಸಿ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿರುವ ಡಾ ಮೋಹನಕುಮಾರ ಭಸ್ಮೆ ಅವರು ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಆರೋಗ್ಯದ ಬಗ್ಗೆ ತಪಾಸಣೆ ಮಾಡಿ, ಯಾವುದೇ ಕಾರಣಕ್ಕೂ ಭಯಭೀತರಾಗದೆ ಚಿಕಿತ್ಸೆಯನ್ನು ಪಡೆದುಕೊಳ್ಳಿ, ಸರಿಯಾಗಿ ಆಹಾರ ಸೇವಿಸಿ, ಮಾತ್ರೆಗಳನ್ನು ತೆಗೆದುಕೊಳ್ಳಿ ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ ನಿಮ್ಮ ಸಹಾಯಕ್ಕೆ ಇಡೀ ತಾಲೂಕಾಡಳಿತವೆ ಇದೆ ಎಂದು ಸೋಂಕಿತರಿಗೆ ಧೈರ್ಯ ತುಂಬವoತ ಕೆಲಸ ಮಾಡಿದರು.
ಕೋವಿಡ್ ಕೇಂದ್ರದಲ್ಲಿ ಇರುವ ವೈದ್ಯರಿಗೆ ಸೋಂಕಿತರಿಗೆ ಯಾವುದೇ ತರಹದ ತೊಂದರೆ ಉಂಟಾಗದ ಹಾಗೆ ನೋಡಿಕೊಳ್ಳಿ. ಏನಾದ್ರೂ ಸಮಸ್ಯೆ ಉಂಟಾದ ಕೂಡಲೇ ನಮ್ಮ ಗಮನಕ್ಕೆ ತನ್ನಿ ಎಂದು ಸೂಚಿಸಿದರು.
ಸಾರ್ವಜನಿಕರು ಕೋವಿಡ್ ತುರ್ತ ಪರಿಸ್ಥಿತಿಯಲ್ಲಿ ಮೂಡಲಗಿ ತಾಲೂಕಾಡಳಿತ ಅಧಿಕಾರಿಗಳ ದೂರವಾಣಿ ಮೂಲಕ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ : ತಹಶೀಲ್ದಾರ ಮೂಡಲಗಿ-7411808027, ಮುಖ್ಯಾಧಿಕಾರಿಗಳು ಪುರಸಭೆ ಮೂಡಲಗಿ-9448436768, ಆರಕ್ಷಕ ವೃತ್ತ ನಿರೀಕ್ಷಕರು ಮೂಡಲಗಿ-9480804035, ಆರೋಗ್ಯ ಅಧಿಕಾರಿಗಳು ಮೂಡಲಗಿ-9448800385, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮೂಡಲಗಿ-9480854135, ತಾಲೂಕಾ ಆರೋಗ್ಯ ಅಧಿಕಾರಿಗಳು ಗೋಕಾಕ-9449650534, ಆರಕ್ಷಕ ನಿರೀಕ್ಷಕರು ಘಟಪ್ರಭಾ-9480804070, ಕೋವಿಡ್ ವಾರ್ ರೂಮ್ ಸಹಾಯವಾಣಿ-08334-295019 ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಎಚ್‌ಓ ಮುತ್ತಣ್ಣಾ ಕೋಪದ, ತಾಲೂಕಾ ಆರೋಗ್ಯಧಿಕಾರಿ ಭಾರತಿ ಕೋಣಿ, ಶಿವಲಿಂಗ ಪಾಟೀಲ, ವಿಠ್ಠಲ ಪಾಟೀಲ, ವೀಣಾ ನಾವಿ, ಹಣಮಂತ ಹೀರೆಮೈತ್ರಿ ಮತ್ತು ಸಿಬ್ಬಂಧಿಗಳು ಉಪಸ್ಥಿತಿದರು.