Breaking News
Home / ತಾಲ್ಲೂಕು / ವಿದ್ಯಾರ್ಥಿನಿಯ ಪ್ರತಿಭೆಗೆ ಅಡ್ಡಿಯಾಗಲಿಲ್ಲ ಬಡತನ,  ಅನಾಥೆಯಾದರೂ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿ ಸಾಧನೆ

ವಿದ್ಯಾರ್ಥಿನಿಯ ಪ್ರತಿಭೆಗೆ ಅಡ್ಡಿಯಾಗಲಿಲ್ಲ ಬಡತನ,  ಅನಾಥೆಯಾದರೂ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿ ಸಾಧನೆ

Spread the love

ವಿದ್ಯಾರ್ಥಿನಿಯ ಪ್ರತಿಭೆಗೆ ಅಡ್ಡಿಯಾಗಲಿಲ್ಲ ಬಡತನ 
ಅನಾಥನಾದರೂ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿ ಸಾಧನೆ

ಮೂಡಲಗಿ : ತೀರ ಆರ್ಥಿಕ ಮುಗ್ಗಟ್ಟಿನಲ್ಲಿ ಹಾಗೂ ಈ ಮಾಹಾಮಾರಿ ಕೊರೋನಾದಿಂದ ಬಡ ಕುಟುಂಬದವರಿಗೆ ತುಂಬಾ ಕಷ್ಟವಾಗಿದೆ ಹೀಗಿರುವಾಗ ಬಡ ಕುಟುಂಬದ ವಿದ್ಯಾರ್ಥಿನಿಯೊಬ್ಬಳು ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ,95.68 ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ.
ಸ್ಥಳೀಯ ಮೇಘಾ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ತನ್ನ ಅನಾಥನಾದರೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದುದನ್ನು ಸಾಬೀತು ಮಾಡಿದ್ದಾಳೆ.
ಹೌದು ಈ ವಿದ್ಯಾರ್ಥಿನಿಯ ಕಥೆ ಕೇಳಿದರೆ ಎಂಥವರ ಹೈದಯವೂ ಒಂದರೆಕ್ಷಣ ಮಿಡಿಯದೆ ಇರದು, ತಾಲೂಕಿನ ಹಳ್ಳೂರ ಗ್ರಾಮದ ಹೋಳಪ್ಪ ಕೊಂಗಾಲಿಯವರ ಮುದ್ದಿನ ಮಗಳು. ವಿದ್ಯಾರ್ಥಿನಿಯೂ ಸಣ್ಣ ವಯಸ್ಸಿನಲ್ಲೇ ಅಪ್ಪ, ಅಮ್ಮ, ಅಜ್ಜ, ಅಜ್ಜಿಯನ್ನು ಕಳೆದುಕೊಂಡಿದ್ದಾಳೆ.ಈಕೆಯ ಸಹೋದರ ಸಹ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲೂ ಕೂಡಾ ಸಾಧನೆ ಮಾಡಿದ್ದಾನೆ, ಈ ಅನಾಥ ಮಕ್ಕಳಿಗೆ ತಂದೆಯ ಸ್ಥಾನದಲ್ಲಿ ಮೂಡಲಗಿ ವಲಯದ ಕ್ಷೇತ್ರ ಶೀಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಈ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಸಹಕಾರ ಮಾಡಿರುವ ಪ್ರತಿಫಲವೇ ಈ ಮಕ್ಕಳ ಸಾಧನೆಗೆ ಮೂಲಕ ಕಾರಣ.

ಇನ್ನೂ ಈ ವಿದ್ಯಾರ್ಥಿನಿಗೆ ಮೇಘಾ ಶಾಲಾ ಆಡಳಿತ ಮಂಡಳಿಯೂ ಸಹ ಅನಾಥ ವಿದ್ಯಾರ್ಥಿನಿ ಎಂಬ ಕಾರಣಕ್ಕೆ ತಮ್ಮ ಶಾಲೆಯಲ್ಲಿ ಶುಲ್ಕದಲ್ಲಿ ಕಡಿಮೆ ಮಾಡಿ, ಅವಳ ಶಿಕ್ಷಣಕ್ಕೆ ಬೇಕಾಗುವ ಎಲ್ಲ ಸೌಲಭ್ಯವನ್ನು ನೀಡಿದ್ದಾರೆ. ಈ ಋಣವನ್ನು ಶಾಲೆಗೆ ಪ್ರಥಮ ಸ್ಥಾನ ಪಡೆಯುವ ಮೂಕಲ ಆಡಳಿತ ಮಂಡಳಿಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

ಎಲ್ಲಿ ಪ್ರಯತ್ನದ ಎತ್ತರ ಜಾಸ್ತಿ ಆಗಿರುತ್ತದೆಯೋ, ಅಲ್ಲಿ ಅದೃಷ್ಟ ತಲೆಬಾಗುತ್ತದೆ, ಹಾಗೆ ಬಡತನ ಅಂತ ಸುಮ್ಮನೆ ಇದ್ದಾರೆ ಸಾಧನೆ ಮಾಡಲು ಸಾಧ್ಯವಿಲ್ಲ, ಮನುಷ್ಯನಿಗೆ ಛಲವಿರಬೇಕು ಆ ಛಲದ ಜೊತೆಯಲ್ಲಿ ಸಹಕಾರ ಬಹಳ ಅವಶ್ಯ ಈ ವಿದ್ಯಾರ್ಥಿನಿಗೆ ಸಹಕಾರ ಮಾಡಿದ ಶಾಲಾ ಆಡಳಿತ ಮಂಡಳಿಗೆ ಅಭಿನಂದನೆಗಳು ಹಾಗೆ ವಿದ್ಯಾರ್ಥಿನಿಯೂ ಮುಂದಿನ ಶಿಕ್ಷಣದಲ್ಲಿ ಸಾಧನೆ ಮಾಡಲ್ಲಿ ಎಂದು ಹಾರೈಸುವೆ.
(ಅಜೀತ ಮನ್ನಿಕೇರಿ ಮೂಲಡಗಿ ವಲಯದ ಶಿಕ್ಷಣಾಧಿಕಾರಿಗಳು)


Spread the love

About inmudalgi

Check Also

‘ಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ’- ರಾಜಶೇಖರ ಹಿರೇಮಠ

Spread the loveಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 2025-26ನೇ ಸಾಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ವಿಶಾಲ ಶೀಲವಂತ ಅವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ