Breaking News
Home / Recent Posts / ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಭಗೀರಥ ಜಯಂತಿ

ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಭಗೀರಥ ಜಯಂತಿ

Spread the love

ಮೂಡಲಗಿ : ಅಸಾದ್ಯವಾದದ್ದನ್ನು ಸಾಧ್ಯ ಮಾಡುವ ಕಠಿಣ ಪ್ರಯತ್ನಕ್ಕೆ ಭಗೀರಥ ಪ್ರಯತ್ನವೆಂದು ಕರೆಯವುದು ಜನಿಜನಿತವಾಗಿದೆ, ತನ್ನ ಗೋರ ತಪಸ್ಸಿನಿಂದ ಕುಗ್ಗದ ಚಲ ಹಾಗೂ ದೃಡಸಂಕಲ್ಪದಿಂದ ಕಾರ್ಯ ಪೂರೈಸಿ ಪಿತೃಗಳಿಗೆ ಸ್ವರ್ಗ ದೊರಕಿಸಿ ಕೊಟ್ಟ ಭಗೀರಥನ ಸಾಧನೆ ಅಸಾಮನ್ಯವೆ ಸರಿ ಎಂದು ಉಪ್ಪಾರ ಸಮಾಜದ ಹಿರಿಯರಾದ ಬಿ.ಬಿ. ಹಂದಿಗುಂದ ಹೇಳಿದರು.
ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಆಯೊಜಿಸಿದ ಭಗೀರಥ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡುತ್ತ ದೇಶದಲ್ಲಿ ಕೋರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಯಾರು ಮನೆ ಬಿಟ್ಟು ಅನಾವಶಕವಾಗಿ ಹೊರಗೆ ತಿರಗಾಡಬಾರದು ಭಗೀರಥನ ಜಯಂತಿ ಪ್ರತಿ ವರ್ಷ ಬಹಳ ವಿಜ್ರಂಬಣೆಯಿಂದ ನಡಿತಾಯಿತ್ತು ಆದರೆ ಕೋರೊನಾ ಕಾರಣದಿಂದ ಹೆಚ್ಚಿಗೆ ಜನ ಸೇರುವ ಹಾಗಿಲ್ಲ ಎಂದರು.
ನ್ಯಾಯವಾದಿಗಳ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಎನ್.ಸಣ್ಣಕ್ಕಿ ಮಾತನಾಡಿ ಭಗೀರಥ ಮಹರ್ಷಿಯು ತನ್ನ ತಾತಂದಿರ ಮುಕ್ತಿಗಾಗಿ ಗಂಗೆಯನ್ನು ಭೂಲೋಕಕ್ಕೆ ತಂದು ತನ್ನ ತಾತಂದಿರಗೆ ಮುಕ್ತಿಯನ್ನು ದೊರಕಿಸಿಕೊಟ್ಟ ಮಹಾನ ವ್ಯಕ್ತ್ತಿ ಹಿಡಿದ ಹಟವನ್ನು ಬಿಡದೆ ಗೋರ ತಪಸ್ಸು ಮಾಡಿ ತನ್ನ ಸಾಧನೆಯನ್ನು ಜಗತ್ತಿಗೆ ತೊರಿಸಿದ ಮಹಾನಋಷಿ, ನಾವು ಯಾವುದಾದರು ಕಾರ್ಯ ಪೂರ್ಣ ಮಾಡಬೇಕಾದರೆ ಭಗೀರಥನ ಹಾಗೆ ಮಾಡಬೇಕು ಎಂದು ಹೇಳುತ್ತೆವೆ ಎಂದರು.
ಕಾರ್ಯಕ್ರಮದಲ್ಲಿ ಎಲ್.ವಾಯ್.ಅಡಿಹುಡಿ, ಎಚ್.ಎಮ್.ಕಂಕಣವಾಡಿ ಆಯ್.ಬಿ.ಕಂಕಣವಾಡಿ ಎಸ್.ಎಸ್.ಕಂಕಣವಾಡಿ ಆರ್.ಎಸ್.ಕಂಕಣವಾಡಿ ಎಮ್.ಆರ್.ಸಿಳ್‍ನವರ ಎಮ್.ಬಿ.ಕಂಕಣವಾಡಿ ಎಸ್.ಎನ್.ಕಂಕಣವಾಡಿ ಎಚ್.ಬಿ.ಅಂತರಗಟ್ಟಿ ವಾಯ್.ಎಸ್.ಖಾನಟ್ಟಿ ಎಮ್.ಸಿ.ಬೇಳಕೂಡ ಎಸ್.ಬಿ.ಬಾಗಿ ಎಮ್.ಎ.ಕೋಟಬಾಗಿ ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ