‘ಸಹಕಾರ ಸಂಸ್ಥೆಗಳ ಪ್ರಗತಿಗೆ ವಿಶ್ವಾಸ ಮುಖ್ಯ’
ಮೂಡಲಗಿ: ‘ಜನರ ವಿಶ್ವಾಸ ಮತ್ತು ಉತ್ತಮ ಸೇವೆಯಿಂದ ಸಹಕಾರ ಸಂಸ್ಥೆಗಳು ಪ್ರಗತಿಯಾಗುತ್ತವೆ’ ಎಂದು ಅರಭಾವಿಯ ದುರದುಂಡಿಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಬುಧವಾರ ಇಲ್ಲಿಯ ಮೂಡಲಗಿ ಕೋ.ಆಪ್‍ರೇಟಿವ್ ಬ್ಯಾಂಕ್‍ದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಮೂಡಲಗಿ ಕೋ.ಆಪ್‍ರೇಟಿವ್ ಬ್ಯಾಂಕು ಸಹಕಾರಿ ರಂಗದಲ್ಲಿ ಉತ್ತಮವಾಗಿ ಬೆಳದಿರುವುದು ಶ್ಲಾಘನೀಯವಾಗಿದೆ ಎಂದರು.
ಮೂಡಲಗಿಯ ದತ್ತಾತ್ರೇಯಬೋಧ ಸ್ವಾಮೀಜ, ಸುಣಧೋಳಿ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಅಂಕಲಗಿಯ ಅಡವಿಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಬ್ಯಾಂಕ್ ಅಧ್ಯಕ್ಷ ಸುಭಾಸ ಢವಳೇಶ್ವರ, ಉಪಾಧ್ಯಕ್ಷ ನವೀನ ಬಡಗಣ್ಣವರ, ನಿರ್ದೇಶಕರಾದ ಡಾ. ಕೆ.ವಿ. ದಂತಿ, ಶಿವಲಿಂಗಪ್ಪ ಗಾಣಿಗೇರ, ರಾಚಯ್ಯ ನಿರ್ವಾಣಿ, ರುದ್ರಪ್ಪ ವಾಲಿ, ಹರೀಶ ಅಂಗಡಿ, ಮಹಮ್ಮದರಫೀಕ ತಾಂಬೋಳಿ, ವೀರಪ್ಪ ಬೆಳಕೂಡ, ಸುಶೀಲಾ ಸತರಡ್ಡಿ, ಪ್ರಭಾವತಿ ಮುಧೋಳ, ಉಜಾಲಾ ಪೋಳ, ಸೈದಪ್ಪ ಗದಾಡಿ, ಪ್ರಧಾನ ವ್ಯವಸ್ಥಾಪಕ ಜಿ.ವಿ. ಬುದ್ನಿ ಇದ್ದರು.