ಮೂಡಲಗಿ: ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ ಕಲ್ಲಪ್ಪ ಮುಕ್ಕಣ್ಣವರ ಉಪಾಧ್ಯಕ್ಷೆ ಲಕ್ಮೀ ಹೇಳವರ ಹಾಗೂ ಸದಸ್ಯರನ್ನು ಸತ್ಕರಿಸಿ ಗೌರವಿಸಿದರು.
ಗುಜನಟ್ಟಿ ಗ್ರಾ.ಪಂಗೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಅವರ ಬೆಂಬಲಿಗ ಸದಸ್ಯರುಗಳ ನೇತೃತ್ವದಲ್ಲಿ ನಡೆದ ಆಗಿರೋದ ಆಯ್ಕೆ
ಮೂಡಲಗಿ: ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಗೆ ಮಂಗಳವಾರದಂದು ಜರುಗಿದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ ಸಾಮಾನ್ಯ ಮಹಿಳೆ ವರ್ಗದಿಂದ ಲಕ್ಮೀ ಮಂಜುನಾಥ ಹೇಳವರ ಅವರು ಅವಿರೋಧವಾಗಿ ಆಯ್ಕೆಗೊಂಡರು.
ಈ ಸಮಯದಲ್ಲಿ ಗ್ರಾ.ಪಂ ಸದಸ್ಯರಾದ ಮಹಾದೇವಿ ಅರಭಾವಿ, ಕಾಶವ್ವ ನಾಂವಿ, ಹಣಮಂತ ರೊಡಲಕ್ಕಣ್ಣವರ, ಕಾಶವ್ವ ಅಜ್ಜನ್ನವರ, ಮಾಲವ್ವ ಮಾದರ, ಲಕ್ಷ್ಮಣ ಕಂಬಳಿ, ಕಾಡಪ್ಪ ನಿಡಸೋಸಿ, ಮುಖಂಡರಾದ ರಾಮಪ್ಪ ಅರಭಾವಿ, ಭೀಮಪ್ಪ ನಾವಿ, ಶಂಭುಲಿಂಗ ಮುಕ್ಕಣ್ಣವರ. ಲಕ್ಷ್ಮಣ್ ಬಂಡ್ರೋಳಿ. ಶಿವಪುತ್ರ ಬಂಡಿನವರ. ಗುರುನಾಥ ಗಂಗಣ್ಣವರ. ಗುಂಡೂರಾವ್ ಗುಜನಟ್ಟಿ. ಹನುಮಂತ ರೋಡಲಕ್ಕನವರ. ವೆಂಕಪ್ಪ ಶಿರಗನ್ನವರ. ಮಂಜುನಾಥ್ ಹೇಳವರ. ಪಿಡಿಒ ರವಿ ಮರೆನ್ನವರ ಮತ್ತಿತರರು ಉಪಸ್ಥಿತರಿದ್ದರು.
ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಗ್ರಾಮಸ್ಥರು ಸತ್ಕರಿಸಿ ಅಭಿನಂದಿಸಿದರು.
ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಆರ್.ಪಿನಾರಾಯಣಕರ ಕಾರ್ಯನಿರ್ವಹಿಸಿದರು.
ಗುಜನಟ್ಟಿ ಗ್ರಾಮ ಪಂಚಾಯತಿಗೆ ನೂತನವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕಲ್ಲಪ್ಪ ಮುಕ್ಕಣ್ಣವರ ಮತ್ತು ಲಕ್ಮೀ ಹೇಳವರ ಅವರಿಗೆ ಅಭಿನಂದನೆಗಳು. ಗ್ರಾಮದ ಅಭಿವೃದ್ಧಿಗೆ ಸದಸ್ಯರು ಮತ್ತು ಹಿರಿಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಶ್ರಮಿಸಬೇಕು. ನಾಗರಿಕರ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪಕ್ಷ ಬೇಧ ಮರೆತು ಅಭಿವೃದ್ಧಿಗೆ ದುಡಿಯಬೇಕು. ಗುಜನಟ್ಟಿ ಗ್ರಾ.ಪಂ ವ್ಯಾಪ್ತಿಯ ಪ್ರಗತಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುμÁ್ಟನ ಮಾಡುವೆ. ಪ್ರಗತಿಯ ಕಾರ್ಯಗಳಿಗೆ ಸರ್ಕಾರದ ಅನುದಾನವನ್ನು ಸದ್ಭಳಕೆ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವೆ.
– ಬಾಲಚಂದ್ರ ಜಾರಕಿಹೊಳಿ, ಶಾಸಕರು ಅರಭಾವಿ ಕ್ಷೇತ್ರ