Breaking News
Home / ಬೆಳಗಾವಿ / ಮೂಡಲಗಿಯಲ್ಲಿ ಜ.24 ರಂದು ಹಿಂದೂ ಸಮ್ಮೇಳನ

ಮೂಡಲಗಿಯಲ್ಲಿ ಜ.24 ರಂದು ಹಿಂದೂ ಸಮ್ಮೇಳನ

Spread the love


ಮೂಡಲಗಿಯಲ್ಲಿ ಜ.24ರಂದು ಜರುಗಲಿರುವ ಹಿಂದೂ ಸಮೇಳನದ ಪ್ರಚಾರ ಪತ್ರಿಕೆಯನ್ನು ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ ಬಿಡುಗಡೆ ಮಾಡಿದರು. ವಿವಿಧ ಸಮಾಜಗಳ ಮುಖಂಡರು ಚಿತ್ರದಲ್ಲಿರುವರು.

ಮೂಡಲಗಿಯಲ್ಲಿ ಜ.24ರಂದು ಹಿಂದೂ ಸಮ್ಮೇಳನ

ಮೂಡಲಗಿ: ‘ಮೂಡಲಗಿಯ ಹಿಂದೂ ಸಮ್ಮೇಳನ ಸಂಚಾಲನಾ ಸಮತಿಯಿಂದ ಜ.24 (ಶನಿವಾರ)ರಂದು ಸಂಜೆ 4ಕ್ಕೆ ಬಸವ ರಂಗ ಮಂಟಪದ ಬಳಿಯಲ್ಲಿ ಬೃಹತ್ ಹಿಂದೂ ಸಮ್ಮೇಳನ ಜರುಗಲಿದೆ’ ಎಂದು ಸಮ್ಮೇಳನದ ನೇತೃತ್ವವಹಿಸಿರುವ ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ ಹೇಳಿದರು.
ಇಲ್ಲಿಯ ಶಿವಬೋಧರಂಗ ಮಠದಲ್ಲಿ ಹಿಂದೂ ಸಮ್ಮೇಳನದ ಪ್ರಚಾರ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಮಧ್ಯಾಹ್ನ 2 ಗಂಟೆಗೆ ಶಿವಬೋಧರಂಗ ಮಠದಿಂದ ಪ್ರಮುಖ ಬೀದಿಗಳಲ್ಲಿ ಸಾಗಿ ಕಾರ್ಯಕ್ರಮ ನಡೆಯಲಿರುವ ಬಸವರಂಗ ಮಂಟಪದವರೆಗೆ ಶೋಭಾ ಯಾತ್ರೆ ಜರುಗಲಿದೆ ಎಂದರು.
ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಯುವ ಬ್ರೇಗಡ್‍ದ ಕಿರಣ ರಾಮ ಹಾಗೂ ರಾಷ್ಟ್ರೀಯ ಸ್ವಯಂ ಸಂಘದ ಸಂಜಯ ನಾಯಕ ಅವರು ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ ಎಂದರು.
ಸಮ್ಮೇಳನದ ಸಾನ್ನಿಧ್ಯವನ್ನು ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ದತ್ತಾತ್ರಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ, ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪೂರದ ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಶಿವಾಪುರ(ಹ)ದ ಅಡವಿಸಿದ್ದರಾಮ ಸ್ವಾಮೀಜಿ, ಜೋಕಾನಟ್ಟಿಯ ಬಿಳಿಯಾನಸಿದ್ಧ ಸ್ವಾಮೀಜಿ ಅವರು ವಹಿಸುವರು.
ಮೂಡಲಗಿ ಸೇರಿದಂತೆ ಗುರ್ಲಾಪುರ, ಶಿವಾಪುರ, ಹಳ್ಳೂರ, ಖಾನಟ್ಟಿ, ಮುನ್ಯಾಳ, ರಂಗಾಪೂರ, ಕಮಲದಿನ್ನಿ, ಪಟಗುಂದಿ, ಧರ್ಮಟ್ಟಿ, ಜೋಕಾನಟ್ಟಿ, ಗುಜನಟ್ಟಿ ಗ್ರಾಮಗಳ ವ್ಯಾಪ್ತಿಯ ಹಿಂದೂ ಬಾಂಧವರು ಸಮ್ಮೆಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಮಾರಂಭದ ನಂತರ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರ ಉನ್ನತಿಯ, ಹಿಂದೂಗಳ ಒಗ್ಗಟಿನ ದ್ಯೋತಕವಾಗಿ ಆಯೋಜಿಸಿರುವ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಮೂಡಲಗಿ ಮತ್ತು ವಿವಿಧ ಗ್ರಾಮಗಳ ಎಲ್ಲ ಸಮಾಜ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.


Spread the love

About inmudalgi

Check Also

ಜ.24ರಂದು ಮೂಡಲಗಿಯಲ್ಲಿ ಬೃಹತ್ ಹಿಂದೂ ಸಮ್ಮೇಳನ

Spread the love  ಮೂಡಲಗಿ: ಪಟ್ಟಣದ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಜ.24ರಂದು ಹಿಂದೂ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಮದ್ಯಾಹ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ