Breaking News
Home / Recent Posts / ಮೂಡಲಗಿ ಪಟ್ಟಣದ ಈರಣ್ಣ ನಗರದ ವೀರಭದ್ರೇಶ್ವರ ದೇವಸ್ಥಾನದ ಗೋಪುರ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮವು ಶ್ರೀಗಳ ಅಮೃತ ಹಸ್ತದಿಂದ ಅದ್ದೂರಿ ಜರುಗಿತ

ಮೂಡಲಗಿ ಪಟ್ಟಣದ ಈರಣ್ಣ ನಗರದ ವೀರಭದ್ರೇಶ್ವರ ದೇವಸ್ಥಾನದ ಗೋಪುರ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮವು ಶ್ರೀಗಳ ಅಮೃತ ಹಸ್ತದಿಂದ ಅದ್ದೂರಿ ಜರುಗಿತ

Spread the love

ಮೂಡಲಗಿ : ಪಟ್ಟಣದ ಈರಣ್ಣ ನಗರದ ವೀರಭದ್ರೇಶ್ವರ ದೇವಸ್ಥಾನದ ನೂತನವಾಗಿ ನಿರ್ಮಿಸಿದ ಗೋಪುರ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮವು ಶ್ರೀಗಳ ಅಮೃತ ಹಸ್ತದಿಂದ ಅದ್ದೂರಿ ಸೋಮವಾರದಂದು ಜರುಗಿತು.

ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕøತಿಯ ಪ್ರತೀಕವಾಗಿವೆ. ಜಾತ್ರಾಮಹೋತ್ಸವಗಳಲ್ಲಿ ಭೇದ-ಭಾವಗಳನ್ನು ಮರೆತು ಎಲ್ಲ ಜನಾಂಗದ ಜನರು ಸೇರಿ ಜಾತ್ರೆಯನ್ನು ಮಾಡುವುದರಿಂದ ನಮ್ಮ ಮಕ್ಕಳಿಗೆ ಸಂಸ್ಕøತಿ, ಸಂಪ್ರದಾಯದ ಅರಿವು ಮೂಡಿಸಿ ಭಾವೈಕ್ಯತೆಯ ಸಂಕೇತವನ್ನು ಸಾರೋಣಾ ಎಂದರು.

ಇನ್ನೂ ಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಗೋಪುರವನ್ನು ಅತ್ಯತ್ತಮವಾಗಿ ನಿರ್ಮಿಸಿದ್ದು, ದೇವಸ್ಥಾನಕ್ಕೆ ಒಂದು ಹೊಸ ಸೊಬಗನ್ನು ನೀಡಿದಂತಾಗಿದೆ. ದೇವಸ್ಥಾನದ ಅಭಿವೃದ್ದಿಗೆ ರಾಜ್ಯಸಭೆಯ ಸಂಸದರ ನಿಧಿಯಲ್ಲಿ 10 ಲಕ್ಷ ರೂ, ಅನುದಾನ ನೀಡುವುದಾಗಿ ಭರವಸೆ ನೀಡಿದ ಅವರು, ಆ ಅನುದಾನದಿಂದ ಮತ್ತಷ್ಟು ದೇವಸ್ಥಾನದಲ್ಲಿ ಅಭಿವೃದ್ಧಿಯಾಗಲ್ಲಿ ಎಂದು ಹೇಳಿದರು.

ವೇದಿಯಲ್ಲಿ ಕೂಡಲಸಂಗದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಜಿ, ಹೊಸದುರ್ಗದ ಭಗೀರಥ ಪೀಠದ ಶ್ರೀ ಪುರಷೋತ್ತಮಾನಂದ ಪುರಿ ಮಹಾಸ್ವಾಮಿಜಿ, ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಮಹಾಸ್ವಾಮಿಜಿ, ಪಿ.ವಾಯ್ ಹುಣಶ್ಯಾಳದ ನಿಜಗುಣ ದೇವರು, ನಾಗನೂರ ಗ್ರಾಮದ ಮಾತೋಶ್ರೀ ಕಾವ್ಯಾಶ್ರೀ ಅಮ್ಮನವರು, ದೇವಸ್ಥಾನದ ಕಮೀಟಿ ಅಧ್ಯಕ್ಷ ಭೀಮಪ್ಪ ಹಂದಿಗುಂದ ಹಾಗೂ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ