Breaking News
Home / Recent Posts / ‘ಸಾಹಿತ್ಯ ಮತ್ತು ಮಹಿಳೆ ಒಂದು ಅವಲೋಕನ’ ಕುರಿತು ಉಪನ್ಯಾಸ ಕಾರ್ಯಕ್ರಮ

‘ಸಾಹಿತ್ಯ ಮತ್ತು ಮಹಿಳೆ ಒಂದು ಅವಲೋಕನ’ ಕುರಿತು ಉಪನ್ಯಾಸ ಕಾರ್ಯಕ್ರಮ

Spread the love

ಪುರುಷ ಪ್ರಧಾನದಲ್ಲಿ ಸಾಹಿತ್ಯದ ಮುಖ್ಯವಾಹಿನಿಯತ್ತ ಮಹಿಳೆ

ಮೂಡಲಗಿ: ‘ಮಹಿಳೆಯು ಮನುವಿನ ದೃಷ್ಟಿಯನ್ನು ಮೀರಿ ಆಧುನಿಕ ಕಾಲಘಟ್ಟದವರೆಗೆ ಸಾಹಿತ್ಯದಲ್ಲಿ ಮಹಿಳೆಯು ಸ್ಥಾನಮಾನಗಳನ್ನು ಉಳಿಸಿಕೊಂಡು ಬಂದಿರುವುದು ಸಾಹಿತ್ಯಕ್ಕೆ ಅವಳ ಅನಿವಾರ್ಯತೆಯನ್ನು ತಿಳಿಸುತ್ತದೆ’ ಎಂದು ಆರ್‍ಡಿಎಸ್ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಗೀತಾ ಹಿರೇಮಠ ಹೇಳಿದರು.
ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನ ಆಶ್ರಯದಲ್ಲಿ ಜರುಗಿದ 9ನೇ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮದಲ್ಲಿ ‘ಸಾಹಿತ್ಯ ಮತ್ತು ಮಹಿಳೆ ಒಂದು ಅವಲೋಕನ’ ಕುರಿತು ಉಪನ್ಯಾಸ ನೀಡಿದ ಅವರು ವೇದಗಳ ಕಾಲದಲ್ಲಿ ಗಾರ್ಗಿ, ಮೈತ್ರೈಯಿ ಬೌದ್ಧಿಕ ಸಾಧನೆ ಮತ್ತು 12ನೇ ಶತಮಾನದಲ್ಲಿ ಅನೇಕ ವಚನಗಾರ್ತಿಯರು ವಚನಗಳನ್ನು ರಚಿಸಿ ಅಕ್ಷರ ಸಂಚಲನ ಮೂಡಿಸಿದ್ದರು. ಸಾಹಿತ್ಯದ ಮುಖ್ಯವಾಹಿನಿಗೆ ಬಂದಿರುವರು ಎಂದರು.
ಜಾನಪದ ಸಾಹಿತ್ಯವು ಗ್ರಾಮೀಣ ಗರತಿಯರಿಂದ ತುಂಬಿಕೊಂಡಿದ್ದು, ಕೌಟುಂಬಿಕ ವ್ಯವಸ್ಥೆ, ಆಚರಣೆಗಳೊಂದಿಗೆ ಹಾಸುಹೊಕ್ಕಿರುವ ಜಾನಪದವು ಮಹಿಳೆಯರ ಭಾವನೆಗಳೇ ಜಾನಪದ ಸಾಹಿತ್ಯವಾಗಿ ರೂಪಗೊಂಡಿದೆ ಎಂದರು.
ಕುವೆಂಪು ಅವರು ರಾಮಾಯಣ ದರ್ಶನಂದಲ್ಲಿ ರಾವಣನಿಗೆ ಆತನ ದು:ಸ್ಥಿತಿಯ ಬಗ್ಗೆ ಮರುಕಪಡುವ ಸೀತೆಯು ಆತನಿಗೆ ಬುದ್ದಿವಾದವನ್ನು ಹೇಳಿ ಮನಪರಿವರ್ತಿಸುವಂತೆ ಸೀತೆಯ ಪಾತ್ರವನ್ನು ನಿರೂಪಿಸಿರುವುದು ಮಹಿಳೆಯ ಮೌಲಿಕತೆಯು ವ್ಯಕ್ತವಾಗುತ್ತದೆ ಎಂದರು.
ಆಧುನಿಕತೆಯಲ್ಲಿ ಜಯದೇವಿತಾಯಿ ಲಿಗಾಡೆ, ಕೊಡಗಿನ ಗೌರಮ್ಮ, ಆರ್. ಕಲ್ಯಾಣಮ್ಮ, ಅನುಪಮ ನಿರಂಜನ, ತ್ರಿವೇಣಿ, ಎಂ.ಕೆ. ಇಂದಿರಾ ಹೀಗೆ ನೂರಾರು ಲೇಖಕಿಯರು ಸ್ತ್ರೀಯರ ಸಂವೇದನಗಳನ್ನು ಸಾಹಿತ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರಸ್ತುತದಲ್ಲಿ ಇನ್ನು ವಿಕಾಸದತ್ತ ಸಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ ಲೋಕಾನುಭವವು ಪುರುಷರಗಿಂತ ಮಹಿಳೆಯರಿಗೆ ಹೆಚ್ಚು ಇರುವುದರಿಂದ ಜಾನಪದ ಸಾಹಿತ್ಯವು ಮಹಿಳೆಯ ಸಂವೇದನೆಯಿಂದ ಕೂಡಿಕೊಂಡಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯು ತನ್ನದೆಯಾದ ಇತಿಮಿತಿಯನ್ನು ಕಾಯ್ದುಕೊಂಡು ಸಾಹಿತ್ಯದಲ್ಲಿ ವಿಶ್ವರೂಪಿಯಾಗಿ ಗೋಚರಿಸಿಕೊಂಡಿದ್ದಾಳೆ. ಇದು ಮಹಿಳೆಯಲ್ಲಿ ಇರುವ ವಿಭಿನ್ನವಾದ ಹಾಗೂ ವಿಶೇಷವಾದ ಶಕ್ತಿ ಇದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ವೇದಿಕಯಲ್ಲಿದ್ದರು.
ನಿವೃತ್ತ ಶಿಕ್ಷಕ ಎ.ಎಲ್. ಶಿಂಧಿಹಟ್ಟಿ, ಪ್ರೊ. ಎಸ್.ಎಂ. ಕಮದಾಳ, ಬಾಲಶೇಖರ ಬಂದಿ, ಸಿದ್ರಾಮ್ ದ್ಯಾಗಾನಟ್ಟಿ, ಬಿ.ವೈ. ಶಿವಾಪುರ, ಡಾ. ಬಸವರಾಜ ಗೌಡರ, ಮಹಾಂತೇಶ ಹೊಸೂರ, ಬಸವರಾಜ ನಂದಿ, ಸಿ.ಎಂ. ಹಂಜಿ ಇದ್ದರು.
ಬಿ.ಆರ್. ತರಕಾರ ಸ್ವಾಗತಿಸಿದರು, ಯಲ್ಲಪ್ಪ ಮಳಲಿ ನಿರೂಪಿಸಿದರು, ಸುರೇಶ ಕೋಪರ್ಡೆ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ