Breaking News
Home / ಬೆಳಗಾವಿ / ‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ

default

ಮೂಡಲಗಿ : ಪಟ್ಟಣದಲ್ಲಿ ನ.23, 24 ರಂದು ಜರುಗಲಿರುವ ಬೆಳಗಾವಿ ಜಿಲ್ಲಾ 16 ನೇ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುತ್ತಿರು ಸಾಹಿತ್ಯಾಸಕ್ತರ ಭೋಜನಕ್ಕೆ ಪಟ್ಟಣದ ಮಹಿಳೆಯರಿಂದ ಗುರುವಾರದಂದು ಕನ್ನಡ ಬುತ್ತಿ(ರೊಟ್ಟಿ) ಜಾತ್ರೆಯ ಕಾರ್ಯಕ್ರಮ ವಾದ್ಯ ಮೇಳಗಳೊಂದಿಗೆ ಜನಮನ ಸೇಳೆಯಿತು.
ಗುರುವಾರ ಸಂಜೆ ಮೂಡಲಗಿಯ ಲಕ್ಷ್ಮೀ ನಗರದ ಕಾಳಿಕಾದೇವಸ್ಥಾನದಲ್ಲಿ “ಕನ್ನಡ ರೊಟ್ಟಿ ಬುತ್ತಿ ಜಾತ್ರೆಗೆ” ರಾಷ್ಟ್ರೀಯ ನಾರಿಶಕ್ತಿ ಪ್ರಶಸ್ತಿ ಪುರಸ್ಕøತೆ ಶೋಭಾ ಗಸ್ತಿ, ಪುರಸಭೆ ಅಧ್ಯಕ್ಷೆ ಖುರ್ಷಾದ ಅನ್ವರ ನದಾಫ, ಹಳ್ಳೂರ ಮಾಜಿ ಜಿ.ಪಂ ಸದಸ್ಯೆ ವಾಸಂತಿ ತೇರದಾಳ ಕನ್ನಡ ಬಾವುಟ ತೋರಿಸುವ ಮುಖಾಂತ ಚಾಲನೆ ನೀಡಿದರು.
“ಕನ್ನಡ ಬುತ್ತಿ ಜಾತ್ರೆಯ” ರೊಟ್ಟಿ ಬುತ್ತಿ ಹೊತ್ತ ಮಹಿಳೆಯರು ಲಕ್ಷ್ಮೀ ನಗರದ ಕಾಳಮ್ಮದೇವಿ ದೇವಸ್ಥಾನದಿಂದ ಕಲ್ಮೇಶ್ವರ ವೃತ್, ಗೋಕಾಕ ರಸ್ತೆಯ ಮೂಲಕ ಸಾಗಿ ಸಮ್ಮೇಳ ನಡೆಯು ಆರ್.ಡಿ.ಎಸ್ ಕಾಲೇಜು ಮೈದಾನದಲ್ಲಿ ಜರುಗಿತು.
ಭುವನೇಶ್ವರಿ ಭಾವ ಚಿತ್ರ ಇರುವ ತೇರೆದ ವಾಹನದ ಉಪಸ್ಥಿತಿಯಲ್ಲಿ ಬುತ್ತಿ ಜಾತ್ರೆಯ ಮೇರವಣಿಗೆಯುದ್ದಕ್ಕೂ ಮಹಿಳೆಯರಿಂದ ಕನ್ನಡವೇ ಸತ್ಯ ಕನ್ನಡವೇ ನಿತ್ಯ, ‘ಸಿರಿಗನ್ನಡಂ ಗೆಲ್ಲೆ’ ‘ಸಿರಿಗನ್ನಡಂ ಬಾಲ್ಗೆ’ ಎಂಬ ವಿವಿಧ ಕನ್ನಡಪರ ಘೋಷಣೆಗಳು ಮೊಳಗಿದವು
ಈ ಸಮಯದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಸಿ.ಬಿ.ಯಕ್ಸಂಬಿ, ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ಗೌರವ ಕಾರ್ಯದರ್ಶಿಗಳಾದ ಎ.ಎಚ್.ವಂಟಗೋಡಿ, ಬಿ.ಆರ್.ತರಕಾರ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಕಸಾಪ, ಲಯನ್ಸ್ ಪರಿವಾರ ಮತ್ತು ವಿವಿಧ ಕನ್ನಡಪರ ಹಾಗೂ ಮಹಿಳಾ ಸಂಘಟನೆಯ ಸದಸ್ಯರು ಮತ್ತಿತರರು ಇದ್ದರು.


Spread the love

About inmudalgi

Check Also

ಮುಂದಿನ ದಿನಗಳಲ್ಲಿ ಕುರುಬ ಸಮಾಜದವರನ್ನು ಅಪೆಕ್ಸ್ ಬ್ಯಾಂಕಿನಿಂದ ನಾಮ ನಿರ್ದೇಶನ ಮಾಡಿಕೊಳ್ಳಲಾಗುತ್ತಿದೆ – ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ- ಹಾಲು ಮತ ಸಮಾಜಕ್ಕೆ ಕೊಟ್ಟ ಮಾತಿನಂತೆ ನಡೆಯುತ್ತೇವೆ. ಅಪೆಕ್ಸ್ ಬ್ಯಾಂಕಿನ ಆಡಳಿತ ಮಂಡಳಿಗೆ ಹಾಲುಮತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ