Breaking News
Home / ಬೆಳಗಾವಿ / ಶ್ರೀ ಶಿವಬೋಧರಂಗ ಮಠದ ಆವರಣದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಶ್ರೀ ಶಿವಬೋಧರಂಗ ಮಠದ ಆವರಣದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

Spread the love

ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ಬರುವ ನ.23 ಮತ್ತು 24 ರಂದು ನಡೆಯುವ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೋಳಿಸಲ್ಲು ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ಎಲ್ಲರೀತಿಯಿಂದ ಸಹಾಯ ಸಹಕಾರ ನೀಡುವರು ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಅವರು ಪಟ್ಟಣ ಶ್ರೀ ಶಿವಬೋಧರಂಗ ಮಠದ ಆವರಣದಲ್ಲಿ ಜರುಗಿದ ನ.23 ಮತ್ತು 24 ರಂದು ಮೂಡಲಗಿಯಲ್ಲಿ ಹಮ್ಮಿಕೊಂಡ ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆಯ ಭಾಗವಹಿಸಿ ಮಾತನಾಡಿ, ಅರಭಾವಿ ಕ್ಷೇತ್ರದ ಮೂಡಲಗಿ ಪಟ್ಟಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಸಂತದ ವಿಷಯ, ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಯಾವುದೇ ರೀತಿ ತೊಂದರೆ ಯಾಗದಂತೆ ಎಲ್ಲರೂ ಕೂಡಿ ಕೊಂಡು ಕೆಲಸ ಮಾಡೋಣ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಳಾ ಮೆಟಗುಡ್ಡ ಮಾತನಾಡಿ, ಮೂಡಲಗಿ ತಾಲೂಕಾದ ಕೆಲವೇ ವರ್ಷಗಳಲ್ಲಿ ಕಳೆದ ಎರಡು ತಾಲೂಕಾ ಸಮ್ಮೇಳನಗಳು ಯಶಸ್ವಿಯಾಗಿ ಜರುಗಿವೆ, ಮೂರನೇ ವರ್ಷಕ್ಕೆ ಮೂಡಲಗಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಿಕ್ಕಿರುವ ಈ ಭಾಗದ ಜನರ ಸೌಭಾಗ್ಯ, ಸಾಹಿತಿಗಳ ಜೊತೆಗೆ ಜನಸಾಮಾನ್ಯರಿಗಾಗಿ ಕನ್ನಡ ಪ್ರಜ್ಞೆಯನ್ನು ಬೆಳೆಸುವಂಥ ಸಮ್ಮೇಳನ, ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಯೊಬ್ಬ ಕನ್ನಡಿಗರೂ ಭಾಗವಹಿಸಬೇಕು. ಸಮ್ಮೇಳನ ಯಶಸ್ವಿಗೆ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯವರು, ವಿವಿಧ ಸಂಘ ಸಂಸ್ಥೆಗಳವರ, ಕನ್ನಡ ಪರ ಸಂಘಟನೆಯವರ ಸಹಾಯ ಸಹಕಾರ ಬಹಳ ಮುಖ್ಯವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀ ಶ್ರೀಧರಬೋಧ ಸ್ವಾಮೀಜಿಗಳು ಮಾತನಾಡಿ, ಕನ್ನಡ ಜಾತ್ರೆಯಲ್ಲಿ ಪ್ರತಿಯೋಬ್ಬರು ಭಾಗವಹಿಸಬೇಕು, ಸಮ್ಮೇಳನದ ಯಶಸ್ವಿಗೆ ಸಂಘಟಕರು ವಿವಿಧ ಸಮೀತಿಗಳನ್ನು ರಚನೆ ಮಾಡಿ ತಮ್ಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದರು.
ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಮಾತನಾಡಿ, 16ನೇ ಸಮ್ಮೇಳನದ ಪ್ರಚಾರ್ಥ ಅಂಗವಾಗಿ ನ.19 ರಂದು ತಾಲೂಕಿನಾದ್ಯಾಂತ ಬೈಕ್ ರ್ಯಾಲಿ, ನ.21 ರಂದು ಮಹಿಳೆಯರಿಂದ ಕನ್ನಡ ಬುತ್ತಿ ಜಾತ್ರೆ ನಡೆಯಲಿವೆ. ಇದರಿಂದ ತಾಲೂಕಿನಲ್ಲಿ ಕನ್ನಡಮಯ ವಾತಾವರಣ ಸೃಷ್ಟಿಯಾಗಲಿದೆ. ಸಮ್ಮೇಳ ಯಶಸ್ವಿಗೆ ಸಕಲ ಕನ್ನಡ ಪ್ರೇಮಿಗಳು ತಮ್ಮ ತನುಮನ ಧನದಿಂದ ದುಡಿಯಬೇಕು ಎಂದು ವಿನಂತಿಸಿದರು.
ಸಭೆಯಲ್ಲಿ ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ, ಬಿಇಒ ಅಜೀತ ಮನ್ನಿಕೇರಿ, ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಡ್ಡಿ ಹುಚರಡ್ಡಿ, ರಾಮದುರ್ಗ ತಾಲೂಕಾ ಕಸಾಪ ಅಧ್ಯಕ್ಷ ಜಟಗನ್ನವರ, ಸಾಯಿ ಸೇವಾ ಸಮಿತಿಯ ಎಸ್.ಎಮ್. ಹಂಜಿ, ಉಮೇಶ ಬೇಳಕೂಡ ಸೇರಿದಂತೆ ಅನೇಕರು ಸಲಹೆ ಸೂಚನೆಗಳನ್ನು ನೀಡಿದರು.
ವೇದಿಕೆಯಲ್ಲಿ ನಿವೃತ್ತ ಪ್ರಾಚಾರ್ಯ ಸುಭಾಸ ಕಮದಾಳ, ಪಿ.ಎಸ್.ಐ ರಾಜು ಪೂಜೇರಿ, ಅನ್ವರ ನದಾಫ, ಡಾ.ಸಚೀನ ಟಿ, ಪ್ರಾಚಾರ್ಯ ಸುರೇಶ ಹನಗಂಡಿ ಮತ್ತಿತರು ಉಪಸ್ಥಿತರಿದ್ದರು.
ಸಭೆಯಲ್ಲಿ ಕಸಾಪ ಪದಾಧಿಕಾರಿಗಳು, ಸದಸ್ಯರು, ಕನ್ನಡಪರ ಸಂಘಟನೆಯ, ಸಹಕಾರಿ ಸಂಘಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಮಹಿಳಾ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಬಿ.ಆರ್.ತರಕಾರ ನಿರೂಪಿಸಿದರು. ಎ.ಎಚ್.ವಂಟಗೋಡಿ ಸ್ವಾಗತಿಸಿ ವಂದಿಸಿದರು.


Spread the love

About inmudalgi

Check Also

ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ

Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ