ಕಣ್ಣುಗಳು ಆರೋಗ್ಯ ನಿರ್ಲಕ್ಷಿಸಬಾರದು
ಮೂಡಲಗಿ: ಮನುಷ್ಯನ ದೇಹದ ಆರೋಗ್ಯಕ್ಕೆ ಕಣ್ಣುಗಳು ದಿಕ್ಸೂಚಿ ಇದ್ದಂತೆ, ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಿದೆ’ ಎಂದು ನೇತ್ರತಜ್ಞ ಡಾ. ಸಚಿನ್ ಟಿ. ಹೇಳಿದರು.
ಇಲ್ಲಿಯ ಡಾ. ಸಚಿನ ಮೂಡಲಗಿ ಕಣ್ಣಿನ ಆಸ್ಪತ್ರೆಯಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಕಚೇರಿ ಬೆಳಗಾವಿ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಟಿವಿ, ಮೊಬೈಲ್ ವೀಕ್ಷಣೆ ಹಾಗೂ ಕೆಲಸಗಳ ಒತ್ತಡದಿಂದ ಮನುಷ್ಯನ ಕಣ್ಣುಗಳಿಗೆ ಸಾಕಷ್ಟು ಆಯಾಸವಾಗುತ್ತಿದ್ದು, ಅದನ್ನು ನಿರ್ಲಕ್ಷಬಾರದು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಮಾತನಾಡಿ ಲಯನ್ಸ್ ಕ್ಲಬ್‍ದಿಂದ ಪ್ರತಿ ತಿಂಗಳು ಕಣ್ಣಿನ ಉಚಿತ ತಪಾಸಣೆಯನ್ನು ಏರ್ಪಡಿಸುತ್ತಿದ್ದು, ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ವೆಂಕಟೇಶ ಸೋನವಾಲಕರ, ಬಾಲಶೇಖರ ಬಂದಿ, ಈರಣ್ಣಾ ಕೊಣ್ಣೂರ, ಕೃಷ್ಣಾ ಕೆಂಪಸತ್ತಿ, ಪುಲಕೇಶ ಸೋನವಾಲಕರ, ಶಿವಾನಂದ ಗಾಡವಿ, ಎನ್.ಟಿ. ಪಿರೋಜಿ, ಮಹಾಂತೇಶ ಹೊಸೂರ, ಗಿರೀಶ ಆಸಂಗಿ, ಡಾ. ಯಲ್ಲಾಲಿಂಗ ಮುಳವಾಡ,
ಶಿವಬೋಧ ಯರಝರ್ವಿ ಪ್ರಾಸ್ತಾವಿಕ ಮಾತನಾಡಿದರು.