Breaking News
Home / ಬೆಳಗಾವಿ / ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ದಾ ಮನೋಭಾವನೆಗಳನ್ನು ಬೆಳಸುತ್ತದೆ. – ಸತೀಶ ಗೋಟೂರೆ.

ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ದಾ ಮನೋಭಾವನೆಗಳನ್ನು ಬೆಳಸುತ್ತದೆ. – ಸತೀಶ ಗೋಟೂರೆ.

Spread the love

ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ದಾ ಮನೋಭಾವನೆಗಳನ್ನು ಬೆಳಸುತ್ತದೆ.
– ಸತೀಶ ಗೋಟೂರೆ.

ಮೂಡಲಗಿ : ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ದಾ ಮನೋಭಾವನೆಗಳನ್ನು ಬೆಳಸುತ್ತದೆ ಮಕ್ಕಳಲ್ಲಿ ಕ್ರೀಯಾಶೀಲತೆ ಮತ್ತು ಮನಸ್ಸಿನ ಉತ್ಸಾಹವನ್ನು ಹೆಚ್ಚಿಸುವದರ ಜೊತೆಗೆ ಅಧ್ಯಯನದಲ್ಲಿ ಸಕ್ರೀಯವಾಗಿ ತೊಡುಗುವಂತೆ ಮಾಡುತ್ತದೆ. ಇಂದಿನ ವಿದ್ಯಾರ್ಥಿಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವದಷ್ಟೇ ಮುಖ್ಯವಲ್ಲ ಕ್ರೀಡಾ ಯಶಸ್ಸಿನ ಜೊತೆಗೆ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡಾ ಸಾಧಕರಂತೆ ಕ್ರೀಡೆಯಲ್ಲಿ ಸಾಧನೆ ಮಾಡುವದನ್ನು ರೂಢಿಸಿಕೊಳ್ಳುವುದು ಅವಶ್ಯವಿದೆ ಎಂದು ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸತೀಶ ಗೋಟೂರೆ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅತಿಥಿ ಸ್ಥಾನ ವಹಿಸಿಕೊಂಡು ಮಾತನಾಡಿ ವಿಶ್ವದಲ್ಲಿ ಓಲಂಪಿಕ್ ಕ್ರೀಡೆಗಳಲ್ಲಿ ಸಾಧಿಸಿದ ಕ್ರೀಡಾಪಟುಗಳಿಗೆ ವಿಶ್ವಮಾನ್ಯತೆ ಇದ್ದು ಪ್ರಾಥಮಿಕ ಹಂತದಿಂದಲೇ ಓಲಂಪಿಕ್ ಕ್ರೀಡಾಕೂಟಗಳಿಗೆ ತಯಾರಿಯಾಗುವುದು ಅವಶ್ಯಕವಾಗಿದೆ ಎಂದರು.


ಸಿ.ಬಿ.ಎಸ್.ಇ. ಶಾಲೆಯ ಪ್ರಾಚಾರ್ಯ ಜೋಶಫ್ ಬೈಲಾ ಮಾತನಾಡಿ ದೇಹದ ಸದೃಢತೆ ಹೊಂದಲು ಕ್ರೀಡಾಕೂಟಗಳಲ್ಲಿ ಉತ್ತಮ ತಯಾರಿಯೊಂದಿಗೆ ಭಾಗವಹಿಸುವುದು ಅವಶ್ಯಕವಿದೆ ಕ್ರೀಡಾರಂಗದಲ್ಲಿ ತಾಳ್ಮೆ, ನಿರಂತರ ಪ್ರಯತ್ನ ಮತ್ತು ಶೃದ್ಧೆ ಯಶಸ್ಸಿನ ಗುಟ್ಟುಗಳಾಗಿವೆ ಇವುಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ಉತ್ತಮ ಕ್ರೀಡಾಸಾಧಕರಾಗಲು ಸಾಧ್ಯವಿದೆ ಎಂದರು.
ಶಾಲೆಯ ಮುಖ್ಯೋಪಾಧ್ಯರಾದ ಸಂಗಮೇಶ ಹಳ್ಳೂರ ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡೆಗಳು ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆಯ ಇನ್ನೊಂದು ಭಾಗ. ಎಲ್ಲ ಮಕ್ಕಳು ಯಶಸ್ಸನ್ನು ತಂದುಕೊಳ್ಳಲು ತಮ್ಮ ಅಧ್ಯಯನದ ಒಂದು ಭಾಗವಾಗಿ ಕ್ರೀಡಾ ಚಟುವಟಿಕೆಯಲ್ಲಿ ತೊಡಿಗಿಕೊಂಡು ಸಾಧಕರ ಸಾಲಿನಲ್ಲಿ ಗುರ್ತಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡು ಕ್ರೀಡಾಚಟುವಟಿಕೆಗಳನ್ನು ಉದ್ಘಾಟಿಸಿ ಮಕ್ಕಳೊಂದಿಗೆ ಕ್ರೀಡೆಗಳನ್ನು ಆಡಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡು ಮಕ್ಕಳಿಗೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಪೂಜಾ ಪಾರ್ಶಿ ಪಿಯು ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ, ಶ್ರೀಮಹಾಲಕ್ಷ್ಮೀ ಬ್ಯಾಂಕಿನ ಸಹಾಯಕ ಮಾನ್ಯೇಜರ ಹಣಮಂತ ದೇಸಾಯಿ ಹಾಗೂ ಶಾಲಾ ಸಿಬ್ಬಂದಿಯವರು ಹಾಜರಿದ್ದರು.
ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ದೈಹಿಕ ಶಿಕ್ಷಕÀರಾದ ಬಸವರಾಜ ಮಾಳೇದ ಮತ್ತು ಸುಹಾಸಿನಿ ಮಗದುಮ್ಮ ಸಂಘಟಿಸಿದರು.
ಶಿಕ್ಷಕಿ ಐಶ್ವರ್ಯ ಹೆಳವಿ ನಿರೂಪಿಸಿದರು. ಶಿಕ್ಷಕಿ ಸವಿತಾ ಪುಟ್ಟಿ ಸ್ವಾಗತಿಸಿದರು. ಶಿಕ್ಷಕಿ ಸುಶೀಲಾ ಮಾಲಗಾರ ವಂದಿಸಿದರು.


Spread the love

About inmudalgi

Check Also

ಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ

Spread the loveಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ. ಮೂಡಲಗಿ : ಬ್ಯಾಂಕಿನ ಆರ್ಥಿಕ ಸಾಕ್ಷರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ