ರೈತರಿಗೆ ಮತ್ತು ಗ್ರಾಮೀಣ ನಾಗರಿಕರಿಗೆ ಸರಕಾರಿ ಯೋಜನೆಗಳ ಅರಿವು ಅಗತ್ಯ : ಸಂಜೀವ ಮಂಟೂರ
ಮೂಡಲಗಿ : ರೈತರಿಗೆ ಮತ್ತು ಗ್ರಾಮೀಣ ನಾಗರಿಕರಿಗೆ ಸರಕಾರಿ ಯೋಜನೆಗಳ ಅರಿವು ಅಗತ್ಯವಿದೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಕೃಷಿ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಬೆಳೆ ಪರಿಹಾರ, ಕೃಷಿ ಹೊಂಡಗಳು ಮತ್ತು ಕೃಷಿ ನಿರ್ವಹಣಾ ಸಾಮಗ್ರಿಗಳನ್ನು ಸಬ್ಸಿಡಿ ರೂಪದಲ್ಲಿ ಚಿಕ್ಕ ಹಿಡುವಳಿದಾರರಿಗೆ ನೀಡುತ್ತಿದ್ದು ಅಲ್ಲದೇ ಮಹಿಳೆಯರ ಸ್ವಾವಲಂಬನೆಗಾಗಿ ಗುಡಿ ಕೈಗಾರಿಕೆಗಳು ಸ್ವ-ಸಹಾಯ ಸಂಘಗಳ ರೂಪದಲ್ಲಿ ಆರ್ಥಿಕ ಸಂವರ್ಧನೆಯ ಹಲವಾರು ಯೋಜನೆಗಳಿದ್ದು ಅವುಗಳ ಪ್ರಯೋಜನವನ್ನು ಪ್ರತಿಯೊಬ್ಬ ನಾಗರಿಕನ್ನು ಪಡಿದುಕೊಳ್ಳುವುದು ಅವಶ್ಯಕವಿದೆ ಎಂದು ಮೂಡಲಗಿಯ ಪದವಿ ಕಾಲೇಜಿನ ಉಪನ್ಯಾಸಕ ಸಂಜೀವ ಮಂಟೂರ ಹೇಳಿದರು.
ಮೂಡಲಗಿ ಸಮೀಪದ ಪಟಗುಂದಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆರ್. ಡಿ. ಎಸ್, ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಾರ್ಷಿಕ ಎನ್. ಎಸ್. ಎಸ್. ಶಿಬಿರದ ನಾಲ್ಕನೇ ದಿನದ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸರಕಾರ ಸಾಮಾಜಿಕ ಅಭಿವೃದ್ಧಿಯ ದೃಷ್ಟಿಕೋನವನ್ನು ಇಟ್ಟುಕೊಂಡು ಎಲ್ಲ ವರ್ಗ ಮತ್ತು ಕೆಳಹಂತದ ಸಮುದಾಯಗಳ ಅಭಿವೃದ್ಧಿಗಾಗಿ ಅನೇಕೆ ಯೋಜನೆಗಳು ಇದ್ದು ನಮ್ಮ ಗ್ರಾಮಪಂಚಾಯತ ತಾಲೂಕಾ ಪಂಚಾಯತ ಅನೇಕ ಸೌಹಾರ್ದ ಬ್ಯಾಂಕುಗಳ ಮೂಲಕ ತರಬೇತಿ ಹಾಗೂ ಆರ್ಥಿಕ ಪರಿಹಾರ ಯೋಜನೆಗಳಿದ್ದು ಅವುಗಳ ಸದುಪಯೋಗಗಳನ್ನು ನಮ್ಮ ಸಮಾಜ ಪಡೆದುಕೊಳ್ಳಬೇಕೆಂದರು.
ಕಾಲೇಜು ಪ್ರಾಚಾರ್ಯ ಸತೀಶ ಗೋಟೂರೆ ಮಾತನಾಡಿ ಸರಕಾರಿ ಯೋಜನೆಗಳು ಗ್ರಾಮೀಣ ಸಮುದಾಯದ ಬಲವರ್ಧನೆಗಳಿಗೆ ಇದ್ದು ಅದರ ಪ್ರಯೋಜನವನ್ನು ಕೃಷಿಕರಿಗೆ ಮಹಿಳೆಯರಿಗೆ ಮತ್ತು ಯುವಕರಿಗೆ ಪ್ರತ್ಯೇಕ ಯೋಜನೆಗಳಿದ್ದು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಲು ಇಂದಿನ ಸಮಾಜ ಪ್ರಯತ್ನಿಸಬೇಕೆಂದರು.
ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಚಿಕ್ಕೋಡಿ ಜಿಲ್ಲಾ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಶಂಕರ ನಿಂಗನೂರ ಶಿಬಿರಕ್ಕೆ ಬೇಟಿನೀಡಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಎನ್.ಎಸ್.ಎಸ್. ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ಸ್ವಾವಲಂಬನೆ ಮತ್ತು ಸ್ಪೂರ್ತಿದಾಯಿಕ ವ್ಯಕ್ತಿತ್ವ ಬೆಳಸಿಕೊಳ್ಳಲು ಸಾಧ್ಯವಿದೆ ಎಂದರು.
ಮೂಡಲಗಿ ತಾಲೂಕಿನ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎ ಬಿ ನಾಯ್ಕ ಮಾತನಾಡಿ ಸರಕಾರಿ ಯೋಜನೆಗಳು ಜನರ ಶ್ರೇಯೋಭಿವೃದ್ಧಿಗೆ ರೂಪಗೊಂಡಿದ್ದು ಅವುಗಳ ತಿಳಿವಳಿಕೆ ಪಡೆದು ನಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಲು ನಾವುಗಳು ಪ್ರಯತ್ನಿಸಬೇಕೆಂದರು.
ಕಾರ್ಯಕ್ರಮದಲ್ಲಿ ಪಟಗುಂದಿಯ ಹಿರಿಯರಾದ ಭರತರಾಜ ಪಾಟೀಲ, ಪರಮಾನಂದ ತುಬಾಕಿ, ಪಿ.ಎಚ್. ಕಾಂಬಳೆ, ಸಂದೀಪ ಶೆಟ್ಟಿ ಉಪನ್ಯಾಸಕರಾದ ಸುನೀಲ ಸತ್ತಿ, , ಕವಿತಾ ಮಳಲಿ ಜಿ.ಎಚ್. ಕಡಪಟ್ಟಿ ಎಸ್.ಬಿ.ಮಾಲೋಜಿ ಎನ್.ಎಸ್.ಎಸ್. ಘಟಕಾಧಿಕಾರಿ ರಾಜು ಪತ್ತಾರ ಮತ್ತಿತ್ತರರು ಹಾಜರಿದ್ದರು.
ಸವಿತಾ ಸುರಾಣಿ ನಿರೂಪಿಸಿದರು ಕಾವೇರಿ ಪೂಜೇರಿ ಸ್ವಾಗತಿಸಿದರು ಐಶ್ವರ್ಯ ಉಪ್ಪಾರ ವಂದಿಸಿದರು.