Breaking News
Home / Recent Posts / ಮನುಜ ಕುಲದ ಮಹತ್ವ ಸಾರಿದ ಚಿಂತನಕಾರ ಭಕ್ತ ಕನಕದಾಸರು – ಮಲ್ಲಪ್ಪ ಜಾಡರ

ಮನುಜ ಕುಲದ ಮಹತ್ವ ಸಾರಿದ ಚಿಂತನಕಾರ ಭಕ್ತ ಕನಕದಾಸರು – ಮಲ್ಲಪ್ಪ ಜಾಡರ

Spread the love

ಮನುಜ ಕುಲದ ಮಹತ್ವ ಸಾರಿದ ಚಿಂತನಕಾರ ಭಕ್ತ ಕನಕದಾಸರು – ಮಲ್ಲಪ್ಪ ಜಾಡರ

ಮೂಡಲಗಿ : ಮನುಜ ಕುಲದ ಮಹತ್ವ ಸಾರಿದ ಚಿಂತನಕಾರರರು ಮತ್ತು ಭಕ್ತಿ ಕೀರ್ತನೆಗಳ ಮೂಲಕ ದೇವರನ್ನು ಒಲಸಿಕೊಂಡವರು. ಕನ್ನಡ ಭಾಷೆಯ ಪ್ರಸಿದ್ದ ಕೀರ್ತನಕಾರರು 16ನೇ ಶತಮಾನದಲ್ಲಿ ಪ್ರಭಲವಾಗಿರುವ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು. ಭಕ್ತಿ, ಕವಿತ್ವ ಮತ್ತು ಸಂಗೀತದಲ್ಲಿಯ ಸಾಧನೆಗೆ ಜಾತಿ ಎಂದೂ ತೊಡಕಾಗುವುದಿಲ್ಲ ಎಂದು ತಿಳಿಸಿಕೊಟ್ಟಿರುವ ಕನಕದಾಸರ ಜೀವನ ಮನುಜ ಕುಲಕ್ಕೆ ಮಾದರಿಯಾಗಿದೆ ಎಂದು ಮೂಡಲಗಿಯ ಆರ್.ಡಿ.ಎಸ್. ಪಿ.ಯು ಕಾಲೇಜಿನ ಉಪನ್ಯಾಸಕ ಮಲ್ಲಪ್ಪ ಜಾಡರ ಹೇಳಿದರು.

ಅವರು ಸ್ಥಳೀಯ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸಮಾಜಕಾರ್ಯ ಪದವಿ ಮಹಾವಿದ್ಯಾಲಯ, ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ಶ್ರೀವಿಶ್ವೇಶ್ವರಯ್ಯ ಆಯ್.ಟಿ.ಆಯ್ ಕಾಲೇಜು ಎನ್.ಎಸ್.ಎಸ್. ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವಹಿಸಿಕೊಂಡು ಮಾತನಾಡಿದರು.

ಅತಿಥಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಟಿ.ಎಸ್. ಒಂಟಿಗೊಡಿ ಮಾತನಾಡಿ ಕನಕದಾಸರು ಜಗತ್ತು ಕಂಡ ಸರ್ವಶ್ರೇಷ್ಟ ಚಿಂತನಕಾರರು ಅಲ್ಲದೇ ಸಮಾಜದ ಅಂಕುಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ಪರಿವರ್ತನೆ ಮಾಡಿದ ಹರಿಕಾರರು. ಎಲ್ಲ ಕಡೆ ದೇವನಿದ್ದು ದೇವನ ಆಕಾರ ನಿರಾಕಾರ. ಎಲ್ಲರೂ ಮಾಡುವುದು ಗೇನು ಹೊಟ್ಟೆಗಾಗಿ ಗೇನು ಬಟ್ಟೆಗಾಗಿ ಎಂದು ಹೇಳಿದ ದಾರ್ಸನಿಕ ಭಕ್ತ ಕನಕದಾಸರು ಎಂದರು.

ಅತಿಥಿ ಆಯ್.ಟಿ.ಆಯ್. ಕಾಲೇಜಿನ ಪ್ರಾಚಾರ್ಯ ಚಿದಾನಂದ ಶೆಟ್ಟರ ಮಾತನಾಡಿ ಇಂದಿನ ಸಮಾಜದಲ್ಲಿ ಸಾಮಾಜಿಕ ಚಿಂತಕರ ಜೀವನದ ಆದರ್ಶಗಳನ್ನು ಬೆಳಸುವುದು ಅವಶ್ಯಕವಿದ್ದು ಭಕ್ತ ಕನಕದಾಸರು ಸಮಾಜದಲ್ಲಿ ಸರ್ವ ಮಾನವ ಕುಲದ ಐಕ್ಯತೆ ಸಂದೇಶ ಸಾರಿದರು ಅವುಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿವೆ ಅವುಗಳನ್ನು ಇಂದಿನ ಸಮಾಜ ಅಳವಡಿಸಿಕೊಳ್ಳುವುದು ಅವಶ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಪದವಿ ಕಾಲೇಜಿನ ಆಡಳಿತಾಧಿಕಾರಿ ಬಿ.ಎಲ್. ಮಾದಗೌಡ್ರ ಮಾತನಾಡಿ ದಾಸ ಸಾಹಿತ್ಯದಲ್ಲಿಯೇ ಕನಕದಾಸರ ಸಾಹಿತ್ಯ ಭಕ್ತಿ ಮತ್ತು ಸಮಾಜ ತಿದ್ದುವ ಮೌಲ್ಯಗಳನ್ನು ಹೊಂದಿದ್ದು. ಅವುಗಳನ್ನು ಇಂದಿನ ಮಕ್ಕಳಲ್ಲಿ ಶಿಕ್ಷಣದ ಚಟುವಟಿಕೆಗಳ ಮೂಲಕ ಬೆಳಸುವುದು ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಸತ್ಯೇಪ್ಪ ಗೋಟೂರ, ಸಂಜೀವ ವಾಲಿ, ಎಸ್.ಎನ್ ಕುಂಬಾರ ಇನ್ನುಳಿದ ಉಪನ್ಯಾಸಕರು ಹಾಜರಿದ್ದರು.
ಉಪನ್ಯಾಸಕ ಸಂಜೀವ ಮಂಟೂರ ಸ್ವಾಗತಿಸಿದರು. ಉಪನ್ಯಾಸಕ ಮಹಾದೇವ ಸಿದ್ನಾಳ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ