Breaking News
Home / Recent Posts / ವಿದ್ಯಾರ್ಥಿಗಳು ಬದುಕನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು : ಬಿ. ಪಿ. ಬಂದಿ.

ವಿದ್ಯಾರ್ಥಿಗಳು ಬದುಕನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು : ಬಿ. ಪಿ. ಬಂದಿ.

Spread the love

ವಿದ್ಯಾರ್ಥಿಗಳು ಬದುಕನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು : ಬಿ. ಪಿ. ಬಂದಿ.

ಮೂಡಲಗಿ : ವಿದ್ಯಾರ್ಥಿಗಳು ಬದುಕನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು ಬದುಕು ರೂಪಿಸುವ ಅಮೂಲ್ಯವಾದ ಶಿಕ್ಷಣವು ಪಿಯು ಹಂತದ ಶಿಕ್ಷಣವಾಗಿದ್ದು ಪ್ರಯತ್ನ ಮತ್ತು ಶ್ರೇದ್ದೆ ಇದ್ದರೆ ಯಶಸ್ಸು ಖಂಡಿತ ಇಂದಿನ ಸ್ಪರ್ದೇಗಳಲ್ಲಿ ಅಧ್ಯಯನಕ್ಕೆ ಹೆಚ್ಚು ಮಹತ್ವ ಇದೆ ಬದುಕಿನ ಮಹತ್ವ ತಿಳಿದು ನಿಮಗಾಗಿ ತಂದೆ ತಾಯಿಗಳು ಗುರುಗಳು ಪಡುವ ಶ್ರಮವನ್ನು ಅರಿತು ಅಧ್ಯಯನದಲ್ಲಿ ವಿದ್ಯಾರ್ಥಿಗಳು ತೊಡಗುವುದು ಅವಶ್ಯಕ ಎಂದು ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಗ್ರಂಥಪಾಲಕರಾದ ಬಿ. ಪಿ ಬಂದಿ ಹೇಳಿದರು.
ಅವರು ಸ್ಥಳೀಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೂಡುವ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಅತಿಥಿಗಳಾದ ಮಹಾಲಿಂಗಪೂರದ ಕೆ ಎಲ್ ಇ ಮಹಾವಿದ್ಯಾಲಯದ ಉಪನ್ಯಾಸಕ ಮತ್ತು ಪತ್ರಕರ್ತ ಶಿವಲಿಂಗ ಸಿದ್ನಾಳ ಮಾತನಾಡಿ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಬೇಕಾದರೆ ಅಧ್ಯಯನಕ್ಕೆ ಮಹತ್ವ ನೀಡಬೇಕು ಮತ್ತು ನಿರಂತರ ಪ್ರಯತ್ನ ಹಾಗೂ ಓದು ನಿಮ್ಮ ಮುಂದಿನ ಬದುಕನ್ನು ಸಮೃದ್ಧಗೊಳಿಸುತ್ತದೆ. ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಯಶಸ್ಸನ್ನು ಗಳಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಮತ್ತು ಅಂತಹ ಪ್ರಯತ್ನಕ್ಕೆ ಪ್ರೋತ್ಸಾಹಿಸುವ ಇಂತಹ ಶಿಕ್ಷಣ ಸಂಸ್ಥೆಯ ಕಾರ್ಯ ಅವೀಸ್ಮರಣಿಯವಾದದ್ದು ಎಂದರು.

ಮೂಡಲಗಿಯ ಜಾನಪದ ಜಾಣ ಗಾಯಕ ಶಬ್ಬಿರ ಡಾಂಗೆ ಮಾತನಾಡಿ ತಂದೆ ತಾಯಿಗಳು ಮಕ್ಕಳ ಬದುಕನ್ನು ಸುಂದರ ಮಾಡಲು ಹಗಲು ಇರಳು ಪ್ರಯತ್ನಿಸುತ್ತಾರೆ ಆ ಪ್ರಯತ್ನಕ್ಕೆ ನಿಮ್ಮ ಪ್ರಯತ್ನ ಸೇರಿದರೆ ನಿಮ್ಮ ಕನಸ್ಸು ನನಸಾಗುವುದರಲ್ಲಿ ಸಂಶಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಯಶಸ್ಸಿಗೆ ಪ್ರಯತ್ನಿಸಬೇಕೆಂದರು ಕಾರ್ಯಕ್ರಮದಲ್ಲಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಕ್ರೀಡೆ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಕಳೆದ ವರ್ಷದಲ್ಲಿ ಉತ್ತಮ ಫಲಿತಾಂಶ ಪಡೆದವರನ್ನು ಸತ್ಕರಿಸಲಾಯಿತು ಪುರಸಭೆ ಸದಸ್ಯರಾದ ಶಿವಾನಂದ ಚಂಡಕಿ, ಗ್ರಾಮ ಪಂಚಾಯತ ಮಾಜಿ ಸದಸ್ಯರಾದ ರಮೇಶ ಪಾಟೀಲ. ಕಾಶೀಮಅಲಿ ಸಹಕಾರಿ ಸಂಘದ ಅಧ್ಯಕ್ಷರಾದ ಅನ್ವರ ನದಾಫ, ಪ್ರಗತಿಪರ ರೈತರಾದ ಗಿರಿಗೌಡ ಪಾಟೀಲ, ಪತ್ರಕರ್ತರು ಹಾಜರಿದ್ದರು. ನಂತರ ಮಕ್ಕಳಿಂದ ವಿವಿಧ ಮನರಂಜನಾ ಚಟುವಟಿಕೆಗಳು ನಡೆದವು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ