ಮಕ್ಕಳಲ್ಲಿ ಶೈಕ್ಷಣಿಕ ಹೃದಯವಂತಿಕೆ ಬೆಳಸಬೇಕು – ಸತೀಶ ಬಿ.ಎಸ್.
ಮೂಡಲಗಿ : ಮಕ್ಕಳಲ್ಲಿ ಶೈಕ್ಷಣಿಕ ಹೃದಯವಂತಿಕೆ ಬೆಳಸಲು ಶಿಕ್ಷಕರು ಆಧ್ಯತೆ ನೀಡಬೇಕು ಮಕ್ಕಳ ಮನಸ್ಸು ಅರಳುವ ಹೂವುಗಳು ಇದ್ದಂತೆ ಶಿಕ್ಷಕರು ಮಕ್ಕಳನ್ನು ದೇವತೆಗಳು ಧರಿಸುವ ದೇವತಾ ಪುಷ್ಪಗಳಾಗಿ ತಯಾರಿಸಬೇಕು ಮಕ್ಕಳು ಸಹಿತ ಗುರುಭಕ್ತಿಯಿಂದ ನಡೆದುಕೊಂಡು ಪ್ರಯತ್ನ ಮಾಡಿ ತಮ್ಮ ಭವಿಷ್ಯದ ಗುರಿಯನ್ನು ತಲುಪಲು ಪ್ರಯತ್ನಿಸಬೇಕು ಗುರು ನಿಸ್ವಾರ್ಥತೆಯಿಂದ ಮಕ್ಕಳ ಸೇವೆ ಮಾಡುವದರ ಜೊತೆಗೆ ಮಕ್ಕಳ ಸೇವೆಯಲ್ಲಿ ಸಿಗುವ ತೃಪ್ತಿ ಮತ್ತೊಂದು ಯಾವುದೇ ಕ್ಷೇತ್ರದಲ್ಲಿ ದೊರೆಯುವದಿಲ್ಲ ಎಂದು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇಸಿಓ ಸತೀಶ ಬಿ.ಎಸ್. ಹೇಳಿದರು.
ಅವರು ಸ್ಥಳೀಯ ಆರ್.ಡಿ.ಎಸ್. ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮೂಡಲಗಿಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೂಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಮಕ್ಕಳಲ್ಲಿ ಪಾಲಕರು ಸಹಿತ ಓದಿನ ಅಭಿರುಚಿ ಬೆಳಸಲು ಪ್ರಯತ್ನಿಸಬೇಕು ತಾಯಿಂದರಲ್ಲಿ ಟಿ ವಿ ಮೋಹ ಮತ್ತು ತಂದೆಯಲ್ಲಿ ಮೊಬೈಲ್ ಮೋಹ ಇರುವದರಿಂದ ಮಕ್ಕಳನ್ನು ಸಹಿತ ಅದೇ ಮೋಹದಲ್ಲಿ ತೊಡಗಿಸುತ್ತಿದ್ದು ಗುರುಗಳಷ್ಟೇ ತಂದೆ ತಾಯಿಗಳು ಮಕ್ಕಳ ಕಲಿಕಾಸಕ್ತಿಯನ್ನು ಬೆಳಸಬೇಕಂದರು
ಶಾಲೆಯ ಪ್ರಧಾನ ಗುರುಗಳಾದ ಕಾಮಣ್ಣ ಕಾಳೆ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಅವರ ಅಭಿವೃದ್ದಿಯಲ್ಲಿ ಶಿಕ್ಷಕರ ಶ್ರಮ ನಿರಂತರವಾಗಿದೆ ಎಂದರು.
ಇಟ್ನಾಳದ ಮೈಲಾರಲಿಂಗೇಶ್ವರ ದೇವಸ್ಥಾನ ಶ್ರೀ ಸಿದ್ದೇಶ್ವರ ಆಶ್ರಮದ ಪೀಠಾಧಿಪತಿಗಳಾದ ಪ. ಪೂ. ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು. ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಆರ್ಶಿವಚನ ನೀಡುತ್ತಾ ಮಕ್ಕಳು ದೇವರ ಸಮಾನ ಅವರಲ್ಲಿ ಒಳ್ಳೆಯ ಸಮಾಜದ ಮೌಲ್ಯಗಳನ್ನು ಶಾಲಾ ಶಿಕ್ಷಕರೊಂದಿಗೆ ಪಾಲಕ ಬಂದುಗಳು ಬೆಳಸುವುದು ಇಂದಿನ ಸಮಾಜಕ್ಕೆ ಅತೀಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ ವಹಿಸಿಕೊಂಡು ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆ ಮಕ್ಕಳ ಪ್ರತಿಭಾವಂತಿಕೆಯನ್ನು ಬೆಳಸುತ್ತಿದೆ ಎಲ್ಲ ಪಾಲಕರು ಅದರ ಸದುಪಯೋಗ ಪಡಿದುಕೊಳ್ಳಬೇಕಂದರು ಕಾರ್ಯಕ್ರಮದಲ್ಲಿ ಕ್ರೀಡೆ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಹಾಗೂ ಇಲಾಖೆಯಿಂದ ನಡೆದ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದವರನ್ನು ಸತ್ಕರಿಸಲಾಯಿತು.
ಪುರಸಭೆ ಅಧ್ಯಕ್ಷರಾದ ಹಣಮಂತ ಗುಡ್ಲಮನಿ, ಗ್ರಾಮ ಪಂಚಾಯತ ಮಾಜಿ ಸದಸ್ಯರಾದ ರಮೇಶ ಪಾಟೀಲ. ಶ್ರೀಮಹಾಲಕ್ಷ್ಮೀ ಬ್ಯಾಂಕಿನ ನಿರ್ದೇಶಕರಾದ ಮಹಾದೇವ ಗೋಕಾಕ ಸಹಕಾರ್ಯದರ್ಶಿ ಹಣಮಂತ ದೇಸಾಯಿ, ಆಡಳಿತಾಧಿಕಾರಿ ಬಿ.ಎಲ್.ಮಾದಗೌಡ್ರ ಪತ್ರಕರ್ತ ಮಿತ್ರರು ಹಾಜರಿದ್ದರು. ನಂತರ ಮಕ್ಕಳಿಂದ ವಿವಿಧ ಮನರಂಜನಾ ಚಟುವಟಿಕೆಗಳು ನಡೆದವು.
ಶಿಕ್ಷಕ ಕುಮಾರ ಕರವಾಡಿ ನಿರೂಪಿಸಿದರು ಶಿಕ್ಷಕಿ ಶ್ರಿದೇವಿ ಚನ್ನಾಳ ಸ್ವಾಗತಿಸಿದರು. ಶಿಕ್ಷಕಿ ಪೂಜಾ ಪಾಟೀಲ ವಂದಿಸಿದರು.