Breaking News
Home / Recent Posts / ಪರಿಸರ ಕಾಳಜಿ ನಮ್ಮೆಲ್ಲರ ಜವಾಬ್ದಾರಿ:-ಹಣಮಂತ ಬಸಳಿಗುಂದಿ

ಪರಿಸರ ಕಾಳಜಿ ನಮ್ಮೆಲ್ಲರ ಜವಾಬ್ದಾರಿ:-ಹಣಮಂತ ಬಸಳಿಗುಂದಿ

Spread the love

ಪರಿಸರ ಕಾಳಜಿ ನಮ್ಮೆಲ್ಲರ ಜವಾಬ್ದಾರಿ:-ಹಣಮಂತ ಬಸಳಿಗುಂದಿ

ಮೂಡಲಗಿ: ಸ್ಥಳೀಯ ಆರ್.ಡಿ.ಎಸ್. ಸಂಸ್ಥೆಯ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ,ಎ.ಸಿ. ಹಾಗೂ ಎನ್.ಎಸ್.ಎಸ್. ಘಟಕದ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಖಾನಟ್ಟಿ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಣಮಂತ ಬಸಳಿಗುಂದಿ ಇವರು ಮಹಾವಿದ್ಯಾಲಯದ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಇವರು 21 ನೇ ಶತಮಾನದಲ್ಲಿ ಪರಿಸರ ಮಾಲಿನ್ಯವು ಪ್ರತಿಯೊಬ್ಬರಿಂದ ಆಗುತ್ತಿದ್ದು ಇದಕ್ಕೆ ಮುಕ್ತಿ ನೀಡಬೆಕೆಂದರೆ ಪ್ರತಿಯೊಬ್ಬ ಪ್ರಜೆಯು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವುದು ಹಾಗೂ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಕೆಂದರೆ ನಮ್ಮ ಮುಂದಿನ ಪಿಳಿಗೆಗೆ ಮಳೆಯ ಕೊರತೆ ಉಂಟಾಗಬಹುದು ಆದ್ದರಿಂದ ಪ್ರತಿಯೊಬ್ಬ ಪ್ರಜೆಯು ಪರಿಸರ ಕಾಳಜಿ ಹೊಂದುವಂತೆ ಮಾಡುವುದು ನಮೆಲ್ಲರ ಜವಾಬ್ದಾರಿ ಎಂದು ಹೇಳಿದರು ಅಲ್ಲದೆ ವಾಯು ಮಾಲಿನ್ಯಕ್ಕೆ ಸಂಬಂದಿಸಿದಂತೆ ಹೆಳುವುದಾದರೆ ಅವಶ್ಯವಿದ್ದಾಗ ಮಾತ್ರ ವಾಹನಗಳನ್ನು ಬಳಸಬೇಕು .ಇಂತಹ ಜವಾಬ್ದಾರಿ ನಿರ್ವಹಿಸಬೇಕೆಂದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾಗ್ರತಿ ಮೂಡಿಸುವುದು ಅವಶ್ಯವಿದೆ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳು ತಮ್ಮ ಗುರಿ ಉದ್ದೇಶವನ್ನು ಅರಿತು ವಿದ್ಯಾಬ್ಯಾಸ ಮಾಡುವುದರಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆಯಬಹುದು ಅದರಂತೆ ಪ್ರತಿ ವಿದ್ಯಾರ್ಥಿಯು ಸಮಯವನ್ನು ವ್ಯರ್ಥಮಾಡದೆ ತಮ್ಮ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎಸ್.ಬಿ. ಗೋಟೂರೆ ಇವರು ವಹಿಸಿದ್ದರು ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಎಸ್.ಎನ್.ಕುಂಬಾರ, ಸಿ.ಸಿ.ಶೆಟ್ಟರ, ಜೋಸೆಪ್.ಎಸ್ಬಿ, .ಹಾಗೂ ಕಾಮಣ್ಣಾ ಕಾಳೆ ವೇದಿಕೆ ಅಲಂಕರಿಸಿದ್ದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಬಾಗವಹಿಸಿದ್ದರು.ವಿದ್ಯಾರ್ಥಿನಿಯರಾದ ಕುಮಾರಿ.ಪ್ರೀತಿ ಹಲಗಲಿ ಹಾಗೂ ಅಶ್ವಿನಿ ಉಪ್ಪಾರ ನಿರೂಪಿಸಿದರು ಉನ್ಯಾಸಕರಾದ ಶ್ರೀ ಎಸ್.ಎಮ್.ಮೂಗಳಖೋಡ ಸ್ವಾಗತಿಸಿದರು.ಕುಮಾರಿ ಸೃಷ್ಟಿ ಸಣ್ಣಕ್ಕಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ