ಏ.6 ರಂದುಶ್ರೀ ಸತ್ಯಸಾಯಿ ಸೇವಾ ಸಮಿತಿಯ 18ನೇ ವಾರ್ಷಿಕೋತ್ಸವ
ಮೂಡಲಗಿ: ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ 18ನೇ ವಾರ್ಷಿಕೋತ್ಸವವು ಏ.6 ರಂದು ಮುಂಜಾನೆ 10-30ಕ್ಕೆ ಆರ್.ಡಿಎಸ್. ಸಂಸ್ಥೆಯ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು, ಶ್ರೀ ಶ್ರೀಧರಬೋಧ ಸ್ವಾಮಿಗಳು, ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು ವಹಿಸುವರು.
ಬೆಳಗಾವಿ ಜಿಲ್ಲಾ ಶ್ರೀ ಸತ್ಯಸಾಯಿ ಸೇವಾ ಸಮಿತಿ ಅಧ್ಯಕ್ಷ ವಸಂತ ಬಾಳಿಗಾ ಅಧ್ಯಕ್ಷತೆ ವಹಿಸುವರು. ಬಳೋಬಾಳದ ಮಾತಾ ನೀಲಾಂಬಿಕಾದೇವಿ, ಕಲ್ಲೋಳಿಯ ಸುರೇಶ ಕಬ್ಬೂರ ಮುಖ್ಯತಿಥಿಗಳಾಗಿ ಆಗಮಿಸುವರು. ಆರ್.ಡಿಎಸ್. ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ, ಬಿಇಒ ಅಜಿತ ಮನ್ನಿಕೇರಿ ಉಪಸ್ಥಿತರುವರು ಎಂದು ಶ್ರೀ ಸತ್ಯಸಾಯಿ ಸೇವಾ ಸಮಿತಿಯವರು ತಿಳಿಸಿದ್ದಾರೆ.