Breaking News
Home / Recent Posts / ‘ಪೌರ ಕಾರ್ಮಿಕರನ್ನು ಸಮಾಜವು ಗೌರವಿಸಬೇಕು’

‘ಪೌರ ಕಾರ್ಮಿಕರನ್ನು ಸಮಾಜವು ಗೌರವಿಸಬೇಕು’

Spread the love

 ‘ಪೌರ ಕಾರ್ಮಿಕರನ್ನು ಸಮಾಜವು ಗೌರವಿಸಬೇಕು’

ಮೂಡಲಗಿ: ‘ಜನರ ಆರೋಗ್ಯ ಕಾಯುವಲ್ಲಿ ಪೌರ ಕಾರ್ಮಿಕರ ಸೇವೆಯು ಅಮೂಲ್ಯವಾಗಿದ್ದು, ಸಮಾಜವು ಪೌರ ಕಾರ್ಮಿಕರವನ್ನು ಗೌರವಿಸಬೇಕು’ ಎಂದು ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ ಹೇಳಿದರು.
ಇಲ್ಲಿಯ ಪುರಸಭೆಯಲ್ಲಿ ಶನಿವಾರ ಆಚರಿಸಿದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಹಿರಿಯ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೌರ ಕಾರ್ಮಿಕರನ್ನು ನಿರ್ಲಕ್ಷ ಮಾಡಬಾರದು ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಜನರ ಸೇವೆ ಮಾಡುವ ಮೂಲಕ ಜನರ ಆರೋಗ್ಯ ರಕ್ಷಕರೆನಿಸಿಕೊಂಡಿದ್ದಾರೆ. ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಪ್ರಸ್ತಾವಿಕ ಮಾತನಾಡಿ ಪೌರ ಕಾರ್ಮಿಕರನ್ನು ಕಸದವರು ಎಂದು ತುಚ್ಛವಾಗಿ ಕಾಣಬಾರದು. ಅವರು ಊರನ್ನು ಸ್ವಚ್ಛ ಮಾಡಿ, ಎಲ್ಲರ ಆರೋಗ್ಯ ಕಾಪಾಡುವ ಮೂಲಕ ಪ್ರಾಥಮಿಕ ವೈದ್ಯರ ಕಾರ್ಯ ಮಾಡುತ್ತಾರೆ ಎಂದರು.
ಹಿರಿಯ ಪೌರ ಕಾರ್ಮಿಕರಾದ ನಂದಾ ಗಸ್ತಿ, ಯಲ್ಲವ್ವ ಗಸ್ತಿ, ಲಕ್ಕವ್ವ ಗಸ್ತಿ, ರಾಮಚಂದ್ರ ಸಣ್ಣಕ್ಕಿ, ಕಾಶವ್ವ ನಾಗನೂರ, ರೇಣುಕಾ ತಳವಾರ, ಶಕುಂತಲಾ ಗಸ್ತಿ, ಮಾನಂದಾ ತಿಗಡಿ, ನಾಗವ್ವ ಗಸ್ತಿ, ದೇವಪ್ಪ ಗಸ್ತಿ ಇವರನ್ನು ಸನ್ಮಾನಿಸಿದರು.
ಪ್ರಭಾರಿ ಮುಖ್ಯಾಧಿಕಾರಿ ಚಂದ್ರು ಪಾಟೀಲ ವಹಿಸಿದ್ದರು. ಪುರಸಭೆ ಸದಸ್ಯ ಶಿವು ಚಂಡಕಿ, ಚನ್ನಪ್ಪ ಅಥಣಿ ವೇದಿಕೆಯಲಿದ್ದರು.
ಸುಭಾಷ ಸಾಯನ್ನವರ, ರಮೇಶ ಆಲಗೂರ, ಮಲ್ಲಿಕಾರ್ಜುನ ಯರನಾಳ, ಲಲಿತಾ ಜಾಧವ ಮತ್ತಿತರರು ಇದ್ದರು.


Spread the love

About inmudalgi

Check Also

ಅರಳಮಟ್ಟಿಯಲ್ಲಿ ಭಜನಾ ಕಾರ್ಯಕ್ರಮ

Spread the loveಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದ ಚಕ್ರವರ್ತಿ ಶ್ರೀ ಸದಾಶಿವ ಮುತ್ಯಾನ ಭಜನಾ ಕಾರ್ಯಕ್ರಮ ಹಾಗೂ ಸಮುದಾಯ ಭವನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ