Breaking News
Home / ಬೆಳಗಾವಿ / ಪೌರ ನೌಕರರ ಸಂಘದ ಮೂಡಲಗಿ ತಾಲೂಕಾ ಘಟಕದಿಂದ ಅನಿರ್ದಿಷ್ಟಕಾಲ ಮುಷ್ಕರ

ಪೌರ ನೌಕರರ ಸಂಘದ ಮೂಡಲಗಿ ತಾಲೂಕಾ ಘಟಕದಿಂದ ಅನಿರ್ದಿಷ್ಟಕಾಲ ಮುಷ್ಕರ

Spread the love

ಮೂಡಲಗಿ: ರಾಜ್ಯದಲ್ಲಿರುವ ಎಲ್ಲಾ ಮಹಾನಗರಪಾಲಿಕೆ, ನಗರಸ್ಥಳೀಯ ಸಂಸ್ಥೆಗಳಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಮೂಡಲಗಿ ತಾಲೂಕಾ ಘಟಕದಿಂದ ಮಂಗಳವಾರದಂದು ಪಟ್ಟಣದ ಪುರಸಭೆ ಆವರಣದಲ್ಲಿ ಅನಿರ್ದಿಷ್ಟಕಾಲ ಮುಷ್ಕರ ಹಮ್ಮಿಕೊಡಿದ್ದರು.

ಪೌರ ನೌಕರರ ಮುಷ್ಕರಕ್ಕೆ ಕರ್ನಾಟಕ ರಾಜ್ಯ ದಲ್ಲಿತ ಸಂಘರ್ಷ ಸಮೀತಿ ಬೆಂಬಲ ಸೂಚಿಸಿ ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ದಲಿತ ಮುಖಂಡ ರಮೇಶ ಸಣ್ಣಕ್ಕಿ ಮಾತನಾಡಿ, ನೌಕರರ ಬೇಡಿಕೆಗಳ ಈಡೇರಿಕ್ಕೆಗಾಗಿ ಕಳೆದ 45 ದಿನಗಳ ಗಡುವು ನೀಡಿದನ್ನು ಸರಕಾರ ಗಮನಸದೇ ಇರುವದಕ್ಕೆ ಮಂಗಳವಾರದಿಂದ ಹಮ್ಮಿಕೊಂಡ ಅನಿರ್ದಿಷ್ಟ ಕಾಲ ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದ್ದು, ನಗರ ಸ್ಥಳೀಯ ಸಂಸ್ಥೆಯ ನೌಕರರನ್ನು ರಾಜ್ಯ ಸರ್ಕಾರಿ, ನೌಕರರೆಂದು ಘೋಷಿಸುವುದು, ರಾಜ್ಯ ಸರ್ಕಾರಿ ನೌಕರರಿಗೆ ದೊರಕುತ್ತಿರುವ ಸೌಲತ್ತುಗಳಾದ ಕೆ.ಜಿ.ಆಯ್.ಡಿ, ಜಿ.ಪಿ.ಎಫ್. ಜೋತಿ ಸಂಜೀವಿನಿ ಹಾಗೂ ಕರ್ನಾಟಕ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 20-25 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ವಾಟರ್‍ಮೆನ್, ಕಂಪ್ಯೂಟರ್ ಆಫರೇಟರ್, ವಾಹನ ಚಾಲಕರು, ಬೀದಿ ದೀಪ ನಿರ್ವಹಣೆ ಕಾರ್ಮಿಕರು, ಲೋಡರ್ಸ್ ಕ್ಲಿನರ್ಸ್ ಹೆಲ್ಪರ್, ಸ್ಯಾನಿಟರಿ ಸೂಪರವೈಜರ್ ಇನ್ನೂ ಅನೇಕ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಗುತ್ತಿಗೆ ಪದ್ದತಿಯಿಂದ ಮುಕ್ತಿಗೊಳಿಸಿ ನೇರ ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಯಡಿ ಪರಿಗಣಿಸುವಂತೆ ಅಲ್ಲದೇ ಇನ್ನೂ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಾಂತ ನಮ್ಮ ಸಂಘಟನೆ ಉಗ್ರ ಪ್ರತಿಭಟನೆ, ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವದು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಪೌರ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಶಿದ್ದಿಂಗಪ್ಪಗೋಳ ಮಾತನಾಡಿ, ಒಂದು ವೇಳೆ ಪೌರನೌಕರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂಧಿಸದೇ ಹೋದರೆ ಈ ಹೋರಾಟ ಇಷ್ಟಕ್ಕೆ ಮುಗಿಯುವುದಿಲ್ಲ ಅನಿರ್ದಿಷ್ಟಕಾಲ ಮುಷ್ಕರ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪೌರ ಕಾರ್ಮಿಕರ ಅನಿರ್ದಿಷ್ಟಕಾಲ ಮುಷ್ಕರಕ್ಕೆ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರು ಬೆಂಬಲಿಸಿ ಹೋರಾಟದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಖಜಾಂಚಿ ಯಶ್ವಂತ ಸಣ್ಣಕ್ಕಿ, ಉಪಾಧ್ಯಕ್ಷ ಶಿವಬೋಧ ಕಪ್ಪಲಗುದ್ದಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಯರನಾಳ, ಸಂಘಟನಾ ಪಾಂಡು ಮುತ್ತಗಿ, ಖಜಾಂಚಿ ಯಲ್ಲವ್ವ ಗಸ್ತಿ, ಸುನಿತಾ ಗಸ್ತಿ, ಲಲಿತಾ ಜಾಧವ, ಸೇವಂತಾ ಗಸ್ತಿ, ಸಂತೋಷ ನಾಯಿಕ, ಪುರಸಭೆ ಮುಖ್ಯಧಿಕಾರಿ ತುಕಾರಾಮ ಮಾದರ, ಪುರಸಭೆ ಸದಸ್ಯ ಅಬ್ದುಲಗಪ್ಪಾರ ಡಾಂಗೆ ಹಾಗೂ ದಲಿತ ಮುಖಂಡರಾದ ಶಾಬು ಸಣ್ಣಕ್ಕಿ, ಈರಪ್ಪ ಢವಳೇಶ್ವರ, ಯಶವಂತ ಮಂಟೂರಹಾಗೂ ಅನೇಕ ನೌಕರರು ಉಪಸ್ಥಿತರಿದ್ದರು.
ಫೋಟೋ ಕಾಫ್ಸನ್ ಮತ್ತು ಫೈಲ್ ನಂ>27ಎಂಡಿಎಲ್‍ಜಿ1> ಮೂಡಲಗಿ: ಪಟ್ಟಣದ ಪುರಸಭೆ ಆವರಣದಲ್ಲಿ ಪೌರ ಕಾರ್ಮಿಕರ ಅನಿರ್ದಿಷ್ಟಕಾಲ ಮುಷ್ಕರಕ್ಕೆ ಕರ್ನಾಟಕ ರಾಜ್ಯ ದಲ್ಲಿತ ಸಂಘರ್ಷ ಸಮೀತಿ ಬೆಂಬಲ ಸೂಚಿಸಿ ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.


Spread the love

About inmudalgi

Check Also

‘ಮಕ್ಕಳ ಶಿಕ್ಷಣ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಜವಾಬ್ದಾರಿ ಇದೆ”- ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ

Spread the love ಮೂಡಲಗಿ: ‘ಮಕ್ಕಳ ಶಿಕ್ಷಣ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಜವಾಬ್ದಾರಿಯು ಮುಖ್ಯವಾಗಿದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ