ಮಕ್ಕಳಿಗೆ ಸಂಸ್ಕಾರ ಕೊಡುವಲ್ಲಿ ತಾಯಿಯ ಪಾತ್ರ ಬಹು ಮುಖ್ಯ-ಗಿರೆಣ್ಣವರ.
ಮೂಡಲಗಿ: 10 ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಸಂಸ್ಕøತಿ ಕಲಿಸುವಲ್ಲಿ ತಾಯಿಯ ಪಾತ್ರ ಬಹಳÀ ಮುಖ್ಯವಾಗಿದೆ ಎಂದು ತುಕ್ಕಾನಟ್ಟಿಯ ಸರಕಾರಿ ಶಾಲೆಯ ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ ಹೇಳಿದರು.
ಅವರು ತಾಲುಕಿನ ತುಕ್ಕಾನಟ್ಟಿ ಸರಕಾರಿ ಶಾಲೆಯಲ್ಲಿ ಒಂದನೆಯ ತರಗತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಅಕ್ಷರ ಸಂಸ್ಕಾರ ಹಾಗೂ ತಾಯಂದಿರ ಸಭೆಯಲ್ಲಿ ಮಾತನಾಡಿ, ಇಂದಿನ ಅಧುನಿಕ ಯುಗದಲ್ಲಿ ಹಾಗೂ ತಂತ್ರಜ್ಞಾನ ಮುಂದುವರೆದ ನೆಪದಲ್ಲಿ ಶಿಕ್ಷಣವು ವ್ಯಾಪಾರಿಕರಣವಾಗುತ್ತಿರುವ ಸಂಧರ್ಭದಲ್ಲಿ ಈ ಶಾಲೆಯ ಒಂದನೆಯ ತರಗತಿಗೆ ದಾಖಲಾಗುವ ಮಕ್ಕಳಿಗೆ ಅಕ್ಷರ ಸಂಸ್ಕಾರ ಎಂಬ ವಿನೂತನ ಕಾರ್ಯಕ್ರಮ ಏರ್ಪಡಿಸಿ ತಾಯಂದಿರಿಂದಲೇ ಮಕ್ಕಳಿಗೆ ಅಕ್ಕಿಯಲ್ಲಿ ಓಂಕಾರ ಬರೆಯಿಸಿ ತಾಯಿ ಮಕ್ಕಳು ವಿದ್ಯಾದೇವತೆಗೆ ಪೂಜೆ ಸಲ್ಲಿಸಿ ಗುರುಬಳಗದಿಂದ ಆರತಿ ಮಾಡಿಸಿಕೊಂಡ ತಾಯಂದಿರು ಮಗುವಿನ ಶಿಕ್ಷಣದಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ ಎಂದರು.
ಅತಿಥಿಗಳಾಗಿದ್ದ ಗ್ರಾ.ಪಂ ಸದಸ್ಯೆ ಗಾಯತ್ರಿ ಬಾಗೇವಾಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅಕ್ಷರ ಸಂಸ್ಕಾರ ಕಾಯ್ಕ್ರಮದಲ್ಲಿ ತಾಯಂದಿರಿಗೆ ಶಿಕ್ಷಕರೇ ಆರತಿ ಮಾಡಿ, ಅವರ ಕಡೆಯಿಂದಲೇ ಮಕ್ಕಳ ಕೈ ಬರಹದಿಂದ ಓಂಕಾರ ಬರೆಯಿಸಿ, ಶಿಕ್ಷಣ ಆರಂಭದಲ್ಲಿಯೇ ತಾಯಿಯ ಕರ್ತವ್ಯವನ್ನು ಜ್ಞಾಪಿಸಿವುದರ ಜೊತೆಗೆ ಜನನಿ ತಾನೆ ಮೊದಲ ಗುರು ಎಂಬುದನ್ನು ಸಾರ್ಥಕಗೊಳಿಸಿದ್ದಾರೆ. ಎಂದರು.
ಶಿಕ್ಷಕ ಮಹಾದೇವ ಗೋಮಾಡಿ ಮಾತನಾಡಿ, ದಿನನಿತ್ಯ ಅಡುಗೆ ಮಾಡುವ ಅಕ್ಕ್ಕಿಯಲ್ಲಿಯೇ ವಿದ್ಯಾರ್ಥಿಗಳಿಂದ ಓಂಕಾರ ಬರೆಯಿಸಿ ಅಕ್ಷರ ಆರಂಭಕ್ಕೆ ತಾಯಿಯೇ ಮುನ್ನುಡಿ ಬರೆದು ಅದೇ ಅಕ್ಕಿಯಿಂದ ವಿದ್ಯಾರ್ಥಿಗಳಿಗೆ ಪಾಲಕರಿಗೆ ಅಡುಗೆ ಮಾಡಿ ಉಣಬಡಿಸಿ ಅಕ್ಷರ ಹಾಗೂ ಆಹಾರ ಎರಡಕ್ಕೂ ಪೂಜ್ಯನೀಯ ಸ್ಥಾನ ಕೊಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾದ ಯಲ್ಲವ್ವ ಬಿಳಿಗೌಡ್ರ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಯಿ ಮಕ್ಕಳಿಂದ ವಿದ್ಯಾದೇವತೆಗೆ ಪೂಜೆ ಸಲ್ಲಿಸಲಾಯಿತು ಹಾಗೂ ಗುರುಬಳಗ ತಾಯಂದಿರಿಗೆ ಆರತಿ ಮಾಡಿದರು .ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಿಹಿ ಊಟವನ್ನು ಬಡಿಸಲಾಯಿತು
ಕಾರ್ಯಕ್ರÀಮದಲ್ಲಿ ತುಕ್ಕಾನಟ್ಟಿ ಗ್ರಾ.ಪಂ ಉಪಾಧ್ಯಕ್ಷೆ ಯಲ್ಲವ್ವ ಬಿಳಿಗೌಡ್ರ, ಸದಸ್ಯೆ ಗಾಯತ್ರಿ ಬಾಗೇವಾಡಿ ಶಿಕ್ಷಕರಾದ ಪುಷ್ಪಾ ಭರಮದೆ, ಲಕ್ಷ್ಮೀ ಹೆಬ್ಬಾಳ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್ಲ, ಶೀಲಾ ಕುಲಕರ್ಣಿ, ರೂಪಾ ಗದಾಡಿ, ರೇಖಾ ಗದಾಡಿ, ಶಿವಲಿಲಾ ಹುಲಕುಂದ, ಖಾತೂನ ನದಾಫ, ಶಂಕರ ಲಮಾಣಿ, ಕಿರಣ ಭಜಂತ್ರಿ, ಮಹಾದೇವ ಗೋಮಾಡಿ, ಹೊಳೆಪ್ಪಾ ಗದಾಡಿ ಉಪಸ್ಥಿತರಿದ್ದರು,